ಮದ್ಯ ನೀತಿ ಪ್ರಕರಣದಲ್ಲಿ ಪ್ರಕರಣವು ತನಿಖೆ ನಡೆಯುತ್ತಿರುವ ವೇಳೆಯೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಪ್ಪಿತಸ್ಥರೆಂದು ಹೇಳುವ ಮೂಲಕ ಪ್ರಸಾರ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯೂಸ್ 18 ಇಂಡಿಯಾ ಮತ್ತು ಅದರ ನಿರೂಪಕಿ ರುಬಿಕಾ ಲಿಯಾಕತ್ ಅವರನ್ನು ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು ಖಂಡಿಸಿದೆ. ಮೀಡಿಯಾ ಟ್ರಯಲ್
ಪ್ರಾಧಿಕಾರವು ಏಳು ದಿನಗಳಲ್ಲಿ ಈ ಪ್ರಸಾರದ ಆಕ್ಷೇಪಾರ್ಹ ಭಾಗಗಳನ್ನು ಅಳಿಸಿ ಹಾಕುವಂತೆ ಚಾನೆಲ್‌ಗೆ ನಿರ್ದೇಶಿಸಿದೆ. ಗೂಂಜ್ ವಿಥ್ ರುಬಿಕಾ ಲಿಯಾಕತ್ ಎಂಬ ಕಾರ್ಯಕ್ರಮದಲ್ಲಿ ಮಾರ್ಚ್ 28 ರಂದು ಈ ಆಕ್ಷೇಪಾರ್ಹ ಆರೋಪ ಮಾಡಲಾಗಿತ್ತು. ದೆಹಲಿ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ಬಂಧಿಸಿದ್ದನ್ನು ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿತ್ತು. ಮೀಡಿಯಾ ಟ್ರಯಲ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ದೂರುದಾರರಾದ ಪುಣೆ ಮೂಲದ ಹೋರಾಟಗಾರ ಇಂದ್ರಜೀತ್ ಘೋರ್ಪಡೆ, ಮಾಧ್ಯಮದ ಈ ಪ್ರಸಾರವು ತಟಸ್ಥತೆಯನ್ನು ಉಲ್ಲಂಘಿಸಿ ಮತ್ತು ರಾಜಕೀಯ ಪಕ್ಷಪಾತವನ್ನು ಉತ್ತೇಜಿಸಿದೆ ಎಂದು ಆರೋಪಿಸಿದ್ದಾರೆ. ನಿರೂಪಕಿ ಲಿಯಾಕತ್ ಅವರು ಆಮ್ ಆದ್ಮಿ ಪಕ್ಷದ ನಾಯಕನ ಬಗ್ಗೆ ಯಾವುದೆ ಪರಿಶೀಲನೆ ಇಲ್ಲದೆ ಪದೇ ಪದೇ ತಪ್ಪಾಗಿ ಹೇಳಿಕೆ ನೀಡಲಾಗಿತ್ತು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಜನವರಿ 24 ರಂದು ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಆದೇಶದಲ್ಲಿ, “ಪ್ರಧಾನ ಮಂತ್ರಿಯನ್ನು ಸಮರ್ಥಿಸುವ ನಿರೂಪಕರ ಬಗ್ಗೆ ಯಾವುದೇ ಸಮಸ್ಯೆ ಇರಲಿಲ್ಲ… ಆದಾಗ್ಯೂ, ಸಮಸ್ಯೆ ಇರುವುದು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟ ವಿಷಯದಲ್ಲಿ ನಿರೂಪಕಿ ಆರೋಪಿಯನ್ನು ತಪ್ಪಿತಸ್ಥನೆಂದು ಆರೋಪಿಸಿದ ರೀತಿಯಲ್ಲಿ.” ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಆಪಾದಿತ ಹಗರಣದಲ್ಲಿ ಭಾಗಿಯಾಗಿರುವುದರಿಂದ ನ್ಯಾಯಾಲಯಗಳು ಜಾಮೀನು ನಿರಾಕರಿಸಿವೆ ಎಂದು ಹೇಳಿಕೊಂಡ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರ ಸುಳ್ಳು ಹೇಳಿಕೆಗಳನ್ನು ವಿರೋಧಿಸಲು ಲಿಯಾಕತ್ ವಿಫಲರಾಗಿದ್ದಾರೆ ಎಂದು ಪ್ರಾಧಿಕಾರವು ಕಂಡುಕೊಂಡಿದೆ.
