ಹೊಸ ವರ್ಷಾಚರಣೆ ವೇಳೆ ಅನೇಕ ಕನ್ನಡ ಟಿವಿ ಚಾನೆಲ್‌ಗಳು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ನಡುವೆ ರಿಪಬ್ಲಿಕ್ ಕನ್ನಡ ಟಿವಿ ವರದಿಗಾರ ಕ್ಯಾಮೆರಾ ಮುಂದೆಯೆ ಯುವಕರೊಬ್ಬರಿಗೆ ಜನಾಂಗಿಯ ನಿಂದನೆ ಮಾಡಿದ್ದಾರೆ.
ಹೊಸವರ್ಷದ ಆಚರಣೆ ವೇಳೆ ಕನ್ನಡದ ಪ್ರಮುಖ ಸುದ್ದಿ ವಾಹಿನಿಗಳು ಬೆಂಗಳೂರಿನ ಎಂಜಿ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದ ಪಬ್‌ಗಳು ಮತ್ತು ಬಾರ್‌ಗಳಿಂದ ಯುವಕ, ಯುವತಿಯರು ನಿರ್ಗಮಿಸುವ ವೀಡಿಯೊಗಳನ್ನು ಪ್ರಸಾರ ಮಾಡಿತ್ತು. ಜೊತೆಗೆ ಅದಕ್ಕೆ ಕೆಟ್ಟದಾಗಿ ಶೀರ್ಷಿಕೆ ಹಾಕಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ಪ್ರಸಾರ ಮಾಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಮಧ್ಯೆ, ರಿಪಬ್ಲಿಕ್ ಕನ್ನಡ ಟಿವಿ ವರದಿಗಾರ ಅಶ್ವ ದಿವಿತ್ ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಸೇರಿದ್ದ ಜನರೊಂದಿಗೆ ಹೊಸ ವರ್ಷಾಚರಣೆಯ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಈ ವೇಳೆ ಯುವಕನೊಬ್ಬ, ಸಿನಿಮಾ ಡೈಲಾಗ್ ಒಂದನ್ನು ಹೇಳುತ್ತಾ, ಏನ್ರಿ ಮೀಡಿಯಾ ಎಂದು ರಿಪಬ್ಲಿಕ್ ಕನ್ನಡ ಟಿವಿ ಮೈಕ್ ಮುಂದೆ ಕೇಳಿದ್ದಾರೆ. ಈ ವೇಳೆ ಅಸಮಾಧಾನದಿಂದ ಮಾತನಾಡಿದ ವರದಿಗಾರ ಅಶ್ವ ದಿವಿತ್, ”ಹೋಗೋ ಕರಿಯ ಹೋಗ್…” ಎಂದು ಕ್ಯಾಮೆರಾ ಮುಂದೆಯೆ ಎರೆಡೆರೆದು ಭಾರಿ ಹೇಳಿ, ಯುವಕನ ಜನಾಂಗೀಯ ನಿಂದನೆ ಮಾಡಿದ್ದಾರೆ.
ಈ ವಿಡಿಯೊವನ್ನು ರಿಪಬ್ಲಿಕ್ ಕನ್ನಡ ಟಿವಿ ತನ್ನ ಯೂಟ್ಯೂಬ್‌ನಲ್ಲಿ ಹಾಗೆ ಪ್ರಸಾರ ಮಾಡಿದ್ದು, ಅದನ್ನು ಹಾಗೆಯೆ ಉಳಿಸಿಕೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಆಕ್ರೋಶ ಕೂಡಾ ವ್ಯಕ್ತವಾಗಿದೆ.
ಕ್ಯಾಮೆರಾ ಮುಂದೆಯೆ ಯುವಕನಿಗೆ ಜನಾಂಗೀಯ ನಿಂದನೆ ಮಾಡಿದ ರಿಪಬ್ಲಿಕ್ ಕನ್ನಡ ವರದಿಗಾರ
ವಿಡಿಯೊ + ಸುದ್ದಿ ➣➣ https://t.co/S6kxzviIRy
ನಾನುಗೌರಿ ವಾಟ್ಸಾಪ್ ಗುಂಪಿಗೆ ಸೇರಿ➣➣ https://t.co/hUuHv0Efs2 pic.twitter.com/vNPiNOJVf3
— Naanu Gauri (@naanugauri) January 4, 2025
ಗೌಡ್ರು ಸರ್ಕಾರ ಎಂಬ ಟ್ವಿಟರ್ ಖಾತೆಯೊಂದು, “ಏನ್ರಿ ಮೀಡಿಯಾ ಅಂದಿದ್ದಕ್ಕೆ ಅಷ್ಟೊಂದು ಕೋಪ ಬಂತಾ? ಪ್ರತಿಷ್ಠಿತ ಸಂಸ್ಥೆಯ ನ್ಯೂಸ್ ರಿಪೋರ್ಟರ್ ಒಬ್ಬ ಯುವಕನಿಗೆ ನೇರವಾಗಿ ಹೋಗೋ ಕರಿಯಾ ಎಂದು ಜನಾಂಗೀಯ ನಿಂದನೆ ಮಾಡುತ್ತಿದ್ದಾನೆ, ಹಾಗಾದರೆ ಅವನ ಮೇಲೆ ಕ್ರಮ ಕೈಗೊಳ್ಳಬಾರದೇಕೆ?” ಎಂದು ಪ್ರಶ್ನಿಸಿದ್ದಾರೆ.
