- Advertisement -
- Advertisement -
ಜೆಎನ್‌ಯು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ಣಾಟಕದ ಹಂಪಿ ಕನ್ನಡ ವಿ.ವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಕೂಡಲೇ ಜೆಎನ್‌ಯುನಲ್ಲಿ ಫೀಸು ಹೆಚ್ಚಳದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಅಲ್ಲದೇ ಅಮಾಯಕ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಲ್ಲದೇ ಎಫ್‌ಐಆರ್ ಕೂಡ ಹಾಕಿದ್ದಾರೆ. ಅದನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ಹಂಪಿ ವಿ.ವಿಯಲ್ಲಿಯೂ ಸಹ ಎರಡು ವರ್ಷದಿಂದ ದಲಿತ, ಹಿಂದುಳಿದ ವಿದ್ಯಾರ್ಥಿಗಳಿಗೆ ಫೆಲೊಶಿಪ್ ಬಂದಿಲ್ಲ ಅದನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಬಯಲು ಚಿಂತನಾ ಸಂಶೋಧನಾ ವಿದ್ಯಾರ್ಥಿಗಳ ಬಳಗದ ವತಿಯಿಂದ ನೀಡಲಾದ ಮನವಿ ಪತ್ರವನ್ನು ರಿಜಿಸ್ಟ್ರಾರ್ ಸುಬ್ಬಣ್ಣ ರೈರವರು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಶೈಲಜ, ಉಪನ್ಯಾಸಕರಾದ ಪಾಂಡುರಂಗಬಾಬು, ಅಶೋಕ್ ಕುಮಾರ್ ವಿದ್ಯಾರ್ಥಿ ಮುಖಂಡರಾದ ಸಂತೋಷ್ ಎಚ್.ಎಂ, ಮುನಿರಾಜ್, ಸಂಗಮೇಶ್, ರಾಗಿಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.


