Homeಮುಖಪುಟಸೌದಿ ಅರೇಬಿಯಾ ಉದ್ಯೋಗ ವೀಸಾ : ಭಾರತೀಯ ಕಾರ್ಮಿಕರಿಗೆ ಕಠಿಣ ನಿಯಮಗಳು ಜಾರಿ

ಸೌದಿ ಅರೇಬಿಯಾ ಉದ್ಯೋಗ ವೀಸಾ : ಭಾರತೀಯ ಕಾರ್ಮಿಕರಿಗೆ ಕಠಿಣ ನಿಯಮಗಳು ಜಾರಿ

- Advertisement -
- Advertisement -

ಸೌದಿ ಅರೇಬಿಯಾದ ಉದ್ಯೋಗ ವೀಸಾಕ್ಕೆ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವ ಭಾರತೀಯ ಕಾರ್ಮಿಕರು ವೃತ್ತಿಪರ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗಿದೆ. ಜನವರಿ 14 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.

ಸೌದಿ ಅರೇಬಿಯಾದಲ್ಲಿ ಬಾಂಗ್ಲಾದೇಶದ ನಂತರ ಭಾರತೀಯರು ಎರಡನೇ ಅತಿದೊಡ್ಡ ವಲಸಿಗ ಸಮುದಾಯವಾಗಿದ್ದು, 2.4 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಆರು ತಿಂಗಳ ಹಿಂದೆ ಪ್ರಸ್ತಾಪಿಸಲಾದ ಈ ನಿಯಮಗಳು, ಸೀಮಿತ ಸಂಖ್ಯೆಯ ಅರ್ಹ ತರಬೇತಿ ಕೇಂದ್ರಗಳಿಂದಾಗಿ ಭಾರತೀಯ ಕಾರ್ಮಿಕರ ಒಳಹರಿವನ್ನು ಕಡಿಮೆ ಮಾಡಿ, ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ವಿಷನ್-2030ಗೆ ಅನುಗುಣವಾಗಿ ಸೌದಿ ಅರೇಬಿಯವು ಕಾರ್ಮಿಕ ವಲಯದಲ್ಲಿ ಹಲವು ಸುಧಾರಣೆಗಳನ್ನು ತರಲು ಮುಂದಾಗಿದೆ. ಈ ಪೈಕಿ ವಲಸಿಗರಿಗೆ ಉದ್ಯೋಗ ಒಪ್ಪಂದ (Employment Contract) ಮಾಡಿಕೊಳ್ಳಲು ಸುಲಭ ವ್ಯವಸ್ಥೆ ಮಾಡಿಕೊಡುವುದು ಮತ್ತು ಕೆಲವು ಉದ್ಯೋಗಗಳಿಗೆ ಕಠಿಣ ಪ್ರಮಾಣೀಕರಣ ಜಾರಿಗೊಳಿಸುವುದು ಸೇರಿದೆ.

ಭಾರತದಲ್ಲಿನ ಸೌದಿ ಮಿಷನ್ ಹೊರಡಿಸಿದ ಸುತ್ತೋಲೆಯ ಪ್ರಕಾರ ಉದ್ಯೋಗ ವೀಸಾಗಳನ್ನು ನೀಡುವ ವೃತ್ತಿಪರ ಪರಿಶೀಲನಾ ಕಾರ್ಯವಿಧಾನಗಳು ಜನವರಿ 14 ರಿಂದ ಜಾರಿಗೆ ಬರಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಆದ್ದರಿಂದ, ಉದ್ಯೋಗ ವೀಸಾಗಳನ್ನು ನೀಡಲು ವೃತ್ತಿಪರ ಪರಿಶೀಲನೆಯು ಕಡ್ಡಾಯ ಅವಶ್ಯಕತೆಗಳಲ್ಲಿ ಒಂದಾಗಲಿದೆ ಎಂದು ಅದು ಹೇಳಿದೆ.

ಸೌದಿ ಅರೇಬಿಯವು ವಲಸಿಗರು ತಮ್ಮ ಇಕಾಮಾ ಅಥವಾ ರೆಸಿಡೆನ್ಸಿ ಪರ್ಮಿಟ್ಸ್‌ ಅನ್ನು ನವೀಕರಿಸುವುದು ಮತ್ತು ನಿರ್ಗಮನ ಮತ್ತು ಮರು-ಪ್ರವೇಶ ವೀಸಾಗಳನ್ನು ( exit and re-entry visas) ವಿಸ್ತರಿಸುವುದಕ್ಕಾಗಿ ನಿಯಮಗಳನ್ನು ಬದಲಾಯಿಸಿದೆ.

ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸೌದಿ ಅರೇಬಿಯಾದ ಪಾಸ್‌ಪೋರ್ಟ್‌ ಜನರಲ್ ಡೈರೆಕ್ಟರೇಟ್, “ವಲಸಿಗರ ಅವಲಂಬಿತರು ಮತ್ತು ದೇಶದ ಹೊರಗೆ ಇರುವ ಗೃಹ ಕಾರ್ಮಿಕರು ಈಗ ತಮ್ಮ ಇಕಾಮಾವನ್ನು ನವೀಕರಿಸಬಹುದು” ಎಂದು ಘೋಷಿಸಿದೆ.

ಸೌದಿಯ ಹೊರಗಿನ ವಲಸಿಗರು ಏಕ ಅಥವಾ ಬಹು ನಿರ್ಗಮನ ಮತ್ತು ಮರು-ಪ್ರವೇಶ ವೀಸಾಗಳ ಅವಧಿಯನ್ನು ವಿಸ್ತರಿಸಬಹುದು.

ಡಿಯಾಗೋ ಗಾರ್ಸಿಯಾ ದ್ವೀಪದ ಬಳಿ ಭಾರತೀಯ ಮೀನುಗಾರರನ್ನು ಬಂಧಿಸಿದ ಬ್ರಿಟಿಷ್ ನೌಕಾಪಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಹೋರಾಟಕ್ಕೆ ಬೆಂಬಲ: ಫ್ರೀಡಂಪಾರ್ಕ್ನಲ್ಲಿ ಎಡ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು, ಅ.10: ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಶನಿವಾರ ಎಐಡಿಎಸ್‌ಒ, ಕೆವಿಎಸ್, ಎಐಎಸ್‌ಎಫ್, ಎಸ್‌ಎಫ್‌ಐ, ಎಐಎಸ್‌ಎ ಸೇರಿದಂತೆ ಇನ್ನಿತರೆ ಎಡ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ...

ಕೋರ್ಟ್ ಆದೇಶ ಉಲ್ಲಂಘಿಸಿ ದೆಹಲಿಯ ಮೆಟ್ರೋ ನಿಲ್ದಾಣಗಳು ಬಂದ್, ರೈಲು ರದ್ದು : ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿವಿಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ಇಂದು (ಅ.10) ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿವೆ. ಪೊಲೀಸರು...

ಸಿಜೆಪಿ ಪ್ರತಿಭಟನೆಗೆ ದೆಹಲಿ ಸ್ತಬ್ಧ: ಗುರುದ್ವಾರದಲ್ಲಿ ಆಶ್ರಯ ಪಡೆದ ಪ್ರತಿಭಟನಾಕಾರರು, ಜಿರಳೆ ಆಂಟೆನಾ ಹೆಲ್ಮೆಟ್ ಧರಿಸಿ ವಿನೂತನ ಪ್ರತಿರೋಧ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ‘ಜಿರಳೆ ಜನತಾ ಪಾರ್ಟಿ’ (ಸಿಜೆಪಿ) ಮತ್ತು ಅದರ ಬೆಂಬಲಿಗರನ್ನು ತಡೆಯಲು ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆ...

ಬೆಂಗಳೂರಿನಲ್ಲಿ ಎಸ್ಐಆರ್ ವಿರೋಧಿ ಪ್ರತಿಭಟನೆ: ವಿದ್ಯಾರ್ಥಿ ಸಂಘಟನೆಗಳ ನಾಯಕರ ಬಂಧನ: ಕಾಂಗ್ರೆಸ್ ಸರ್ಕಾರದ ದ್ವಂದ್ವ ನಿಲುವಿನ ವಿರುದ್ಧ ಆಕ್ರೋಶ

ಕರ್ನಾಟಕದಲ್ಲಿ ಎಸ್‌ಐಆರ್ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳು ಮತ್ತು ಯುವಕರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿರುವುದು ಕಾಂಗ್ರೆಸ್ ಸರ್ಕಾರದ ಪ್ರಜಾಸತ್ತಾತ್ಮಕ ಮುಖವಾಡವನ್ನು ಬಯಲುಮಾಡಿದೆ ಎಂದು ಎಐಎಸ್‌ಎ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಬಿಜೆಪಿಯ ದಮನಕಾರಿ...

