ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ, ಪ್ರಸ್ತುತ ಜೈಲಿನಲ್ಲಿರುವ ಸಂಸದ ಎಂಜಿನಿಯರ್ ರಶೀದ್ ಅವರಿಗೆ ಸಂಸತ್ ಅಧಿವೇಶನಕ್ಕೆ ಹಾಜರಾಗಲು ಕಸ್ಟಡಿ ಪೆರೋಲ್ ಕೋರಿ ಸಲ್ಲಿಸಿದ್ದ ಅರ್ಜಿಯ ಮೇಲಿನ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದರಾಗಿರುವ ರಶೀದ್ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪರ ಹಾಜರಿದ್ದ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ವಿಕಾಸ್ ಮಹಾಜನ್, “ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ” ಎಂದು ಹೇಳಿದ್ದಾರೆ. ಎಂಜಿನಿಯರ್ ರಶೀದ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎನ್‌ಐಎ ಪರ ಹಾಜರಿದ್ದ ವಕೀಲರು, ಕಸ್ಟಡಿ ಪೆರೋಲ್ ನೀಡುವುದನ್ನು ವಿರೋಧಿಸಿದ್ದು, ರಶೀದ್ ಅವರಿಗೆ ಸಂಸತ್ತಿಗೆ ಹಾಜರಾಗಲು ಯಾವುದೇ ಸ್ಥಾಪಿತ ಹಕ್ಕಿಲ್ಲ ಎಂದು ಹೇಳಿದ್ದಾರೆ. ಪರೋಲ್ ಪರಿಹಾರ ಕೋರುವಾಗ ಅವರು ಯಾವುದೇ “ನಿರ್ದಿಷ್ಟ ಉದ್ದೇಶ” ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಸಂಸದ ರಶೀದ್ ಅವರು ಜೈಲಿನಲ್ಲಿ ಇದ್ದರೆ ಸಂಸತ್ತಿನಲ್ಲಿ ಅವರ ಕ್ಷೇತ್ರವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದು, ಹಾಗಾಗಿ ಅವರಿಗೆ ಅಧಿವೇಶನಕ್ಕೆ ಹಾಜರಾಗಲು ಅವಕಾಶ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ.
“ನಾನು ಜಮ್ಮು ಕಾಶ್ಮೀರದ ಅತಿದೊಡ್ಡ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ. ಅಧಿವೇಶನ ಪ್ರಕ್ರಿಯೆಯಿಂದ ನಮ್ಮ ಕ್ಷೇತ್ರದ ಪ್ರಾತಿನಿಧ್ಯವನ್ನು ತಡೆಯಬೇಡಿ… ಕ್ಷೇತ್ರದ ಧ್ವನಿಯನ್ನು ಹತ್ತಿಕ್ಕಬೇಡಿ” ಎಂದು ಅವರ ಪರ ವಕೀಲರು ವಾದಿಸಿದ್ದಾರೆ.
ತಮ್ಮ ಅರ್ಜಿಯಲ್ಲಿ ರಶೀದ್ ಅವರು, ಎನ್‌ಐಎ ನ್ಯಾಯಾಲಯವು ತಮ್ಮ ಬಾಕಿ ಇರುವ ಜಾಮೀನು ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನಿರ್ದೇಶಿಸಬೇಕು ಅಥವಾ ವಿಷಯವನ್ನು ಸ್ವತಃ ನಿರ್ಧರಿಸಬೇಕು ಎಂದು ಹೈಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.
2017 ರ ಭಯೋತ್ಪಾದನಾ ಹಣಕಾಸು ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಎನ್‌ಐಎ ಅವರನ್ನು ಬಂಧಿಸಿತ್ತು. ಇದರ ನಂತರ 2019 ರಿಂದ ರಶೀದ್ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಇದನ್ನೂಓದಿ: ತಮಿಳುನಾಡು| ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಶಾಲೆಯನ್ನು ಧ್ವಂಸಗೊಳಿಸಿದ ಪೋಷಕರು
ತಮಿಳುನಾಡು| ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಶಾಲೆಯನ್ನು ಧ್ವಂಸಗೊಳಿಸಿದ ಪೋಷಕರು