ಚರ್ಚೆಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ವಕ್ತಾರೆ ಅಮೀಕ್ ಜಮೈ ಅವರನ್ನು ಲಿಯಾಕತ್ ಖಂಡಿಸಿದ್ದಾರೆ ಎಂದು ಪ್ರಾಧಿಕಾರವು ಗಮನಿಸಿದೆ. “ಅವರು ನಿಮ್ಮ ಪ್ರಧಾನಿಯೂ ಹೌದು… ನೀವು ಶಿಷ್ಟಾಚಾರ ಮತ್ತು ಶಿಷ್ಟಾಚಾರದ ಮಿತಿಯಲ್ಲಿಯೇ ಇರಿ ಮತ್ತು ನಂತರ ಮಾತನಾಡಿ” ಎಂದು ಅವರು ಜಮೈಗೆ ತಿಳಿಸಿದ್ದರು.
ನಿಷ್ಪಕ್ಷಪಾತತೆ, ತಟಸ್ಥತೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳ ವರದಿ ಮಾಡುವಿಕೆಯ ಕುರಿತಾದ ಮಾರ್ಗಸೂಚಿಗಳನ್ನು ಈ ಕಾರ್ಯಕ್ರಮದ ಚರ್ಚೆಯು ಉಲ್ಲಂಘಿಸಿದೆ ಎಂದು ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು ತೀರ್ಪು ನೀಡಿತು. ನೀಲೇಶ್ ನವಲಖಾ vs ಯೂನಿಯನ್ ಆಫ್ ಇಂಡಿಯಾ (2021) ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಸಹ ಇದು ಉಲ್ಲೇಖಿಸಿದೆ. ಈ ತೀರ್ಪು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲಾಗುತ್ತಿರುವ ವಿಷಯಗಳಲ್ಲಿ ತಟಸ್ಥತೆಯನ್ನು ಪಾಲಿಸುವುದನ್ನು ಒತ್ತಿಹೇಳಿತ್ತು.
ಪ್ರಾಧಿಕಾರವು ಕಾರ್ಯಕ್ರಮದ ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕುವಂತೆ ಚಾನೆಲ್‌ಗೆ ಸೂಚಿಸಿದ್ದು, ಭವಿಷ್ಯದಲ್ಲಿ ನಡೆಸುವ ಚರ್ಚೆಗಳಲ್ಲಿ ಪ್ರಸಾರ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದೆ. ಈ ನಿರ್ದೇಶನಗಳೊಂದಿಗೆ ದೂರನ್ನು ಮುಕ್ತಾಯಗೊಳಿಸಲಾಯಿತು.
ಇದನ್ನೂಓದಿ: ಮದುವೆಗೆ ಒತ್ತಡ: ಯುವತಿಯ ಕೊಂದು, ದೇಹಕ್ಕೆ ಬೆಂಕಿ ಹಚ್ಚಿ, ಸೂಟ್‌ಕೇಸ್‌ನಲ್ಲಿ ಎಸೆದ ವ್ಯಕ್ತಿ
ಮದುವೆಗೆ ಒತ್ತಡ: ಯುವತಿಯ ಕೊಂದು, ದೇಹಕ್ಕೆ ಬೆಂಕಿ ಹಚ್ಚಿ, ಸೂಟ್‌ಕೇಸ್‌ನಲ್ಲಿ ಎಸೆದ ವ್ಯಕ್ತಿ


