ಈಶಾನ್ಯ ಭಾರತದ ಮಣಿಪುರದಲ್ಲಿ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವವ ಕ್ಷಮೆಯಾಚನೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಕೇಲವ ಕ್ಷಮೆಯಾಚಿಸಿದರೆ ಸಾಕಾಗುವುದಿಲ್ಲ, ಅವರು ರಾಜೀನಾಮೆ ನೀಡಬೇಕಿದೆ ಎಂದು ಹೇಳಿದೆ. ಸರ್ಕಾರವು ಸಂಪೂರ್ಣ ಸ್ಥಗಿತಗೊಂಡಿದೆ ಎಂಬುವುದನ್ನು ರಾಜ್ಯದ ಬಿಕ್ಕಟ್ಟು ಎತ್ತಿ ತೋರಿಸುತ್ತದೆ ಎಂದು ಪಕ್ಷವು ಹೇಳಿಕೆಯಲ್ಲಿ ಆರೋಪಿಸಿದೆ. ಸಿಎಂ ಬಿರೇನ್ ಸಿಂಗ್
“ರಾಜ್ಯ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ನಾಗರಿಕರನ್ನು ರಕ್ಷಿಸಲು ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ. ವ್ಯಾಪಕ ಸಾವು ನೋವು ಮತ್ತು ಅಭದ್ರತೆ ಉಂಟಾಗಿದೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ವ್ಯಕ್ತಪಡಿಸಿದ ಕ್ಷಮೆಯಾಚನೆಯು ಬಿಕ್ಕಟ್ಟಿನ ಗಂಭೀರತೆ ಮತ್ತು ರಾಜ್ಯದ ಜನರ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯವನ್ನು ಒಪ್ಪಿಕೊಂಡಂತೆ ಆಗಿದೆ,” ಎಂದು ಅದು ಹೇಳಿಕೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯ ಸರ್ಕಾರವು ಸಾಮರಸ್ಯಕ್ಕೆ ಬೇಕಾದ ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಸಿಪಿಐ ಆರೋಪಿಸಿದೆ. “ಸಮುದಾಯಗಳ ನಡುವೆ ಸಂವಾದವನ್ನು ಬೆಳೆಸಲು ಅಥವಾ ನಡೆಯುತ್ತಿರುವ ಬಿಕ್ಕಟ್ಟಿನಿಂದ ಉಂಟಾದ ಧೀರ್ಘವಾದ ಸಾಮಾಜಿಕ ಗಾಯಗಳನ್ನು ಗುಣಪಡಿಸಲು ಯಾವುದೇ ಸಕಾತಾತ್ಮಕ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಸಿಪಿಐ ಹೇಳಿಕೊಂಡಿದೆ.
ಬಿರೇನ್ ಸಿಂಗ್ ಸರ್ಕಾರವು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅಥವಾ ಸಮಗ್ರ ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಈ ಪಕ್ಷಗಳನ್ನು ತೊಡಗಿಸಿಕೊಳ್ಳಲು ಇಚ್ಛೆಯಿಲ್ಲ. ಅವರು ಕೇವಲ ಕ್ಷಮೆ ಕೇಳಿದರೆ ಸಾಲದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ, ಯಾಕೆಂದರೆ ಜವಾಬ್ದಾರಿಯುತ ಮತ್ತು ದೃಢವಾದ ಆಡಳಿತಕ್ಕೆ ಮಣಿಪುರದ ಜನರು ಅರ್ಹರಾಗಿದ್ದಾರೆ ಎಂದು ಸಿಪಿಐ ಹೇಳಿದೆ.
ಸರ್ಕಾರವು ವಿಶ್ವಾಸವನ್ನು ಮರುಸ್ಥಾಪಿಸಲು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಹೊಸ ಜನಕೇಂದ್ರಿತ ವಿಧಾನಕ್ಕೆ ದಾರಿ ಮಾಡಿಕೊಡಲು ಅವರು ರಾಜೀನಾಮೆ ನೀಡಬೇಕಾಗಿದೆ ಎಂದು ಪಕ್ಷವೂ ಹೇಳಿದೆ. ಸಿಎಂ ಬಿರೇನ್ ಸಿಂಗ್
2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಿಂದ ರಾಜ್ಯದ ಸುಮಾರು 250 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಜೊತೆಗೆ ಸಾವಿರಾರು ಜನರನ್ನು ನಿರಾಶ್ರಿತರಾಗಿದ್ದಾರೆ. ಅದಾಗಿ ಸುಮಾರು ಒಂದುವರೆ ವರ್ಷಗಳ ನಂತರ ಸಿಎಂ ಬಿರೇನ್ ಸಿಂಗ್ ಕಳೆದ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಹಿಂದಿನ ತಪ್ಪುಗಳನ್ನು ಮರೆತು ಕ್ಷಮಿಸಿ ಮತ್ತು ಹೊಸದಾಗಿ ಪ್ರಾರಂಭಿಸಲು ಎಲ್ಲಾ ಸಮುದಾಯಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ : ಮಹಿಳಾ ಅಧಿಕಾರಿಗಳ ಎಸ್‌ಐಟಿ ರಚಿಸಿದ ಮದ್ರಾಸ್ ಹೈಕೋರ್ಟ್, ₹25 ಲಕ್ಷ ಪರಿಹಾರ ನೀಡಲು ಸೂಚನೆ


