Homeಅಂಕಣಗಳುಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

ಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

- Advertisement -
- Advertisement -

ಜರ್ವೇಶನ್‍ನಿಂದ ಡಾಕ್ಟರಾದೋರು ಎಂಥಾ ಚಿಕಿತ್ಸೆ ಕೊಡ್ತಾರೆ?’ ‘35% ಮಾಕ್ರ್ಸ್ ತಗೊಂಡು ಡಾಕ್ಟರ್ ಆದೋನು ಅವನೆಂಥಾ ಡಾಕ್ಟರ್?’ ಎಂಬ ಮಾತುಗಳು ಈಗ ಹಾದಿಬೀದಿಯಲ್ಲಿ ಕೇಳಿಬರುತ್ತಿವೆ. ಇಂಥಾ ವಾದವನ್ನು ಮುಂದಿಡುವ `ಮೆರಿಟ್‍ಪಂಥೀಯ’ ಜನ ತಮ್ಮ ವಾದಕ್ಕೆ ಯಾವ ಸೂಕ್ತ ಆಧಾರಗಳನ್ನೂ ಕೊಡದಿದ್ದರೂ, ತಮ್ಮ ಒಣತರ್ಕಗಳನ್ನು ಮಾತ್ರ ತೇಲಿ ಬಿಡುತ್ತಿದ್ದಾರೆ. ಕಾರ್ಪೊರೇಟ್ ಮೀಡಿಯಾಗಳು ಮಾತ್ರ ಇಂಥ ಪರಮಸತ್ಯವನ್ನು ಪದೇಪದೇ ಬಿತ್ತರಿಸುವುದರಿಂದ ಈ ಬಗ್ಗೆ ಸಹಜವಾಗಿ ಸಮಾಜದಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿದೆ.
ಕಟುಸತ್ಯಗಳನ್ನು ಸಾರಿ ಹೇಳುತ್ತಿರುವ ವಾಸ್ತವಗಳನ್ನು ನೋಡೋಣ. ಮುಖ್ಯವಾಹಿನಿ ಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾ ಕಳೆದ ವರ್ಷ ಮೆಡಿಕಲ್‍ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನೀಟ್ ಪರೀಕ್ಷೆಯ ಅಂಕಗಳ ಮಾಹಿತಿ ಪಡೆದು ವಿಶ್ಲೇಷಣೆಗೆ ಒಳಪಡಿಸಿ ವರದಿಯೊಂದನ್ನು ತಯಾರಿಸಿದೆ. ಆ ವರದಿ ಪ್ರಕಾರ ದೇಶಾದ್ಯಂತ 409 ಕಾಲೇಜುಗಳಲ್ಲಿ ಒಟ್ಟು 56,000 ವಿದ್ಯಾರ್ಥಿಗಳು ಮೆಡಿಕಲ್‍ಗೆ ದಾಖಲಾಗಿದ್ದಾರೆ. ಅದರಲ್ಲಿ 39,000 ವಿದ್ಯಾರ್ಥಿಗಳು ಸರಕಾರಿ ಕೋಟಾದಡಿಯಲ್ಲೂ, 17,000 ಜನ ವಿದ್ಯಾರ್ಥಿಗಳು ಖಾಸಗಿ ಕೋಟಾದಲ್ಲಿ ದಾಖಲಾತಿ ಪಡೆದಿದ್ದಾರೆ. ಸರಕಾರಿ ಕೋಟಾದಲ್ಲಿ(ಅಂದರೆ ಮೀಸಲಾತಿಯನ್ನೂ ಒಳಗೊಂಡಿದ್ದು) ಪ್ರವೇಶ ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಕ್ಕೂ, ಹೆಚ್ಚು ಶುಲ್ಕ ಪಾವತಿಸಿ ಆಯ್ಕೆಯಾದ ಶ್ರೀಮಂತ ಮತ್ತು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಗುಣಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಸಂಬಂಧಿತ ನೀಟ್ ಪರೀಕ್ಷೆಯಲ್ಲಿ ಗರಿಷ್ಟ ಒಟ್ಟು 720 ಅಂಕಗಳಲ್ಲಿ ಸರಕಾರಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳು ಸರಾಸರಿ 448 ಅಂಕಗಳನ್ನು(62%) ಪಡೆದಿದ್ದರೆ, ಮ್ಯಾನೇಜ್‍ಮೆಂಟ್ ಕೋಟಾದ ವಿದ್ಯಾರ್ಥಿಗಳು ಸರಾಸರಿ 306(42%) ಅಂಕಗಳನ್ನು ಪಡೆದಿದ್ದಾರೆ. ಹಣಬಲದಿಂದ ಮೆಡಿಕಲ್ ಸೀಟು ಪಡೆದವರು ಸರ್ಕಾರಿ ಕೋಟಾದಡಿ ಆಯ್ಕೆಯಾದವರಿಗಿಂತ 20% ಕಡಿಮೆ ಅಂಕ ಗಳಿಸಿದ್ದಾರೆ ಎಂಬ ಸತ್ಯ ಆಶ್ಚರ್ಯವಾದರೂ ಅದೇ ಕಹಿಸತ್ಯ. ಇನ್ನು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಮತ್ತಷ್ಟು ಹೀನಾಯ. ನೀಟ್ ಪರೀಕ್ಷೆಯಲ್ಲಿ ಎನ್‍ಆರ್‍ಐಗಳು ಗಳಿಸಿರುವ ಸರಾಸರಿ ಕೇವಲ 221 ಅಂಕಗಳು(29%).
ಒಟ್ಟು ಸರ್ಕಾರಿ ಕೋಟಾದ ವಿವರಣೆಗಳಿಗೆ ಹೋದರೆ ಮತ್ತಷ್ಟು ಕಣ್ಣು ತೆರೆಸುವ ಮಾಹಿತಿ ಸಿಗುತ್ತದೆ. ಉದಾಹರಣೆಗೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ಸರಾಸರಿ ಅಂಕ 398(53%). ಮ್ಯಾನೇಜ್‍ಮೆಂಟ್ ಕೋಟಾದಡಿ ಬಂದ ವಿದ್ಯಾರ್ಥಿಗಳ ಸರಾಸರಿ 306 ಅಂಕ(42%). ಅಂದರೆ ಮೀಸಲಾತಿಯಲ್ಲಿ ಬಂದ ಪರಿಶಿಷ್ಟ ವಿದ್ಯಾರ್ಥಿಗಳು ಹಣಬಲದ ವಿದ್ಯಾರ್ಥಿಗಳಿಗಿಂತಲೂ 11% ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಪಂಜಾಬ್‍ನ ನೀಟ್ ಪರೀಕ್ಷೆಯ ವಿಶ್ಲೇಷಣೆಯೂ ಇದೇ ಕತೆಯನ್ನು ಹೇಳುತ್ತಿದೆ. ಇಲ್ಲಿ ಸರ್ಕಾರಿ ಕೋಟಾದ ವಿದ್ಯಾರ್ಥಿಗಳು ಗಳಿಸಿದ್ದ ಅಂಕ ಗರಿಷ್ಟ 86% ರಿಂದ ಕನಿಷ್ಟ 75%. ಆದರೆ ಖಾಸಗಿ ಕೋಟಾದಡಿಯ ವಿದ್ಯಾರ್ಥಿಗಳ ಅಂಕ 73% ರಿಂದ 65% ಮಾತ್ರ. ಪ್ರೈವೇಟ್ ಯೂನಿವರ್ಸಿಟಿಗಳೆಂದು ಕರೆದುಕೊಳ್ಳುವ ಸಂಸ್ಥೆಗಳ ಸ್ಥಿತಿ ಇನ್ನೂ ಅಧ್ವಾನ. ಕನಿಷ್ಟ 41% ಅಂಕ ಗಳಿಸಿದವರಿಗೂ ಇಲ್ಲಿ ಮೆಡಿಕಲ್ ಸೀಟ್ ಲಭ್ಯವಾಗಿದೆ. ಈ ಅಂಕಿ ಅಂಶಗಳು ಏನನ್ನು ಹೇಳುತ್ತಿವೆ? ಅನಾದಿಯಿಂದಲೂ `ಮೆರಿಟ್‍ಪಂಥೀಯ’ ವಾಕ್ಪಟುಗಳು ಹೇಳುತ್ತಿರುವುದು ಅಪ್ಪಟ ಸುಳ್ಳು ಎಂಬುದನ್ನು ಮೇಲಿನ ಅಂಕಿಅಂಶಗಳು ಅನುಮಾನಕ್ಕೆಡೆಯಿಲ್ಲದಂತೆ ಸಾರಿ ಹೇಳುತ್ತಿವೆ.
ದೇಶಿಯ ಮತ್ತು ಅಂತರರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳು ದೇಶದುದ್ದಕ್ಕೂ ಆರೋಗ್ಯ ಸೇವೆಯ ಹೆಸರಲ್ಲಿ ಹಲವು ಖಾಸಗಿ ಕಾಲೇಜು ಮತ್ತು ಆಸ್ಪತ್ರೆಗಳನ್ನು ತೆರೆದು ಕೂತಿವೆ. ಇದರ ಪರಿಣಾಮವೆಂಬಂತೆ 1974ರಲ್ಲಿ ಶೇ.18ರಷ್ಟಿದ್ದ ಖಾಸಗಿ ಆಸ್ಪತ್ರೆಗಳು 2014 ಹೊತ್ತಿಗೆ ಶೇ.75ರಷ್ಟು ಹೆಚ್ಚಾಗಿವೆ. 1974ರಲ್ಲಿ ಶೇ.21ರಷ್ಟು ಹಾಸಿಗೆಗಳನ್ನು ಹೊಂದಿದ್ದ ಖಾಸಗಿ ಆಸ್ಪತ್ರೆಗಳು 2014 ರಷ್ಟೊತ್ತಿಗೆ ಶೇ.54ಕ್ಕೇರಿಸಿಕೊಂಡಿವೆ. ಶೇ.75ರಷ್ಟು ಔಷಧಾಲಯಗಳು, ಶೇ.80 ರಷ್ಟು ಅರ್ಹ ವೈದ್ಯರನ್ನು ಖಾಸಗಿ ಆಸ್ಪತ್ರೆಗಳು ಹೊಂದಿವೆ. ಶೇ.60ರಷ್ಟು ಒಳರೋಗಿಗಳು, ಶೇ.80ರಷ್ಟು ಹೊರರೋಗಿಗಳು ಖಾಸಗಿ ಆಸ್ಪತ್ರೆಯ ಸಂಪರ್ಕದಲ್ಲಿದ್ದಾರೆ. ಇಲ್ಲಿಂದ ಮುಂದೆ ಇದು ದೊಡ್ಡ ಬಂಡವಾಳ ಹೂಡುವ ಕ್ಷೇತ್ರವಾಗಿ ಮಾರ್ಪಟ್ಟು ಲಾಭ ಮತ್ತು ಅತಿಲಾಭದ ಲೆಕ್ಕಾಚಾರದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ತೊಡಗಿವೆ. ಇದಕ್ಕೆ ಬೇಕಾದ ಸಂಪನ್ಮೂಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ವೈದ್ಯಕೀಯ ವಿದ್ಯಾಸಂಸ್ಥೆಗಳು ರೂಪುಗೊಂಡವು. ಅದರಲ್ಲೂ ಸರ್ಕಾರಿ ವೈದ್ಯಕೀಯ ವಿದ್ಯಾಸಂಸ್ಥೆಗಳನ್ನು ದೂರತಳ್ಳಿ ಖಾಸಗಿ ಸಂಸ್ಥೆಗಳು ಬೇರುಬಿಡತೊಡಗಿದವು. ಇದರ ಫಲವೆಂಬಂತೆ 1950ರಲ್ಲಿ ಶೇ.4ರಷ್ಟಿದ್ದ ಖಾಸಗಿ ವೈದ್ಯಕೀಯ ವಿದ್ಯಾಸಂಸ್ಥೆಗಳು 2014ರಲ್ಲಿ ಶೇ.54ರಷ್ಟು ಹೆಚ್ಚಾದವು. ಈ ಖಾಸಗಿ ಮೆಡಿಕಲ್ ಕಾಲೇಜುಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ತಮ್ಮ ಶುಲ್ಕವನ್ನು ಹತ್ತಾರು ಪಟ್ಟು ಹೆಚ್ಚು ಮಾಡುತ್ತಲೇ ಬಂದಿವೆ. ಇದರಿಂದ ‘ವೈದ್ಯಸೇವೆ’ ಎಂಬ ಪದವನ್ನು ಅಚ್ಚುಕಟ್ಟಾಗಿ ದೂರಸರಿಸಿ ವೈದ್ಯಲೋಕವನ್ನು ಹಣ ಹೂಡಿ ಹಣ ಗಳಿಸುವ ದಂಧೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ.
ಮೀಸಲಾತಿಯಿಂದ ಪ್ರತಿಭೆಗೆ ಧಕ್ಕೆ ಒದಗುತ್ತಿದೆ ಎನ್ನುವವರು ಇದಕ್ಕೆ ಏನು ಹೇಳುತ್ತಿದ್ದಾರೆ. ಸರಾಸರಿ ಅಂಕ ಗಳಿಕೆಯಲ್ಲೂ ಕಡಿಮೆ ಇರುವ ಅನೇಕ ವಿದ್ಯಾರ್ಥಿಗಳು ಖಾಸಗಿ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ವೈದ್ಯಕೀಯ ಪದವಿಯನ್ನು ಪಡೆಯುತ್ತಿದ್ದಾರೆ. ಹಾಗಿದ್ದರೆ ಇವರೆಲ್ಲ ಪ್ರತಿಭಾವಂತರೆ? ಅರ್ಹತೆಯನ್ನು ಅಂಕಗಳಲ್ಲಿ ಅಳೆದು ‘ಮೀಸಲಾತಿಯಿಂದ ಕಡಿಮೆ ಅಂಕಗಳಿಸಿ ಬಂದವರು ವೈದ್ಯ ವೃತ್ತಿಯನ್ನು ಸರಿಯಾಗಿ ನಿಭಾಯಿಸಬಲ್ಲರೆ’ ಎನ್ನುವವರೇನೂ ಇಲ್ಲಿ ಕಡಿಮೆಯಿಲ್ಲ. ಕಡಿಮೆ ಅಂಕ ಗಳಿಸಿ ದುಡ್ಡಿನಿಂದ ಸೀಟು ಖರೀದಿಸುತ್ತಿರುವ ಹಣವಂತ ಪಡೆಗೆ ಅರ್ಹತೆಯ ಮಾನದಂಡವನ್ನು ಇವರೆಲ್ಲ ಹಿಡಿಯಬಲ್ಲರೆ? ಇವರ ಯಾವ ಮನಸ್ಸುಗಳೂ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಹೋಗಲಿ, ಇಂತಹ ವಿದ್ಯಾರ್ಥಿಗಳಿಂದ ಎಂತಹ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಲು ಸಾಧ್ಯ? ಈ ಪ್ರಶ್ನೆಯನ್ನು ಇವರಿಗೆ ಕೇಳುವ ಬದಲು ಮೀಸಲಾತಿಯಿಂದ ಬಂದವರಿಗೆ ಕೇಳಲಾಗುತ್ತಿದೆ. ದುಡ್ಡು ಕೊಟ್ಟು ಬಂದವರು ದುಡ್ಡನ್ನು ಸಂಪಾದಿಸಲಷ್ಟೇ ಯೋಚಿಸುತ್ತಾರೆ. ದುಡ್ಡು ಗಳಿಸಬೇಕು ಎನ್ನುವುದರ ಕಡೆ ಇವರ ತುಡಿತವಿದೆ. ಇಲ್ಲಿ ಹಣವೇ ಮೆರಿಟ್ ಆಗುತ್ತಿದೆ. ಇಂತವರಿಂದ ಗುಣಮಟ್ಟವನ್ನು ಅಪೇಕ್ಷಿಸಲು ಸಾಧ್ಯವೇ? ಅಪೇಕ್ಷಿಸಿದರೆ ಎಂತಹ ಗುಣಮಟ್ಟವನ್ನು ಅಪೇಕ್ಷಿಸಬಹುದು. ಇದೊಂದು ರೀತಿಯಲ್ಲಿ ಹಗಲು ದರೋಡೆಗೆ ಪ್ರೇರಣೆ ನೀಡಿದಂತೆಯೇ ಸರಿ. ಹಣವನ್ನು ದ್ವಿಗುಣಗೊಳಿಸುವ ಕಾರಣದಿಂದಾಗಿಯೇ ಕಾರ್ಪೊರೇಟ್ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದ ಮೇಲೆ ಅಪಾರ ಬಂಡವಾಳ ಹೂಡಿ, `ಮೀಸಲಾತಿ ವರ್ಸಸ್ ಮೆರಿಟ್’ ಎಂಬ ಅಪ್ಪಟ ಜನವಿರೋಧಿ ಸುಳ್ಳನ್ನು ಹರಡುತ್ತಿದೆ. ಆದರೆ ಭಾರತದ ವಾಸ್ತವಗಳು ಇವರ ದುರ್ಬಲ ಕಲ್ಪನೆಗಳನ್ನು ಮೀರಿ ಬೆಳೆಯುತ್ತಿವೆ. ಈ ದೇಶದ ಜನತಂತ್ರ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತೆಯನ್ನು ಉಳಿಸುವುದೆಂದರೆ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು, ಆ ವಾಸ್ತವಗಳ ಬೆಳಕಲ್ಲಿ ಹೊಸ ಭಾರತವನ್ನು ಕಟ್ಟುವುದೇ ಆಗಿದೆ.
