ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ರಾಜ್ಯ ಸರ್ಕಾರದ ಏಳು ಸಚಿವರಿಗೆ ಪತ್ರ ಬರೆದಿದ್ದು, ಪಾವತಿಗೆ ಬಾಕಿ ಇರುವ 32,000 ಕೋಟಿ ರೂಪಾಯಿ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಹೆಚ್.ಸಿ. ಮಹದೇವಪ್ಪ, ಝಮೀರ್ ಅಹ್ಮದ್ ಖಾನ್, ಎನ್.ಎಸ್. ಬೋಸರಾಜು, ದಿನೇಶ್ ಗುಂಡೂರಾವ್ ಮತ್ತು ರಹೀಮ್ ಖಾನ್ ಅವರಿಗೆ ಬರೆದ ಪತ್ರದಲ್ಲಿ, ಬಾಕಿ ಪಾವತಿ ವಿಳಂಬದ ಬಗ್ಗೆ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಪರಿಸ್ಥಿತಿಯನ್ನು ಅನ್ಯಾಯ ಎಂದಿರುವ ಸಂಘವು, ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಬಾಕಿ ಪಾವತಿಗಾಗಿ ಪದೇ ಪದೇ ವಿನಂತಿಸಿದರೂ ಅಧಿಕಾರಿಗಳು ಮತ್ತು ಸಚಿವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಚಿವರನ್ನು ಭೇಟಿ ಮಾಡುವಂತೆ ಹೇಳುತ್ತಾರೆ. ಸಚಿವರೂ ಕೂಡ ಸಮಸ್ಯೆ ಪರಿಹರಿಸಲು ವಿಫಲರಾಗಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಪತ್ರವನ್ನು ಸ್ವೀಕರಿಸಿದ ಏಳು ದಿನಗಳಲ್ಲಿ ಸಮಸ್ಯೆ ಪರಿಹರಿಸಲು ಸಭೆ ಕರೆಯಬೇಕು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ವಿಷಯ ಮುಟ್ಟಿಸಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ವಿವರಿಸಿದೆ.
ಬರೋಬ್ಬರಿ 14,000 ಕೋಟಿ ರೂ.ಗಳನ್ನು ನೀರಾವರಿ ಇಲಾಖೆಯೇ ಬಾಕಿ ಉಳಿಸಿಕೊಂಡಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಕಮಿಷನ್ ಪಾವತಿ ಮಾಡಿದ ನಂತರವೇ ಗುತ್ತಿಗೆಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಗುತ್ತಿಗೆದಾರರ ಮೇಲೆ ಹೊರೆ ಬೀಳುತ್ತಿದೆ ಎಂದು ಸಂಘದ ಮಧ್ಯಂತರ ಅಧ್ಯಕ್ಷ ಜಗನಾಥ್ ಶೇಗ್ಜಿ ಆರೋಪಿಸಿದ್ದಾರೆ. ಗುತ್ತಿಗೆ ಕೆಲಸದಲ್ಲಿ ಭ್ರಷ್ಟಾಚಾರ ಮುಂದುವರಿದಿದ್ದರೂ, ಈಗ ಅದು ಪ್ರಧಾನವಾಗಿ ಮಂತ್ರಿಗಳಿಗಿಂತ ಶಾಸಕರನ್ನು ಒಳಗೊಂಡಿದೆ. ಸುಮಾರು 70% ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಶೇಗ್ಜಿ ಆರೋಪಿಸಿದ್ದಾಗಿ ಎಂದು ವರದಿ ಹೇಳಿದೆ.
ಬಾಕಿ ಪಾವತಿಗಳಲ್ಲಿ 14,000 ಕೋಟಿ ರೂ.ಗಳನ್ನು ನೀರಾವರಿ ಇಲಾಖೆಯೇ ಬಾಕಿ ಉಳಿಸಿಕೊಂಡಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಕಮಿಷನ್ ಪಾವತಿ ಮಾಡಿದ ನಂತರವೇ ಗುತ್ತಿಗೆಗಳನ್ನು ನೀಡಲಾಗುತ್ತಿದೆ, ಇದರಿಂದಾಗಿ ಗುತ್ತಿಗೆದಾರರ ಮೇಲೆ ಹೊರೆ ಬೀಳುತ್ತಿದೆ ಎಂದು ಮಧ್ಯಂತರ ಅಧ್ಯಕ್ಷ ಜಗನಾಥ್ ಶೇಗ್ಜಿ ಆರೋಪಿಸಿದ್ದಾರೆ. ಗುತ್ತಿಗೆ ಕೆಲಸಗಳಲ್ಲಿ ಭ್ರಷ್ಟಾಚಾರ ಮುಂದುವರಿದಿದ್ದರೂ, ಈಗ ಅದರಲ್ಲಿ ಪ್ರಧಾನವಾಗಿ ಮಂತ್ರಿಗಳ ಬದಲು ಶಾಸಕರು ಭಾಗಿಯಾಗಿದ್ದಾರೆ, ಸುಮಾರು 70% ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಶೇಗ್ಜಿ ಹೇಳಿದ್ದಾರೆ.
ಶೇಗ್ಜಿ ಅವರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಶಾಸಕರ ನಿರ್ದಿಷ್ಟ ಹೆಸರುಗಳನ್ನು ಕೇಳಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕತ್ವದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಿ – ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ


