ಎಂ. ಮೋಹನನ್ ನಿರ್ದೇಶನದ, ವಿನೀತ್ ಶ್ರೀನಿವಾಸನ್ ಮತ್ತು ನಿಖಿಲಾ ವಿಮಲ್ ನಟಿಸಿರುವ ಮಲಯಾಳಂ ಚಲನಚಿತ್ರ ‘ಒರು ಜಾತಿ ಜಾತಕಂ’ನಲ್ಲಿ LGBTQIA+ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯನ್ನು ಕೇರಳ ಹೈಕೋರ್ಟ್ ಸ್ವೀಕರಿಸಿದೆ.
LGBTQIA+ ಸಮುದಾಯದ ಪ್ರತಿನಿಧಿ ಮತ್ತು ಕೇರಳದ ಅಲಪ್ಪುಝ ನಿವಾಸಿ ಶಾಖಿಯಾ ಎಸ್ ಪ್ರಿಯಂವದ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ವರದಿಗಳ ಪ್ರಕಾರ, ನಿರ್ಮಾಪಕ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಲಿದೆ.
LGBTQIA+ ಸಮುದಾಯದವನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವ ಕೆಲವು ಕೆಲವು ಪದಗಳು ಮತ್ತು ಸಂಭಾಷಣೆಗಳು ಸಿನಿಮಾದಲ್ಲಿವೆ. ಈ ಪದಗಳು ತಾರತಮ್ಯವನ್ನು ಉತ್ತೇಜಿಸುತ್ತವೆ. ಮಾನವ ಘನತೆಯನ್ನು ಕುಗ್ಗಿಸುತ್ತದೆ. ಸಮುದಾಯದ ವಿರುದ್ದ ಹಾನಿಕಾರಕ ಸಂದೇಶವನ್ನು ಕಟ್ಟಿಕೊಡುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಭಾರತದ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), ವಿಧಿ 19 (ಸಮಂಜಸವಾದ ನಿರ್ಬಂಧಗಳೊಂದಿಗೆ ವಾಕ್ ಸ್ವಾತಂತ್ರ್ಯ) ಮತ್ತು ವಿಧಿ 21 (ಜೀವನ ಮತ್ತು ಘನತೆಯ ಹಕ್ಕು) ಅಡಿಯಲ್ಲಿ LGBTQ+ ವ್ಯಕ್ತಿಗಳು ಸೇರಿದಂತೆ ಪ್ರತಿಯೊಬ್ಬರೂ ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
‘ಒರು ಜಾತಿ ಜಾತಕಂ’ ಸಿನಿಮಾ ಜನವರಿ 31, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಕಥೆಯನ್ನು ರಾಕೇಶ್ ಮಂಟೋಡಿ ಬರೆದಿದ್ದಾರೆ ಮತ್ತು ಮಹಾ ಝುಬೈರ್ ಮತ್ತು ವರ್ಣಚಿತ್ರ ಬಿಗ್ ಸ್ಕ್ರೀನ್ ನಿರ್ಮಿಸಿದ್ದಾರೆ. ಬಾಬು ಆಂಟನಿ, ಇಶಾ ತಲ್ವಾರ್, ಪೂಜಾ ಮೋಹನರಾಜ್, ಸಯನೋರಾ ಫಿಲಿಪ್ ಮತ್ತು ಪಿಪಿ ಕುಂಞಿಕೃಷ್ಣನ್ ಅವರಂತಹ ಜನಪ್ರಿಯ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಕಥೆಯು ಕೇರಳದ ಉತ್ತರ ಜಿಲ್ಲೆಯೊಂದರ 37 ವರ್ಷದ ಜಯೇಶ್ (ವಿನೀತ್) ಎಂಬಾತನ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಅರೇಂಜ್ ವಿವಾಹ ಆಗಲು ಬಯಸುವ ವ್ಯಕ್ತಿ ಮಹಿಳೆಯರ ಚರ್ಮದ ಬಣ್ಣ ಅಥವಾ ಮದುವೆಯ ನಂತರ ಕೆಲಸ ಮಾಡುವ ಆಯ್ಕೆಯ ಆಧಾರದ ಮೇಲೆ ಅವರನ್ನು ತಿರಸ್ಕರಿಸುವ ವಿಷಯವಿದೆ. ಚಿತ್ರದ ಕುರಿತು ದಿ ನ್ಯೂಸ್ ಮಿನಿಟ್‌ನಲ್ಲಿ ಪ್ರಕಟಗೊಂಡಿರುವ ವಿಮರ್ಶೆಯಲ್ಲಿ, “ವಿಫಲ ಹಾಸ್ಯದಿಂದ ಹಿಡಿದು ಸಲಿಂಗಕಾಮಿ ಸಮುದಾಯದ ಸಂಪೂರ್ಣ ಅಸಹ್ಯಕರ ಚಿತ್ರಣದವರೆಗೆ ಹಲವು ವಿಭಿನ್ನ ರೀತಿಯ ತಪ್ಪುಗಳು ಚಿತ್ರದಲ್ಲಿವೆ ಎಂದು ವಿಮರ್ಶಕ ಕ್ರಿಸ್ ಬರೆದಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರಕ್ಕೆ ನಿರ್ಬಂಧ
LGBTQIA+ ಸಮುದಾಯದ ವಿಷಯವನ್ನು ಇಟ್ಟುಕೊಂಡು ಮಾಡಿರುವ ಹಿನ್ನೆಲೆ ‘ಒರು ಜಾತಿ ಜಾತಕಂ’ ಸಿನಿಮಾದ ಪ್ರದರ್ಶನಕ್ಕೆ ಅನೇಕ ಗಲ್ಫ್ ದೇಶದಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಯಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೌದಿ ಅರೇಬಿಯಾ ಮತ್ತು ಕತಾರ್ ಸೇರಿದಂತೆ ಅನೇಕ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾಗೆ ನಿರ್ಬಂಧ ವಿಧಿಸಲಾಗಿದೆ. ಒಮಾನ್‌ನಲ್ಲಿ ಮಾತ್ರ ನಿರ್ಬಂಧಿಸಿಲ್ಲ ಎಂದು ವರದಿಗಳು ಹೇಳಿವೆ.
The Malayalam film, Vineeth Sreenivasan's #OruJaathiJathakam banned in all GCC countries except Oman due to its LGBTQ references! pic.twitter.com/QWOyubQHtq
— Sreedhar Pillai (@sri50) January 30, 2025
ಪೊಲೀಸ್ ಚಿತ್ರಹಿಂಸೆ ಆರೋಪಿಸಿ ಯುವಕ ಆತ್ಮಹತ್ಯೆ ಪ್ರಕರಣ : ತನಿಖೆಗೆ ಆದೇಶ


