ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಿಚ್ಡಾ(ಹಿಂದುಳಿದ), ದಲಿತ ಮತ್ತು ಧಾರ್ಮಿಕ ಅಲ್ಪಸಂಖ್ಯಾತ (ಪಿಡಿಎ) ಮತಗಳನ್ನು ತನ್ನ ಬುಟ್ಟಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸಮಾಜ ವಾದಿ ಪಕ್ಷವು ರಾಜ್ಯಾದ್ಯಂತ ಪಿಡಿಎ ಸಮುದಾಯಗಳ ಸಭೆಗಳನ್ನು ಸಂಘಟಿಸುವ ಮೂಲಕ 2027 ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ
ಪಕ್ಷವು ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ ಐದು ಸಭೆಗಳನ್ನು ಆಯೋಜಿಸಲು ಯೋಜಿಸಿದೆ. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಶ್ಯಾಮ್ ಲಾಲ್ ಪಾಲ್ ಅವರಿಗೆ ಪಂಚಾಯಿತಿಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು TNIE ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಮಾಜವಾದಿ ಪಕ್ಷವು 2027 ರ ಚುನಾವಣೆಗೆ ಪಿಡಿಎ ಸಮುದಾಯವು ಪ್ರಮುಖ ಮತಬ್ಯಾಂಕ್ ಆಗಿರುವ ಹಿನ್ನಲೆ, ಜಾತಿ ಗಣತಿಗಾಗಿ ಪಕ್ಷದ ಬೇಡಿಕೆಯನ್ನು ಮತ್ತಷ್ಟು ಮುನ್ನಲೆಗೆ ತರಲು ಮುಂದಾಗಿದೆ. ಉತ್ತರ ಪ್ರದೇಶ
“ಜಾತಿ ಆಧಾರಿತ ಜನಗಣತಿಯು ಯಾವತ್ತಿಗೂ ಸಮಾಜದ ಸಾಮಾಜಿಕ ಸ್ಥಾನಮಾನವನ್ನು ಸ್ಪಷ್ಟಪಡಿಸುತ್ತದೆ. ಅದು ಪ್ರತಿ ಸಮಾಜದ ಪಾಲನ್ನು ಪ್ರತಿಬಿಂಬಿಸುತ್ತದೆ ಮತ್ತು ಸಮುದಾಯಗಳ ಪ್ರಾತಿನಿಧ್ಯ ಏನಾಗಿರಬೇಕು ಎಂಬುದನ್ನು ತಿಳಿಸುತ್ತದೆ. ತಳಮಟ್ಟದಲ್ಲಿರುವ ವರ್ಗದ ಸಾಮಾಜಿಕ ನ್ಯಾಯಕ್ಕಾಗಿ ನಾವು ನಮ್ಮ ಚಳವಳಿಯನ್ನು ಮುಂದುವರಿಸುತ್ತೇವೆ” ಎಂದು ಹಿರಿಯ ಸಮಾಜವಾದಿ ಪಕ್ಷದ ನಾಯಕ ಹೇಳಿದ್ದಾರೆ.
ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ತನ್ನ ಸಂಪರ್ಕವನ್ನು ಹೆಚ್ಚಿಸಿಕೊಂಡು ಸಮಾಜವಾದಿ ಪಕ್ಷವೂ ಒಂದು ತಿಂಗಳ ಅವಧಿಯ “ಪಿಡಿಎ ಚರ್ಚಾ” ಕಾರ್ಯಕ್ರಮವನ್ನು ಪ್ರಾರಂಭಿಸಿವೆ. ಪಕ್ಷವು ತನ್ನ ನಾಯಕರ ಭಾಷಣಗಳಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಪರಂಪರೆಯನ್ನು ಶ್ಲಾಘಿಸುವುದರ ಮೇಲೆ ತನ್ನ ಪಿಡಿಎ ಪ್ರಚಾರವನ್ನು ಕೇಂದ್ರೀಕರಿಸಿದೆ ಎಂದು ವರದಿ ಹೇಳಿದೆ.
ಇದನ್ನೂಓದಿ: ಪಿತಾಂಪುರ್ ಪ್ರತಿಭಟನೆ ಹಿನ್ನಲೆ | ಭೋಪಾಲ್‌ನ ವಿಷಕಾರಿ ತ್ಯಾಜ್ಯ ದಹನ ಸ್ಥಗಿತ
ಪಿತಾಂಪುರ್ ಪ್ರತಿಭಟನೆ ಹಿನ್ನಲೆ | ಭೋಪಾಲ್‌ನ ವಿಷಕಾರಿ ತ್ಯಾಜ್ಯ ದಹನ ಸ್ಥಗಿತ


