HomeಅಂಕಣಗಳುKarnataka against SIRಜಿಬಿಎ ಚುನಾವಣೆಗೆ ರಾಜ್ಯದ ಮತಪಟ್ಟಿ ಬಳಸಲು ಸಿದ್ಧ : ಸಂಗ್ರೇಶಿ

ಜಿಬಿಎ ಚುನಾವಣೆಗೆ ರಾಜ್ಯದ ಮತಪಟ್ಟಿ ಬಳಸಲು ಸಿದ್ಧ : ಸಂಗ್ರೇಶಿ

- Advertisement -
- Advertisement -

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಚುನಾವಣೆಗೆ 2025ರ ಮತದಾರರ ಪಟ್ಟಿಯನ್ನೇ ಬಳಸಲು ರಾಜ್ಯ ಚುನಾವಣಾ ಆಯೋಗ ಸಿದ್ಧವಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ ಬಂದ ಕೂಡಲೇ ರಾಜ್ಯದ ಮತದಾರರ ಪಟ್ಟಿಯನ್ನು ಬಳಸಿಕೊಂಡು ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.

ಮಂಗಳವಾರ (ನ.24) ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಮೂಲಕ ಸಿದ್ಧಪಡಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಬಳಸಬಾರದು. ಅದರ ಬದಲಿಗೆ 2025ರ ಮತದಾರರ ಪಟ್ಟಿಯನ್ನೇ ಬಳಸಬೇಕು ಎಂದು ಆಗ್ರಹಿಸಿ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿತು.

ಒಕ್ಕೂಟದ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಂಗ್ರೇಶಿ, 2025ರ ಮತದಾರರ ಪಟ್ಟಿಯನ್ನಿಟ್ಟುಕೊಂಡೇ ಜಿಬಿಎ ಚುನಾವಣೆ ನಡೆಸಲು ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ ಬಂದ ಕೂಡಲೇ ರಾಜ್ಯದ ಮತದಾರರ ಪಟ್ಟಿಯನ್ನೇ ಬಳಸಿಕೊಂಡು ಜಿಬಿಎ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.

ಜಿಬಿಎ ವ್ಯಾಪ್ತಿಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಎಪ್ರಿಲ್ ವೇಳೆಗೆ ಸುಮಾರು 89 ಲಕ್ಷ ಮತದಾರರನ್ನು ಒಳಗೊಂಡ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಹೊಸ ಮತದಾರರನ್ನು ಸೇರ್ಪಡೆಗೊಳಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದ್ದು, ಈ ಮತಪಟ್ಟಿಯನ್ನು ಜಿಬಿಎ ಅಧಿಕಾರಿಗಳಿಗೂ ನೀಡಲಾಗಿದೆ ಎಂದು ತಿಳಿಸಿದರು.

ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಅಗತ್ಯವಾದ ಡೇಟಾ ಸೆಂಟರ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿದರೆ ಮತದಾರರ ಪಟ್ಟಿ ಸಿದ್ಧಪಡಿಸಲು ಆಯೋಗ ಸಿದ್ಧವಿದೆ. ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಂಬರುವ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯಾಗಿ ಅಂಗೀಕಾರಗೊಂಡರೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯವಾಗಲಿದೆ ಎಂದು ಸಂಗ್ರೇಶಿ ಮಾಹಿತಿ ನೀಡಿದರು.

ಈ ವೇಳೆ ಎಸ್‌ಐಆರ್ ವಿರೋಧಿ ಒಕ್ಕೂಟದ ಜೆ.ಎಂ.ವೀರಸಂಗಯ್ಯ, ತಾರಾರಾವ್, ಸುನೀಲ್ ಸಿರಸಂಗಿ, ಅಮ್ಜದ್ ಪಾಷಾ, ಡಾ.ರಮೇಶ್ ಬೆಲ್ಲಂಕೊಂಡ, ನಾಗೇಶ್ ಅರಳಕುಪ್ಪೆ, ನೈನಾ, ಹೈದರ್ ಬೇಗ್, ರವಿ ಮೋಹನ್, ಪವನ್, ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ SIR ಮತಪಟ್ಟಿ ಬಳಸಬೇಡಿ; 2025ರ ಪಟ್ಟಿಯನ್ನೇ ಪರಿಷ್ಕರಿಸಿ ಬಳಸಿ : ರಾಜ್ಯ ಚುನಾವಣಾ ಆಯುಕ್ತರಿಗೆ ಹೋರಾಟಗಾರರ ಮನವಿ

ಮುಂಬರುವ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ವಿವಾದಾತ್ಮಕ ಹಾಗೂ ದೋಷಪೂರಿತವಾಗಿರುವ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಅಂತಿಮ ಮತದಾರರ ಪಟ್ಟಿಯನ್ನು ಬಳಸದೆ, 2025ರ ಮತಪಟ್ಟಿಯನ್ನೇ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ ಬಳಸಬೇಕು ಎಂದು 'SIR...

ಕರ್ನಾಟಕದ ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ! (ಭಾಗ-1)

ಲೇಖಕರು: ಅಮನ್ ಭಾರ್ಗವಮೂಲ: Diagram Chasingಕನ್ನಡಕ್ಕೆ: ಸೋಮಶೇಖರ್ ಚಲ್ಯ "ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ; ಒಬ್ಬ ಅನರ್ಹ ವ್ಯಕ್ತಿಯನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿಲ್ಲ" - ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಅಕ್ಟೋಬರ್ 27,...

ಪಂಜಾಬ್‌ ಚುನಾವಣೆಗೆ ಬಿಜೆಪಿ-ಎಸ್‌ಎಡಿ ಮೈತ್ರಿ : ಮತ್ತೆ ಎನ್‌ಡಿಎಗೆ ಮರಳಿದ ಅಕಾಲಿದಳ

ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮೈತ್ರಿ ಘೋಷಣೆ ಮಾಡಿವೆ. ಇದರೊಂದಿಗೆ ಅಕಾಲಿ ದಳ ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ...

