ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದಾಖಲಾಗಿರುವ ಮೋಹನ್ ಲಾಲ್ ಬಡೋಲಿ ಅವರು ನಿರಪರಾಧಿ ಎಂದು ಸಾಬೀತಾಗುವವರೆಗೆ ಪಕ್ಷದ “ಪಾವಿತ್ರ್ಯತೆ”ಯನ್ನು ಕಾಪಾಡಿಕೊಳ್ಳಲು ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಹರಿಯಾಣ ಸಚಿವ ಅನಿಲ್ ವಿಜ್ ಶನಿವಾರ ಆಗ್ರಹಿಸಿದ್ದಾರೆ. ಜನವರಿ 15ರಂದು ಸಚಿವ ವಿಜ್ ಅವರು, ”ಬಡೋಲಿ ವಿರುದ್ಧದ ಸಾಮೂಹಿಕ ಅತ್ಯಾಚಾರದ ಆರೋಪ ವ್ಯಕ್ತವಾಗಿದ್ದು, ಇದು ತುಂಬಾ ಗಂಭೀರವಾಗಿದೆ ಮತ್ತು ಪಕ್ಷದ ಹೈಕಮಾಂಡ್ ಇದನ್ನು ಗಮನಿಸುತ್ತದೆ” ಎಂದು ಹೇಳಿದ್ದರು. ಪಕ್ಷದ ಪಾವಿತ್ರ್ಯ ಕಾಪಾಡಿಕೊಳ್ಳಲು
ಹಿಮಾಚಲ ಪ್ರದೇಶದ ಕಸೌಲಿಯ ಹೋಟೆಲ್‌ನಲ್ಲಿ ಹರಿಯಾಣ ಬಿಜೆಪಿ ಅಧ್ಯಕ್ಷ ಬಡೋಲಿ ಮತ್ತು ಗಾಯಕ ರಾಕಿ ಮಿತ್ತಲ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ ನಂತರ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅದಾಗ್ಯೂ, ಈ ಆರೋಪವನ್ನು ಬಡೋಲಿ ಅವರು ನಿರಾಕರಿಸಿದ್ದು, ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಹಿಮಾಚಲ ಪ್ರದೇಶ ಪೊಲೀಸ್ ತನಿಖೆಯಲ್ಲಿ ಅವರು ನಿರಪರಾಧಿ ಎಂದು ತನ್ನನ್ನು ತಾನು ಸಾಬೀತುಪಡಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ಆದರೆ ಹಿಮಾಚಲ ಪೊಲೀಸರು ಅವರನ್ನು ನಿರಪರಾಧಿ ಎಂದು ಸಾಬೀತುಪಡಿಸುವವರೆಗೆ, ಪಕ್ಷದ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಅವರು ಈ (ಹರಿಯಾಣ ಬಿಜೆಪಿ ಮುಖ್ಯಸ್ಥ) ಹುದ್ದೆಗೆ ರಾಜೀನಾಮೆ ನೀಡಬೇಕು” ಎಂದು ಸಚಿವ ವಿಜ್ ಅಂಬಾಲದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಬಡೋಲಿ ಕಳೆದ ವರ್ಷ ಜುಲೈನಲ್ಲಿ ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ್ದರು. ಪಕ್ಷದ ಪಾವಿತ್ರ್ಯ ಕಾಪಾಡಿಕೊಳ್ಳಲು
ಅತ್ಯಾಚಾರ ಸಂತ್ರಸ್ತೆಯು, ಬಡೋಲಿ ಮತ್ತು ಮಿತ್ತಲ್ ಈ ಕೃತ್ಯದ ವಿಡಿಯೋಗಳನ್ನು ಮಾಡಿ, ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ. ಡಿಸೆಂಬರ್ 13, 2024 ರಂದು ಸೋಲನ್ ಜಿಲ್ಲೆಯ ಕಸೌಲಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಬಡೋಲಿ ಮತ್ತು ಜೈ ಭಗವಾನ್ ಅಲಿಯಾಸ್ ರಾಕಿ ಎಂದು ಹೆಸರಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಮಹಿಳೆ ತನ್ನ ಬಾಸ್ ಮತ್ತು ಸ್ನೇಹಿತನೊಂದಿಗೆ ಕಸೌಲಿಯ ಹೋಟೆಲ್‌ನಲ್ಲಿ ತಂಗಿದ್ದರು. ಅವರು ಜುಲೈ 3, 2023 ರಂದು ಈ ಇಬ್ಬರನ್ನು ಭೇಟಿಯಾದರು. ಬಡೋಲಿ ತನ್ನನ್ನು ರಾಜಕೀಯ ನಾಯಕ ಎಂದು ಪರಿಚಯಿಸಿಕೊಂಡರೆ, ರಾಕಿ ತನ್ನನ್ನು ಗಾಯಕ ಎಂದು ಪರಿಚಯಿಸಿಕೊಂಡರು. ನಂತರ, ಮಹಿಳೆ ಮತ್ತು ಆಕೆಯ ಸ್ನೇಹಿತ ಇಬ್ಬರೊಂದಿಗೆ ಕೋಣೆಗೆ ಹೋದರು, ಅವರು ಸರ್ಕಾರಿ ಕೆಲಸ ಮತ್ತು ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಳ್ಳಲು ಅವಕಾಶವನ್ನು ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಇಬ್ಬರು ಆರೋಪಿಗಳು ಮಹಿಳೆಗೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಮಹಿಳೆಯು ಅದಕ್ಕೆ ನಿರಾಕರಿಸಿದಾಗ, ಅವರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ, ಬಡೋಲಿ ಮತ್ತು ರಾಕಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂಓದಿ: ಇಡಿಯಿಂದ ಮುಡಾ ಸ್ಥಿರಾಸ್ತಿ ಮುಟ್ಟುಗೋಲು – ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ
ಇಡಿಯಿಂದ ಮುಡಾ ಸ್ಥಿರಾಸ್ತಿ ಮುಟ್ಟುಗೋಲು – ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ


