ದೇಶದ ರಾಜಧಾನಿ ದೆಹಲಿಯಲ್ಲಿರುವ ಇಂಡಿಯಾ ಗೇಟ್ ಅನ್ನು “ಭಾರತ್ ಮಾತಾ ದ್ವಾರ” ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ, ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಮೋದಿ ನೇತೃತ್ವದ ಸರ್ಕಾರವು “ಮೊಘಲ್ ಆಕ್ರಮಣಕಾರರು” ಮತ್ತು “ಬ್ರಿಟಿಷ್ ದರೋಡೆಕೋರರಿಂದ” ಉಂಟಾದ ಗಾಯಗಳನ್ನು ಸರಿಪಡಿಸಲು ಕೆಲಸ ಮಾಡಿದೆ ಎಂದು ಸಿದ್ದಿಕಿ ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದು, ಇದು ಗುಲಾಮಗಿರಿಯ ಕಳಂಕಗಳನ್ನು ಅಳಿಸಿ ದೇಶವನ್ನು ಸಂತೋಷಪಡಿಸಿದೆ ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇಂಡಿಯಾ ಗೇಟ್ ಅನ್ನು ಭಾರತ್ ಮಾತಾ ದ್ವಾರ ಎಂದು ಮರುನಾಮಕರಣ ಮಾಡುವುದು ಅತ್ಯುನ್ನತ ತ್ಯಾಗ ಮಾಡಿದ ಮತ್ತು ಗೇಟ್ ಮೇಲೆ ಹೆಸರುಗಳಿರುವ ಸಾವಿರಾರು ದೇಶಭಕ್ತರಿಗೆ ಮಾಡುವ ನಿಜವಾದ ಗೌರವವಾಗಿದೆ” ಎಂದು ಅವರು ಹೇಳಿದ್ದಾರೆ.
ಮೋದಿ ಸರ್ಕಾರವು ಔರಂಗಜೇಬ್ ಅವರ ಹೆಸರಿನ ರಸ್ತೆಯನ್ನು ಎಪಿಜೆ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಿದೆ ಮತ್ತು ಇಂಡಿಯಾ ಗೇಟ್‌ನಲ್ಲಿರುವ ಕಿಂಗ್ ಜಾರ್ಜ್ V ರ ಪ್ರತಿಮೆಯ ಬದಲಿ ಸುಭಾಸ್ ಚಂದ್ರ ಬೋಸ್ ಅವರ ಪ್ರತಿಮೆಗೆ ಬದಲಾಯಿಸಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ರಾಜ್ ಪಥ್ ಅನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಲಾಗಿದ್ದು, ಅದನ್ನು ಭಾರತೀಯ ಸಂಸ್ಕೃತಿಯೊಂದಿಗೆ ಜೋಡಿಸಲಾಗಿದೆ. ಇದೀಗ ಭಾರತ್ ಮಾತಾ ದ್ವಾರ ಎಂಬ ಹೆಸರನ್ನು ಇದೇ ಧಾಟಿಯಲ್ಲಿ ಇಂಡಿಯಾ ಗೇಟ್‌ಗೆ ನೀಡಬಹುದು ಎಂದು ಹೇಳಿದ್ದಾರೆ.
ಇದನ್ನೂಓದಿ: ಮಣಿಪುರ ಅಂತಿಮ ಮತದಾರರ ಪಟ್ಟಿ; ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು
ಮಣಿಪುರ ಅಂತಿಮ ಮತದಾರರ ಪಟ್ಟಿ; ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು


