ನಾಲ್ಕು ಮಕ್ಕಳನ್ನು ಹೊಂದುವ ಬ್ರಾಹ್ಮಣ ದಂಪತಿಗಳಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರದ ಬ್ರಾಹ್ಮಣ ಕಲ್ಯಾಣ ಮಂಡಳಿಯಾದ ‘ಪರಶುರಾಮ ಕಲ್ಯಾಣ ಮಂಡಳಿ’ಯ ಅಧ್ಯಕ್ಷರಾಗಿರುವ ಪಂಡಿತ್ ವಿಷ್ಣು ರಾಜೋರಿಯಾ ಘೋಷಿಸಿದ್ದಾರೆ. ಮಧ್ಯಪ್ರದೇಶದ ರಾಜ್ಯ ಕ್ಯಾಬಿನೆಟ್ ಸಚಿವ ಸ್ಥಾನ ಹೊಂದಿರುವ ರಾಜೋರಿಯಾ ಅವರು ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಈ ಘೋಷಣೆ ಮಾಡಿದ್ದಾರೆ. ನಾಲ್ಕು ಮಕ್ಕಳನ್ನು ಹೊಂದುವ
ಸಮಾಜದಲ್ಲಿರುವ ಯುವಕರು ಕನಿಷ್ಠ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು, ಇಲ್ಲದಿದ್ದರೆ ಹಿಂದೂಯೇತರರು ದೇಶವನ್ನು ಆಳುತ್ತಾರೆ ಎಂದು ಅವರು ಹೇಳಿದ್ದು, ಬ್ರಾಹ್ಮಣ ಸಮಾಜದಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಈ ವಿಶಿಷ್ಟ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಾಲ್ಕು ಮಕ್ಕಳನ್ನು ಹೊಂದುವ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ನಮ್ಮ ಕುಟುಂಬಗಳ ಮೇಲೆ ಗಮನಹರಿಸುವುದನ್ನು ಪೂರ್ಣವಾಗಿ ನಿಲ್ಲಿಸಿರುವುದರಿಂದ” “ಧರ್ಮದ್ರೋಹಿ”ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ನನಗೆ ಯುವಕರ ಬಗ್ಗೆ ಭರವಸೆಯಿದೆ, ಆದರೆ ಹಿರಿಯರಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಎಚ್ಚರಿಕೆಯಿಂದ ಕೇಳಿ, ಭವಿಷ್ಯದ ಪೀಳಿಗೆಯ ರಕ್ಷಣೆಗೆ ನೀವು ಜವಾಬ್ದಾರರು. ಯುವಕರು ಸೆಟಲ್ ಆಗಿ ಒಂದು ಮಗುವಿಗೆ ಜನ್ಮ ನೀಡಿ ನಂತರ ನಿಲ್ಲುತ್ತಾರೆ. ಇದು ತುಂಬಾ ಸಮಸ್ಯಾತ್ಮಕ ವಿಚಾರವಾಗಿದೆ. ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ನಂತರ ಅವರು ಪರಶುರಾಮ ಮಂಡಳಿಯು ನಾಲ್ಕು ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ 1 ಲಕ್ಷ ರೂ. ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದ್ದಾರೆ. “ನಾನು ಮಂಡಳಿಯ ಅಧ್ಯಕ್ಷನಾಗಿರಲಿ ಅಥವಾ ಇಲ್ಲದಿರಲಿ, ಪ್ರಶಸ್ತಿಯನ್ನು ನೀಡಲಾಗುವುದು.” ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ನಂತರ ಪ್ರತಿಕ್ರಿಯಿಸಿರುವ ರಾಜೋರಿಯಾ ಅವರು, ತಾನು ಮಾಡಿರುವ ಘೋಷಣೆ “ವೈಯಕ್ತಿಕ ಉಪಕ್ರಮ”ವಾಗಿದ್ದು, ಸರ್ಕಾರಿ ಉಪಕ್ರಮವಲ್ಲ ಎಂದು ಹೇಳಿದ್ದಾರೆ. “ಇದು ಸಮುದಾಯ ಕಾರ್ಯಕ್ರಮದಲ್ಲಿ ಮಾಡಿದ ನನ್ನ ಸಾಮಾಜಿಕ ಕಳಕಳಿಯ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂಓದಿ: ಅವಧಿ ಮೀರಿದ ಔಷಧ ಬಳಕೆ – 1 ಸಾವು; ಮೂವರು ಬಾಣಂತಿಯರು ಗಂಭೀರ


