ಜನ ಸ್ವರಾಜ್ ಪಾರ್ಟಿ (ಜೆಎಸ್‌ಪಿ) ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಕಾನೂನಿಗೆ ವಿರುದ್ಧವಾಗಿ ದತ್ತಿ ಕಂಪನಿಯಿಂದ ತಮ್ಮ ಪಕ್ಷಕ್ಕೆ ಹಣಕಾಸು ಒದಗಿಸುತ್ತಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷವಾದ ಜೆಡಿ(ಯು) ಗುರುವಾರ ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದೆ.
ಜೆಡಿ(ಯು) ಮುಖ್ಯ ವಕ್ತಾರ ಮತ್ತು ಎಂಎಲ್‌ಸಿ ನೀರಜ್ ಕುಮಾರ್ ಅವರು ಕಿಶೋರ್ ಅವರು ಕಂಪನಿಗಳ ಕಾಯ್ದೆಯಡಿಯಲ್ಲಿ ಕಂಪನಿಯಾಗಿ ನೋಂದಾಯಿಸಲಾದ ಜಾಯ್ ಆಫ್ ಗಿವಿಂಗ್ ಗ್ಲೋಬಲ್ ಫೌಂಡೇಶನ್‌ನಿಂದ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಜೆಜಿಜಿಎಫ್ ದತ್ತಿ ಪ್ರತಿಷ್ಠಾನದ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸಿದ್ದು, ತೆರಿಗೆ ವಿನಾಯಿತಿಗಳನ್ನು ಸಹ ಪಡೆದಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2023-24ರ ಅವಧಿಯಲ್ಲಿ ವಿವಿಧ ಕಂಪನಿಗಳಿಂದ ಈ ಫೌಂಡೇಶನ್ 48.75 ಕೋಟಿ ರೂ. ಮೌಲ್ಯದ ದೇಣಿಗೆಗಳನ್ನು ಪಡೆದಿರುವುದರಿಂದ ದತ್ತಿ ಪ್ರತಿಷ್ಠಾನವು ಹಣಕಾಸಿನ ವಹಿವಾಟಿನಲ್ಲಿ ಗಂಭೀರ ಅಕ್ರಮಗಳನ್ನು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ವಿಚಿತ್ರವೆಂದರೆ, ಈ ಕಂಪನಿಗಳ ಬಂಡವಾಳ ಮೂಲವು ಅವರ ದೇಣಿಗೆಗಳಿಗಿಂತ ಕಡಿಮೆಯಾಗಿದ್ದು, ಕಿಶೋರ್ ಅವರು ದತ್ತಿ ಸಂಸ್ಥೆಗೆ 50 ಲಕ್ಷ ರೂ.ಗಳನ್ನು ಏಕೆ ದೇಣಿಗೆ ನೀಡಿದ್ದಾರೆ ಮತ್ತು ಅದು ಅವರ ವೈಯಕ್ತಿಕ ಆದಾಯದಿಂದವೇ ಅಥವಾ “ಲೆಕ್ಕವಿಲ್ಲದ” ಆದಾಯದಿಂದ ಬಂದಿದೆಯೇ ಎಂಬುದನ್ನು ವಿವರಿಸಬೇಕು ಎಂದು ಅವರು ಹೇಳಿದ್ದಾರೆ.
ಕಿಶೋರ್ ಮತ್ತು ಅವರ ಪಕ್ಷದ ಇಬಿಸಿ ಸೆಲ್ ಮುಖ್ಯಸ್ಥ ರಂಬಾಲಿ ಸಿಂಗ್ ಅವರ ಹಣಕಾಸು ಹೇಳಿಕೆಗಳು ಪರಸ್ಪರ ವಿರುದ್ಧವಾಗಿವೆ ಎಂದು ಅವರು ಹೇಳಿದ್ದರೆ. ಪಕ್ಷವು ಯಾವುದೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿಲ್ಲ ಎಂದು ಕಿಶೋರ್ ಹೇಳಿಕೊಂಡರೆ, ಸಿಂಗ್ ಅದಕ್ಕೆ ಬ್ಯಾಂಕ್ ಖಾತೆಯೂ ಇಲ್ಲ ಎಂದು ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರಶಾಂತ್ ಕಿಶೋರ್
ಇತ್ತೀಚೆಗೆ ಪತ್ರಕರ್ತರ ಗುಂಪಿನೊಂದಿಗೆ ಅನೌಪಚಾರಿಕ ಸಂಭಾಷಣೆಯಲ್ಲಿ, ಕಿಶೋರ್ ಅವರು ಚುನಾವಣಾ ತಂತ್ರಜ್ಞರಾಗಿ ಹಲವಾರು ರಾಜಕೀಯ ಪಕ್ಷಗಳಿಗೆ ಕೆಲಸ ಮಾಡಿ ಗಳಿಸಿದ ಹಣದಿಂದ ಪಕ್ಷವನ್ನು ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. “ಪಕ್ಷವನ್ನು ನಡೆಸಲು ನಿಧಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾನು ನನ್ನ ‘ಕೌಶಲ್ಯ’ವನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತೇನೆ” ಎಂದು ಅವರು ಪ್ರಶ್ನೆಗೆ ಉತ್ತರಿಸಿದ್ದರು.
ಇದನ್ನೂಓದಿ: ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ : ಸಿಎಂ ಸಿದ್ದರಾಮಯ್ಯ ನಿರಾಳ
ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ : ಸಿಎಂ ಸಿದ್ದರಾಮಯ್ಯ ನಿರಾಳ


