ಕೇರಳದ ಕೊಟ್ಟಾಯಂ ಜಿಲ್ಲೆಯ ನರ್ಸಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ತಮ್ಮ ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ರ‍್ಯಾಗ್ ಮಾಡಿದ್ದಕ್ಕಾಗಿ ಬಂಧಿಸಲಾಗಿರುವ ಘಟನೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಕೇರಳ
ಬಂಧನಕ್ಕೆ ಒಳಗಾದದವರನ್ನು ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್, ಎನ್.ಎಸ್. ಜೀವಾ, ಕೆ.ಪಿ. ರಾಹುಲ್ ರಾಜ್, ಸಿ. ರಿಜಿಲ್ ಜಿತ್ ಮತ್ತು ವಿವೇಕ್ ಎನ್.ಪಿ. ಎಂದು ಗುರುತಿಸಲಾಗಿದೆ. ಇವರ ಬಂಧನದ ನಂತರ, ಇವರು ನಡೆಸುತ್ತಿರುವ ನಿರಂತರ ರ‍್ಯಾಗ್ ಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಗುಂಪು ನವೆಂಬರ್ 2024 ರಿಂದ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ರ‍್ಯಾಗ್ ಹೆಸರಿನಲ್ಲಿ ಕಿರುಕುಳ ನೀಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಕಿರುಕುಳವನ್ನು ಸಹಿಸಲಾಗದೆ, ಮೂವರು ಪ್ರಥಮ ವರ್ಷದ ವಿದ್ಯಾರ್ಥಿಗಳು ಹತ್ತಿರದ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ವಿದ್ಯಾರ್ಥಿಗಳು ನೀಡಿದ ದೂರು ದುಷ್ಕರ್ಮಿಗಳು ನೀಡುತ್ತಿದ್ದ ಕಿರುಕುಳದ ಹಿಂಸಾತ್ಮಕ ಕೃತ್ಯಗಳನ್ನು ವಿವರಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ
ಆರೋಪಿಗಳು, ಜೂನಿಯರ್ ವಿದ್ಯಾರ್ಥಿನಿಯರ ದೇಹದ ಮೇಲೆ ಇರಿದು ಗಾಯ ಮಾಡಿ, ಈ ಗಾಯಗಳಿಗೆ ಲೋಷನ್ ಸುರಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಸಂತ್ರಸ್ತರು ನೋವಿನಿಂದ ಕೂಗಿದಾಗ, ಆರೋಪಿಗಳು ಅವರ ಬಾಯಿ ಮತ್ತು ದೇಹದ ಭಾಗಗಳಿಗೆ ಕ್ರೀಮ್ ಹಚ್ಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನಿಯರ್ ವಿದ್ಯಾರ್ಥಿಗಳನ್ನು ನಗ್ನಗೊಳಿಸಿ, ಅವರ ಖಾಸಗಿ ಭಾಗಗಳಿಗೆ ಡಂಬ್ಬೆಲ್‌ಗಳನ್ನು ನೇತುಹಾಕುತ್ತಿದ್ದರು ಎಂದು ಎಂದು ದೂರಿನಲ್ಲಿ ಹೇಳಲಾಗಿದೆ. ಆರೋಪಿಗಳು ಜಾಮೆಟ್ರಿ ಬಾಕ್ಸ್‌ನಲ್ಲಿ ಇರುವ ಉಪಕರಣಗಳನ್ನು ಬಳಸಿ ಗಾಯಗೊಳಿಸುತ್ತಿದ್ದರು ಎಂದು ವರದಿಯಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರ‍್ಯಾಗಿಂಗ್‌ಗೆ ಸಂಬಂಧಿಸಿದ ಎಲ್ಲಾ ಐದು ವಿದ್ಯಾರ್ಥಿಗಳನ್ನು ಅವರ ಕಾಲೇಜು ಸಹ ಅಮಾನತುಗೊಳಿಸಿದೆ. ರ‍್ಯಾಗಿಂಗ್ ವಿರೋಧಿ ಕಾಯ್ದೆಯಡಿ ತನಿಖೆ ನಡೆಸಿದ ನಂತರ ಕಾಲೇಜು ಪ್ರಾಂಶುಪಾಲರು ಈ ಕ್ರಮ ಕೈಗೊಂಡಿದ್ದಾರೆ.
ರ‍್ಯಾಗಿಂಗ್ ಬಗ್ಗೆ ವಿದ್ಯಾರ್ಥಿಗಳು ಕಾಲೇಜಿಗೆ ಮಾಹಿತಿ ನೀಡಿರಲಿಲ್ಲ ಎಂದು ಉಸ್ತುವಾರಿ ಪ್ರಾಂಶುಪಾಲರಾದ ಡಾ. ಲಿನಿ ಜೋಸೆಫ್ ಹೇಳಿದ್ದಾರೆ.
“ಪೋಷಕರು ತರಗತಿ ಶಿಕ್ಷಕರಿಗೆ ಈ ಬಗ್ಗೆ ತಿಳಿಸಲು ಕರೆ ಮಾಡಿದರು. ದೂರು ಸ್ವೀಕರಿಸಿದ ನಂತರ, ಪ್ರಾಥಮಿಕ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಯಿತು. ವಿವರವಾದ ತನಿಖೆಗಾಗಿ ಇಂದು (ಫೆಬ್ರವರಿ 12) ಸಮಿತಿಯನ್ನು ನೇಮಿಸಲಾಗುವುದು. ವಿದ್ಯಾರ್ಥಿಗಳ ವಿರುದ್ಧ ಮುಂದಿನ ಕ್ರಮದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.
“ತನಿಖೆಯ ಭಾಗವಾಗಿ ನಾವು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದೇವೆ. ನಾವು ದೂರನ್ನು ಗಾಂಧಿನಗರ SHO (ಸ್ಟೇಷನ್ ಹೌಸ್ ಆಫೀಸರ್) ಮತ್ತು ಕೊಟ್ಟಾಯಂ ಪೊಲೀಸ್ ವರಿಷ್ಠಾಧಿಕಾರಿಗೆ ರವಾನಿಸಿದ್ದೇವೆ. ನಿನ್ನೆ, ಪೊಲೀಸರು ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಆರೋಪಿಗಳನ್ನು ಭೇಟಿಯಾದರು. ಈ ವೇಳೆ ಇಬ್ಬರು ಸಂತ್ರಸ್ತರನ್ನು ಪೊಲೀಸ್ ಠಾಣೆಗೆ ಬರಲು ಕೇಳಲಾಯಿತು. ನಾವು ಅವರನ್ನು ನಮ್ಮ ಸಹಾಯಕ ವಾರ್ಡನ್ ಮತ್ತು ಪುರುಷ ಅಧ್ಯಾಪಕರೊಂದಿಗೆ ಕಳುಹಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಒಳ ಮೀಸಲಾತಿ | ಜಸ್ಟೀಸ್ ನಾಗಮೋಹನ್ ದಾಸ್ ಭೇಟಿಯಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟ ಪ.ಜಾತಿಗಳ ಒಕ್ಕೂಟ
ಒಳ ಮೀಸಲಾತಿ | ಜಸ್ಟೀಸ್ ನಾಗಮೋಹನ್ ದಾಸ್ ಭೇಟಿಯಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟ ಪ.ಜಾತಿಗಳ ಒಕ್ಕೂಟ