ಯಾವ ಕ್ಷೇತ್ರದಲ್ಲಿ ಪದೇ ಪದೇ ಮೀಸಲಾತಿಯ ವಿರೋಧಿ ಹೇಳಿಕೆಗಳು ಹೊರಬಂದು ಪ್ರತಿಭೆ ಪ್ರಶ್ನೆಯನ್ನು ಮುಂದಿಡಲಾಗುತ್ತಿದೆಯೋ ಆ ಕ್ಷೇತ್ರದಲ್ಲಿಯೇ ದುಡ್ಡಿನಿಂದ ಪದವಿಯನ್ನು ಕೊಳ್ಳುವ ದಂಧೆ ಎಗ್ಗಿಲ್ಲದೇ ಸಾಗಿದೆ. ಈ ಪಿಡುಗು ವೈದ್ಯಕೀಯ ಶಿಕ್ಷಣಕ್ಕೆ ಮಾತ್ರ ಸೀಮಿತವಾದುದಲ್ಲ; ಪೇಮೆಂಟ್ ಕೋಟಾ ಹೆಸರಿನಲ್ಲಿ ಯಾವ ಪದವಿಯ ಅಂಕಗಳಿಗೂ ಮಾನ್ಯತೆ ಕೊಡದೆ ತುಂಬಲಾಗುತ್ತಿದೆ. ಅಂಕ ಕಡಿಮೆ ಇದ್ದರೂ ಹಣ ಕೊಟ್ಟು ಯಾವ ಪದವಿಗಾದರೂ ಸೇರಬಹುದು. ಆದರೆ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸರಾಸರಿ ಅಂಕ ಹೊಂದಿರುವ ವಿದ್ಯಾರ್ಥಿಗಳು ಮೀಸಲಾತಿ ಕೋಟಾದಲ್ಲಿ ಬಂದರೆ ಅರ್ಹತೆ, ಪ್ರತಿಭೆ ಮಾನದಂಡದ ಪ್ರಶ್ನೆಯನ್ನು ಮುಂಚೂಣಿಗೆ ತಂದು ಹುಯಿಲೆಬ್ಬಿಸಲಾಗುತ್ತದೆ. ಇನ್ನೊಂದು ಅಂಶವನ್ನು ಸ್ಪಷ್ಟಪಡಿಸುವುದಾದರೆ ಇಂದು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗುವ ಅಂಕಗಳಿಗಿಂತ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತಗೊಳ್ಳುವ ಅಂಕ ಒಂದೆರಡು ಕಡಿಮೆ ಅಂಕಗಳಷ್ಟು ಮಾತ್ರ. ಈ ಸತ್ಯ ನಮ್ಮೆಲ್ಲರ ಕಣ್ಣೆದುರಿಗೇ ಇದ್ದರೂ ಪೂರ್ವಗ್ರಹಪೀಡಿತ ಮನಸ್ಥಿತಿಯವರು ಕಣ್ಣುತೆರೆಯಲು ಸಿದ್ಧರಿಲ್ಲ. ಅದಕ್ಕೇನು ಮಾಡುವುದು?

– ಡಾ. ಉಮಾಶಂಕರ್ ಹೆಚ್.ಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...