ರಾಷ್ಟ್ರ ರಾಜಧಾನಿಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿರುವ ಮಧ್ಯೆ, ದೆಹಲಿಯ ಮುಂದಿನ ಮುಖ್ಯಮಂತ್ರಿ ಬಿಜೆಪಿಯವರಾಗಿರಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವೀರೇಂಧ್ರ ಸಚ್‌ದೇವ ಶನಿವಾರ ಹೇಳಿದ್ದಾರೆ. ಅದಾಗ್ಯೂ, ಪಕ್ಷದ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ. ದೆಹಲಿಗೆ ಬಿಜೆಪಿ ಸಿಎಂ
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಮಧ್ಯಾಹ್ನ 12.40ರ ವೇಳೆಗೆ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಆಡಳಿತರೂಢ ಎಎಪಿ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ದೆಹಲಿಗೆ ಬಿಜೆಪಿ ಸಿಎಂ
“ಇದುವರೆಗಿನ ಫಲಿತಾಂಶಗಳು ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿವೆ. ಆದರೆ ನಾವು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತೇವೆ” ಎಂದು ಕನ್ನಾಟ್ ಪ್ಲೇಸ್‌ನ ಹನುಮಾನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಚ್‌ದೇವ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಜೆಪಿ ಅಭ್ಯರ್ಥಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದು, ದೆಹಲಿಯ ಮತದಾರರು ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ಮಾದರಿಯನ್ನು ಆರಿಸಿಕೊಂಡಿದ್ದಾರೆ ಎಂದು ಸಚ್‌ದೇವ ಅವರು ಹೇಳಿದ್ದು, “ಅಭಿವೃದ್ಧಿಯ ಮಾದರಿಯನ್ನು ಬಯಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಜನರು ಆರಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ “ಡಬಲ್-ಎಂಜಿನ್ ಸರ್ಕಾರ”ವನ್ನು ರಚಿಸುತ್ತದೆ ಎಂದು ಪ್ರತಿಪಾದಿಸಿದ ಅವರು, “ಈ ಗೆಲುವು ಪ್ರಧಾನಿ ಮೋದಿಯವರ ದೂರದೃಷ್ಟಿಯ ಪರಿಣಾಮ ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ದೆಹಲಿಗೆ ಬಲವಾದ ಮತ್ತು ಸ್ಥಿರವಾದ ಸರ್ಕಾರ ಸಿಗುವುದನ್ನು ನಾವು ಖಚಿತಪಡಿಸುತ್ತೇವೆ.” ಎಂದು ತಿಳಿಸಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷವನ್ನು ಟೀಕಿಸಿದ ಅವರು, ದೆಹಲಿಯ ಜನರ ಮೇಲೆ ಪರಿಣಾಮ ಬೀರುವ ನಿಜವಾದ ಸಮಸ್ಯೆಗಳಾದ ಹದಗೆಟ್ಟ ರಸ್ತೆಗಳು, ಮದ್ಯ ನೀತಿ ವಿವಾದಗಳು, ಕೊಳಕು ನೀರು ಮತ್ತು ಭ್ರಷ್ಟಾಚಾರದ ಮೇಲೆ ಬಿಜೆಪಿ ಚುನಾವಣೆಗಳನ್ನು ಎದುರಿಸಿದೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸಚ್‌ದೇವ್, “ನಾವು ಈ ವಿಷಯಗಳ ಬಗ್ಗೆ ಅವರನ್ನು ಪ್ರಶ್ನಿಸಿದಾಗಲೆಲ್ಲಾ ಅವರು ಮೌನವಾಗಿರುತ್ತಿದ್ದರು ಅಥವಾ ಓಡಿಹೋಗುತ್ತಿದ್ದರು. ಅವರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸಿದರು” ಎಂದು ಸಚ್‌ದೇವ್ ಹೇಳಿದ್ದಾರೆ.
ದೆಹಲಿಯ ಜನರು ಬಿಜೆಪಿಯ ಹೋರಾಟಗಳನ್ನು ಅರ್ಥಮಾಡಿಕೊಂಡಿದ್ದು, ಬದಲಾವಣೆಗೆ ಮತ ಹಾಕಿದ್ದಾರೆ. ದೆಹಲಿಯ ನೋವು ನಿಜವಾಗಿದ್ದು, ಜನರು ಪ್ರಧಾನಿ ಮೋದಿಯವರ ನಾಯಕತ್ವವನ್ನು ಆಯ್ಕೆ ಮಾಡುವ ಮೂಲಕ ಅದನ್ನು ಕೊನೆಗೊಳಿಸಲು ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ದೆಹಲಿ ಫಲಿತಾಂಶ | ಮ್ಯಾಜಿಕ್ ನಂಬರ್ ದಾಟಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ : ಎಎಪಿಯ ಘಟಾನುಘಟಿಗಳಿಗೆ ಹಿನ್ನಡೆ!
ದೆಹಲಿ ಫಲಿತಾಂಶ | ಮ್ಯಾಜಿಕ್ ನಂಬರ್ ದಾಟಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ : ಎಎಪಿಯ ಘಟಾನುಘಟಿಗಳಿಗೆ ಹಿನ್ನಡೆ!