ಸಿಜೆಪಿ ಪ್ರತಿಭಟನೆಗೆ ಬೆಂಬಲ: ಸಿಪಿಐ(ಎಂ) ನಾಯಕರು, ತುಷಾರ್ ಗಾಂಧಿ ಪೊಲೀಸರ ವಶಕ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ದೇಶದ ವಿವಿಧ ಭಾಗಗಳಿಂದ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ದೆಹಲಿ ಮತ್ತು ಮುಂಬೈನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ...

ಮೋದಿ, ಶಾ ದೇಶದ ಜನರ ವಿರುದ್ಧ ಯುದ್ಧ ಸಾರಲು ಬಯಸುತ್ತಿದ್ದಾರೆ: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ

ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಿಂದ ಸಿಆರ್‌ಪಿಎಫ್ ಪಡೆಗಳನ್ನು ಕರೆಸಿ ದೆಹಲಿಯಲ್ಲಿ ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ ಜನರ ವಿರುದ್ಧವೇ ಯುದ್ಧ ಸಾರಲು ಬಯಸುತ್ತಿದ್ದಾರೆ ಎಂದು...

ಹಲ್ಲೆ ಸುದ್ದಿ ತಳ್ಳಿ ಹಾಕಿದ ‘ಫ್ಯಾಕ್ಟ್‌ ಚೆಕ್ಕರ್’ ಝುಬೈರ್ : ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮದ ವಿರುದ್ಧ ಕ್ರಮದ ಎಚ್ಚರಿಕೆ

ಬೆಂಗಳೂರು ಮೆಟ್ರೋದಲ್ಲಿ ತನ್ನ ಹಲ್ಲೆ ನಡೆದಿದೆ ಎಂಬ ಸುದ್ದಿಯನ್ನು ಫ್ಯಾಕ್ಟ್‌ ಚೆಕ್ಕರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ತಳ್ಳಿಹಾಕಿದ್ದಾರೆ. ಝುಬೈರ್ ಮೇಲೆ ಬೆಂಗಳೂರು ಮೆಟ್ರೋದಲ್ಲಿ ಸಹ ಪ್ರಯಾಣಿಕರು ಹಲ್ಲೆ...

ಬಿಜೆಪಿಗೆ ರಿಲಯನ್ಸ್ ಬೆಂಬಲಿತ ಸಂಸ್ಥೆಗಳ ದೇಣಿಗೆ ವರದಿ ಹಂಚಿಕೊಂಡ ಎಲೋನ್ ಮಸ್ಕ್; ‘ಪ್ರಧಾನಿ ಅಂಬಾನಿ’ ಎಂದು ವ್ಯಂಗ್ಯ, ಏಕಸ್ವಾಮ್ಯದ ವಿರುದ್ಧ ವಾಗ್ದಾಳಿ

ನವದೆಹಲಿ: ಭಾರತದಲ್ಲಿ ತನ್ನ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆ ಆರಂಭಿಸಲು ಎದುರಾಗಿರುವ ವಿಳಂಬದ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲೋನ್...

SIR LIVE UPDATES: ಜಂತರ್‌ ಮಂಥರ್‌ ಪ್ರತಿಭಟನೆಯ ಕ್ಷಣ ಕ್ಷಣದ ಮಾಹಿತಿ

SIR ಅಕ್ರಮವನ್ನು ವಿರೋಧಿಸಿ ಸಿಜೆಪಿ ಸೇರಿದಂತೆ ವಿದ್ಯಾರ್ಥಿ ಯುವಜನರು ದೆಹಲಿಯ ಜಂತರ್‌ ಮಂಥರ್‌ ನಲ್ಲಿ ಇಂದು (ಅ.10) ಬೃಹತ್‌ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ಕೇಂದ್ರ ಸರ್ಕಾರ ನಿರ್ಭಂಧ ವಿಧಿಸಿ, ರೈಲು,...

ಸಿಜೆಪಿ ಪ್ರತಿಭಟನೆ 2.0: ದೆಹಲಿಯಲ್ಲಿ 25 ಸಾವಿರ ಪೊಲೀಸರು, 300 ಕ್ಯಾಮೆರಾಗಳು, 12 ಬಂಧನ ಕೇಂದ್ರಗಳು; ಇಂಟರ್ನೆಟ್ ಸ್ಥಗಿತ, ರೈಲು-ಮೆಟ್ರೊ ಸಂಚಾರಕ್ಕೂ ನಿರ್ಬಂಧ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಅಕ್ಟೋಬರ್ 10ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ಬೃಹತ್ ಭದ್ರತಾ...