ಸುಮಾರು 18 ರಷ್ಟು ದುಷ್ಕರ್ಮಿಗಳು ಮೂವರು ಅಪ್ರಾಪ್ತ ಆದಿವಾಸಿ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‌ನ ಉಲಿಹಾಟು ಗ್ರಾಮದ ಖುಂಟಿಯ ರಾನಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದಿದೆ. ಘಟನೆ ಫೆಬ್ರವರಿ 21 ರಂದು ತಡರಾತ್ರಿ ನಡೆದಿದ್ದು, ಆರೋಪಿಗಳೆಲ್ಲರೂ ಅಪ್ರಾಪ್ತ ಬಾಲಕರಾಗಿದ್ದಾರೆ ಎಂದು ವರದಿ ಹೇಳಿದೆ.
ಉಲಿಹಾಟುವಿನಿಂದ ನಿಚಿತ್‌ಪುರಕ್ಕೆ ಹೋಗುವ ದಾರಿಯಲ್ಲಿ ಕರೋ ನದಿಯ ಬಳಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದ ಐದು ಹುಡುಗಿಯರನ್ನು 18 ಅಪ್ರಾಪ್ತ ಬಾಲಕರು ದಾರಿಯಲ್ಲಿ ತಡೆದಿದ್ದರು. ಅವರಲ್ಲಿ ಕೆಲವರು ಮೂವರು ಹುಡುಗಿಯರ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮೂವರು ಅಪ್ರಾಪ್ತ ಆದಿವಾಸಿ
ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಹುಡುಗರು ಸಂತ್ರಸ್ತರಿಗೆ ಬೆದರಿಕೆ ಹಾಕಿದ್ದಾರೆ. ಆದರೆ, ಹುಡುಗಿಯರು ತಮ್ಮ ಮನೆಗೆ ತಲುಪಿ ಶನಿವಾರ ತಮ್ಮ ಕುಟುಂಬಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ಗ್ರಾಮಸ್ಥರೊಂದಿಗೆ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೂವರು ಸಂತ್ರಸ್ತ ಬಾಲಕಿಯರು ನೀಡಿದ ಹೇಳಿಕೆಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಎಲ್ಲಾ 18 ಆರೋಪಿ ಅಪ್ರಾಪ್ತ ವಯಸ್ಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಖುಂಟಿ ಎಸ್‌ಪಿ ಮಾಹಿತಿ ನೀಡಿದ್ದಾರೆ. ಆರೋಪಿಗಳು ಮತ್ತು ಸಂತ್ರಸ್ತ ಬಾಲಕಿಯರು ಒಂದೇ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದರು ಎಂದು ಅವರು ಹೇಳಿದ್ದಾರೆ.
“ಮೂವರು ಅಪ್ರಾಪ್ತ ಬುಡಕಟ್ಟು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ತನಿಖೆಯನ್ನು ತೀವ್ರಗೊಳಿಸಲಾಗಿದೆ. ಪ್ರಕರಣದಲ್ಲಿ ಎಲ್ಲಾ 18 ಆರೋಪಿ ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ” ಎಂದು ಖುಂಟಿ ಎಸ್ಪಿ ಅಮನ್ ಕುಮಾರ್ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜಾತಿ ದೌರ್ಜನ್ಯ ವಿರೋಧಿಸಿ ಪುಣೆಯಿಂದ ಮುಂಬೈಗೆ ದಲಿತ ಕುಟುಂಬದ ಪಾದಯಾತ್ರೆ
ಜಾತಿ ದೌರ್ಜನ್ಯ ವಿರೋಧಿಸಿ ಪುಣೆಯಿಂದ ಮುಂಬೈಗೆ ದಲಿತ ಕುಟುಂಬದ ಪಾದಯಾತ್ರೆ

