ದಾರಿ ತಪ್ಪಿದ ತನ್ನ ಸ್ನೇಹಿತರೊಂದಿಗೆ ಸುಖಾಸುಮ್ಮನೆ ಸುತ್ತಾಡುತ್ತಾನೆ ಎಂದು ಕುಟುಂಬದ ಸದಸ್ಯರು ಬೈದು, ಬುಲೆಟ್ ಬೈಕ್ ಮಾರಿದ್ದಕ್ಕೆ ಮನನೊಂದ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ತನ್ನ ಸಹಚರರೊಂದಿಗೆ ಸುತ್ತಾಡುವುದನ್ನು ತಡೆಯಲು ತನ್ನ ತಾಯಿ ಮತ್ತು ಅಣ್ಣ ತನ್ನ ಮೋಟಾರ್ ಸೈಕಲ್ ಅನ್ನು ಮಾರಿದ ನಂತರ, ಹದಿಹರೆಯದ ಬಾಲಕ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡಿದ್ದಾನೆ.
ವೈದ್ಯಕೀಯ ಕಾಲೇಜಿನಲ್ಲಿ ನರ್ಸ್ ಆಗಿರುವ ಬಾಲಕನ ತಾಯಿ ಜನವರಿ 12 ರ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಹಿರಿಯ ಮಗನೊಂದಿಗೆ ಮನೆಗೆ ಮರಳಿದರು. ಅವರು ಬಂದಾಗ, ಕಿರಿಯ ಮಗ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತಿರುವುದು ಕಂಡುಬಂದಿದೆ. ಸ್ವಲ್ಪ ಸಮಯದ ನಂತರ, ಅವನು ತನ್ನ ಕೋಣೆಗೆ ಹೋಗಿ ಗುಂಡು ಹಾರಿಸಿಕೊಂಡಿದ್ದಾನೆ.
ಕುಟುಂಬ ಸದಸ್ಯರು ಕೋಣೆಗೆ ಪ್ರವೇಶಿಸಲು ಪ್ರಯತ್ನಿಸಿದ್ದು, ಕಿಟಕಿ ಒಡೆದು ರಕ್ತದ ಮಡುವಿನಲ್ಲಿ ಬಿದ್ದಿರುವ ಮಗನನ್ನು ಕಂಡಿದ್ದಾರೆ. ಕೂಡಲೇ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಿ ಅವನು ಸತ್ತನೆಂದು ಘೋಷಿಸಲಾಯಿತು.
ಆತ್ಮಹತ್ಯೆಗೆ ಮುನ್ನ, ಹುಡುಗ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ‘ಸಾವಿನ ನಂತರ ಆತ್ಮಕ್ಕೆ ಏನಾಗುತ್ತದೆ’ ಎಂದು ಆನ್‌ಲೈನ್‌ನಲ್ಲಿ ಹುಡುಕಿದ್ದ ಎಂದು ವರದಿಯಾಗಿದೆ.
ಬುಲಂದ್‌ಶಹರ್ ಮೂಲದ ಈ ಕುಟುಂಬವು ಆರು ತಿಂಗಳ ಹಿಂದೆ ಅಪೆಕ್ಸ್ ಕಾಲೋನಿಯಲ್ಲಿ ಮನೆ ಖರೀದಿಸಿ ಮೀರತ್‌ಗೆ ಸ್ಥಳಾಂತರಗೊಂಡಿತ್ತು. ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಪತಿಯನ್ನು ಕಳೆದುಕೊಂಡ ತಾಯಿ, ತನ್ನ ಇಬ್ಬರು ಗಂಡು ಮಕ್ಕಳಾದ 17 ವರ್ಷದ ಹಿರಿಯ ಮಗ ಮತ್ತು ಮೃತ ಬಾಳಕನ್ನು ಏಕಾಂಗಿಯಾಗಿ ಬೆಳೆಸುತ್ತಿದ್ದರು.
ಪೊಲೀಸರು ಸ್ಥಳದಿಂದ ಪಿಸ್ತೂಲ್ ವಶಪಡಿಸಿಕೊಂಡರು. ತನಿಖೆಯ ಸಮಯದಲ್ಲಿ, ಕುಟುಂಬವು ಹದಿಹರೆಯದವರನ್ನು ಅವನ ವರ್ತನೆಗಾಗಿ ಹಲವು ಬಾರಿ ಗದರಿಸಿತ್ತು. ಕೆಟ್ಟ ಜನರೊಂದಿಗೆ ಸಂವಹನ ನಡೆಸುವುದನ್ನು ಮಿತಿಗೊಳಿಸಲು ಅವನ ಬುಲೆಟ್ ಬೈಕ್ ಅನ್ನು ಮಾರಾಟ ಮಾಡಿತ್ತು ಎಂದು ತಿಳಿದುಬಂದಿದೆ.
ಮೀರತ್ ಗ್ರಾಮೀಣ ಎಸ್‌ಪಿ ರಾಕೇಶ್ ಕುಮಾರ್ ಅವರು, ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಕುಟುಂಬವು ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ ಎಂದು ಅವರು ಹೇಳಿದರು.
HELPLINE NUMBER:

ಇದನ್ನೂ ಓದಿ; ಗೋಮಾಂಸ ಮಾರುತ್ತಿದ್ದ ದಂಪತಿಗಳಿಗೆ ಕಿರುಕುಳ; ಕೊಯಮತ್ತೂರು ಬಿಜೆಪಿ ನಾಯಕನ ವಿರುದ್ಧ ಪ್ರತಿಭಟನೆ