ದಿಲ್ಜಿತ್ ದೋಸಾಂಜ್ ಬೆಂಗಳೂರು ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ; ಮಾದಾವರ ಮೆಟ್ರೋ ನಿಲ್ದಾಣದಲ್ಲೂ ಐಇಡಿ ಸ್ಫೋಟದ ಎಚ್ಚರಿಕೆ

ಬೆಂಗಳೂರು: ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಬೆಂಗಳೂರಿನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ನವೆಂಬರ್ 29ರಂದು ಮಾದಾವರದ ನೈಸ್ ಮೈದಾನದಲ್ಲಿ ನಡೆಯಲಿರುವ...

SIR ವಿರುದ್ಧದ ಹೋರಾಟದೇಶಕ್ಕೆ ಮಾದರಿಯಾದ ಕರ್ನಾಟಕ

ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ನಿರ್ಣಾಯಕ ಹೋರಾಟಕ್ಕೆ ಪ್ರಸ್ತುತ ದೇಶದ ಜನರು ಧುಮುಕಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಹಿಡಿದು, ನಮ್ಮ ಕರ್ನಾಟಕದ ಕೊಡಗಿನ ಆದಿವಾಸಿ ಹಾಡಿಗಳವರೆಗೆ ಹೋರಾಟದ ಕಿಚ್ಚು ಹಬ್ಬಿದೆ. ಕಳೆದ 10-12 ವರ್ಷಗಳಲ್ಲಿ...

ಎಫ್‌ಐಆರ್ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ವಿವಾದಿತ ‘ಬಸವ ಮಂಟಪ’ ಕೃತಿ ಲೇಖಕ ರವಿ ಹಂಜ್‌

‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಲೇಖಕ ರವಿ ಹಂಜಗಿಮಠ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯಲ್ಲಿ, ತಾನು ಬದ್ಧ ವೀರಶೈವ ಲಿಂಗಾಯತ ಧರ್ಮದ...

ದೇವಾಲಯ ಆವರಣದಲ್ಲಿನ ಪೆರಿಯಾರ್ ಪ್ರತಿಮೆ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ: ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಮೇಲ್ಮನವಿ

ತಂಜಾವೂರು (ತಮಿಳುನಾಡು): ತಂಜಾವೂರು ಜಿಲ್ಲೆಯ ಅರುಳ್ಮಿಗು ಬ್ರಹ್ಮಸಿರಕಂಡೀಶ್ವರರ್ ದೇವಾಲಯದ ಸಮೀಪ ಸ್ಥಾಪಿಸಲಾಗಿರುವ ದ್ರಾವಿಡ ಚಳವಳಿಯ ನಾಯಕ ಹಾಗೂ ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ (ಪೆರಿಯಾರ್) ಅವರ ಪ್ರತಿಮೆಯನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ...

ಬಿಲ್ ಬಾಣ – ಭಾಗ 2 ಬಡತನವೇ ಮರಣದಂಡನೆಯಾದಾಗ

ಹಿಂದಿನ ಅಂಕಣದಲ್ಲಿ ಹಣ ಪಾವತಿಸಬಲ್ಲವರು ಮತ್ತು ವಿಮೆ ಹೊಂದಿರುವವರು ಹೇಗೆ ಅನಗತ್ಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು, ದುಬಾರಿ ಬಿಲ್ಲಿಂಗ್ ಮತ್ತು ವಿಮಾ ಹಕ್ಕುಗಳ ನಿರಾಕರಣೆಯಿಂದ ಶೋಷಿಸಲ್ಪಡುತ್ತಾರೆ ಎಂಬುದನ್ನು ನೋಡಿದ್ದೇವೆ. ಆರೋಗ್ಯ ವ್ಯವಸ್ಥೆಯ ಆ ಮುಖದಲ್ಲಿ...

ಹಗ್ಗಿಂಗ್‌ಫೇಸ್ ಮೇಲೆ ಓಪನ್‌ಎಐ ಏಜೆಂಟ್‌ಗಳ ಸೈಬರ್ ದಾಳಿ: ಎಐ ನಿಯಂತ್ರಣದ ಕುರಿತು ಜಾಗತಿಕ ಕಳವಳ

2026ರ ಜುಲೈ 11ರಂದು, ಚಾಟ್‌ಜಿಪಿಟಿ ಖ್ಯಾತಿಯ ಓಪನ್‌ಎಐ (OpenAI) ಕಂಪನಿಯು ನಿರ್ಮಿಸಿದ ಸ್ವಾಯತ್ತ ಕೃತಕ ಬುದ್ಧಿಮತ್ತೆ (ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುವ ಎಐ) ಏಜೆಂಟ್‌ಗಳು, ಮಷೀನ್ ಲರ್ನಿಂಗ್ ಮಾದರಿಗಳನ್ನು ಹೋಸ್ಟ್ ಮಾಡುವ ‘ಹಗ್ಗಿಂಗ್...

ಕಿರುಕುಳ ಆರೋಪ : ಟಿವಿಕೆ ಶಾಸಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳಾ ಜಿಲ್ಲಾಧಿಕಾರಿ, ಎಫ್‌ಐಆರ್ ದಾಖಲು

ಕಿರುಕುಳ ಮತ್ತು ಅನುಚಿತ ವರ್ತನೆ ಆರೋಪಿಸಿ ತಮಿಳುನಾಡಿನ ಆಡಳಿತರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ವಿರುದ್ಧ ಕಳ್ಳಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರು ಪೊಲೀಸರಿಗೆ ಅಧಿಕೃತ...