ಏನ್ರಿ ಮೀಡಿಯಾ ಅಂದಿದ್ದಕ್ಕೆ ಅಷ್ಟೊಂದು ಕೋಪ ಬಂತಾ?
ಪ್ರತಿಷ್ಠಿತ ಸಂಸ್ಥೆಯ ನ್ಯೂಸ್ ರಿಪೋರ್ಟರ್ ಒಬ್ಬ ಯುವಕನಿಗೆ ನೇರವಾಗಿ ಹೋಗೋ ಕರಿಯಾ ಎಂದು ಜನಾಂಗೀಯ ನಿಂದನೆ ಮಾಡುತ್ತಿದ್ದಾನೆ, ಹಾಗಾದರೆ ಅವನ ಮೇಲೆ ಕ್ರಮ ಕೈಗೊಳ್ಳಬಾರದೇಕೆ? pic.twitter.com/M8FnRxoUGo
— Goudrusarkar – ಗೌಡ್ರುಸರ್ಕಾರ್ (@Gs_0107) January 1, 2025
ಇಷ್ಟೆ ಅಲ್ಲದೆ, ಕನ್ನಡದ ಇತರ ಟಿವಿ ಮಾಧ್ಯಮಗಳು, ಹೊಸ ವರ್ಷಾಚರಣೆ ಮಾಡುತ್ತಿದ್ದ ಯುವತಿಯರ ದೇಹದ ಮೇಲೆ ಕ್ಯಾಮರಾವನ್ನು ಜೂಮ್ ಮಾಡಿ, ಅದರಕ್ಕೆ ಅಶ್ಲೀಲ ಶೀರ್ಷಿಕೆಯನ್ನು ಹಾಕಿ ಪ್ರಸಾರ ಮಾಡಿವೆ. ಈ ಬಗ್ಗೆ ಸರ್ಕಾರ ಯಾವುದೆ ಪ್ರತಿಕ್ರಿಯೆ ನೀಡಿಲ್ಲ, ದೂರು ಕೂಡಾ ದಾಖಲಾಗಿಲ್ಲ. ಅಲ್ಲದೆ, ಮಹಿಳಾ ಆಯೋಗ ಮತ್ತು ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡುವ ಯಾವುದೆ ಪ್ರಾಧಿಕಾರಗಳು ಪ್ರತಿಕ್ರಿಯೆ ನೀಡಿಲ್ಲ.
ಕನ್ನಡ ಮಾಧ್ಯಮಗಳ ಈ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ತಜ್ಞರು, “ಸಾರ್ವಜನಿಕ ಪ್ರದೇಶದಲ್ಲಿ ಚಿತ್ರೀಕರಿಸಲು ಯಾವುದೇ ಕಾನೂನು ನಿರ್ಬಂಧವಿಲ್ಲದಿದ್ದರೂ, ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಖಾಸಗಿ ವ್ಯಕ್ತಿಯ ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡಿದರೆ ಕಾನೂನು ವಿರೋಧಿಯಾಗಿದೆ” ಎಂದು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79, ಮಹಿಳೆಯ ಗೌಪ್ಯತೆಯ ಉಲ್ಲಂಘನೆ ಮಾಡಿ ಅವಮಾನಿಸಿದರೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡದ ಕಠಿಣ ಶಿಕ್ಷೆಯಿದೆ.
ಇದನ್ನೂಓದಿ: ನಾಯಿ ಮೇಲೆ ಕಸ ಎಸೆದ ಆರೋಪ: ದಲಿತ ಮಹಿಳೆ, ಪುತ್ರಿಯನ್ನು ರಸ್ತೆಯಲ್ಲಿ ದರದರ ಎಳೆದಾಡಿ, ಹಲ್ಲೆ
ನಾಯಿ ಮೇಲೆ ಕಸ ಎಸೆದ ಆರೋಪ: ದಲಿತ ಮಹಿಳೆ, ಪುತ್ರಿಯನ್ನು ರಸ್ತೆಯಲ್ಲಿ ದರದರ ಎಳೆದಾಡಿ, ಹಲ್ಲೆ


