ಹಿರಿಯ ವಕೀಲ ವಿವೇಕ್ ಸುಬ್ಬಾ ರೆಡ್ಡಿ ಅವರು ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. ಅವರು ದಾಖಲೆಯ 6,820 ಮತಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಸುಬ್ಬಾ ರೆಡ್ಡಿ ಅವರ ಹತ್ತಿರದ ಎದುರಾಳಿ, ಎಎಬಿ ಮಾಜಿ ಅಧ್ಯಕ್ಷ ರಂಗನಾಥ್ ಎಪಿ ಅವರು 4,518 ಮತಗಳನ್ನು ಪಡೆದರು. ಕಣದಲ್ಲಿದ್ದ ಇತರ ಅಭ್ಯರ್ಥಿಗಳಲ್ಲಿ ರಾಜಣ್ಣ ಆರ್ (1,473 ಮತಗಳು), ನಂಜಪ್ಪ ಕಾಳೇಗೌಡ (123 ಮತಗಳು), ರವಿ ಟಿ ಜಿ (378 ಮತಗಳು) ಮತ್ತು ರಾಜಶೇಖರ ಟಿಎ (90 ಮತಗಳು) ಪಡೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಕೀಲರಾದ ಗಿರೀಶ್ ಕುಮಾರ್ ಸಿಎಸ್ ಅವರು ತಮ್ಮ ಹತ್ತಿರದ ಎದುರಾಳಿ ಸಿಆರ್ ಗೌಡ ಅವರನ್ನು 3,128 ಮತಗಳನ್ನು ಗಳಿಸಿ ಸೋಲಿಸುವ ಮೂಲಕ 5,060 ಮತಗಳೊಂದಿಗೆ ಎಎಬಿಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಇತರ ಅಭ್ಯರ್ಥಿಗಳಾದ ವೇದಮೂರ್ತಿ ಎ. ಸಂತೋಷ್ ಟಿಸಿ, ಸುವರ್ಣ ಆರ್ ಮತ್ತು ವೆಂಕಟ ರೆಡ್ಡಿ ಕ್ರಮವಾಗಿ 2,806, 1,542, 421 ಮತ್ತು 237 ಮತಗಳನ್ನು ಪಡೆದಿದ್ದಾರೆ.
ಪ್ರವೀಣ್ ಗೌಡ ಎಚ್.ವಿ. ಅವರು 4,854 ಮತಗಳೊಂದಿಗೆ ಎಎಬಿಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಗೆದ್ದರೆ, ಅವರ ಪ್ರತಿಸ್ಪರ್ಧಿಗಳಾದ ಹರೀಶ ಎಂ.ಟಿ 3,728 ಮತಗಳನ್ನು ಪಡೆದರು. ಇದೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಮೂರ್ತಿ (2,321 ಮತಗಳು), ಅಕ್ಕಿ ಮಂಜುನಾಥ್ ಗೌಡ (2,188 ಮತಗಳು) ಮತ್ತು ಚಂದ್ರಶೇಖರ್ ಎಂ.ಎಚ್. 124 ಮತಗಳನ್ನು ಪಡೆದಿದ್ದಾರೆ.
ಸಂಘದ ಖಜಾಂಚಿ ಸ್ಥಾನವು ಮಹಿಳೆಯರಿಗೆ ಮೀಸಲಾಗಿದ್ದು, ಈ ಹುದ್ದೆಗೆ ತೀವ್ರ ಪೈಪೋಟಿಯ ನಂತರ ಶ್ವೇತಾ ರವಿಶಂಕರ್ ಅವರು 2,950 ಮತಗಳೊಂದಿಗೆ ಸಂಘದ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಅವರ ಹತ್ತಿರದ ಎದುರಾಳಿ ಗೀತಾ ರಾಜ್ 1,860 ಮತಗಳನ್ನು ಪಡೆದರು.
ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಮತಾ ಕೆ.ವಿ (1,760 ಮತಗಳು), ಶೈಲಜಾ ಕೆ (1,267 ಮತಗಳು), ಹೇಮಲತಾ ವಿ (1,142 ಮತಗಳು), ಮೀನಾಕ್ಷಿ ಕೆ (636 ಮತಗಳು), ಮಂಜುಳಾ ಎಲ್ (534 ಮತಗಳು), ಮಂಜುಳಾ ಪಿ (500 ಮತಗಳು), ಸಂಧ್ಯಾ ಜಮದಗ್ನಿ (497 ಮತಗಳು), ಅನಿತಾ (497 ಮತಗಳು), ಅನಿತಾ (495 ಮತಗಳು), ವಹೀದಾ ಎಂಎಂ (357 ಮತಗಳು), ಮಂಜುಳಮ್ಮ ಎಂ (274 ಮತಗಳು), ಸುಧಾ ಜಿ (253 ಮತಗಳು), ಸುಧಾ ಎಸ್ (215 ಮತಗಳು) ಮತ್ತು ರುಖಿಯಾಬಿ (196 ಮತಗಳು) ಪಡೆದಿದ್ದಾರೆ.
ಇದನ್ನೂಓದಿ: ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆದರೆ ತಪ್ಪೇನಿಲ್ಲ: ಸಚಿವ ಶಿವಾನಂದ ಪಾಟೀಲ್
ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆದರೆ ತಪ್ಪೇನಿಲ್ಲ: ಸಚಿವ ಶಿವಾನಂದ ಪಾಟೀಲ್


