ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಮಂಗಳವಾರ (ಫೆ.25) ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
ಸಿಖ್ ವಿರೋಧಿ ದಂಗೆಯ ವೇಳೆ, 1984ರ ನವೆಂಬರ್ 1ರಂದು ದೆಹಲಿಯ ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರಿಗೆ ಮರಣದಂಡನೆ ವಿಧಿಸುವಂತೆ ಜಸ್ವಂತ್ ಅವರ ಪತ್ನಿ ಕೋರಿದ್ದರು.
ಪ್ರಸ್ತುತ ಸಜ್ಜನ್ ಕುಮಾರ್ ತಿಹಾರ್ ಜೈಲಿನಲ್ಲಿದ್ದಾರೆ. ಫೆ.12ರಂದು ನ್ಯಾಯಾಲಯವು ಪ್ರಕರಣದಲ್ಲಿ ಸಜ್ಜನ್ ಕುಮಾರ್ ದೋಷಿ ಎಂದು ಘೋಷಿಸಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮಾರಕ ಆಯುಧಗಳನ್ನು ಹಿಡಿದ ಬೃಹತ್ ಗುಂಪೊಂದು ದೊಡ್ಡ ಪ್ರಮಾಣದಲ್ಲಿ ಸಿಖ್ಖರನ್ನು ಲೂಟಿ ಮಾಡಿತ್ತು. ಬೆಂಕಿ ಹಚ್ಚು ಅವರ ಆಸ್ತಿಪಾಸ್ತಿಗಳ ನಾಶ ಮಾಡಿತ್ತು.
ಸಜ್ಜನ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ, ಸಜ್ಜನ್ ಕುಮಾರ್ ಗಲಭೆಯಲ್ಲಿ ಸ್ವತಃ ಭಾಗವಹಿಸಿದ್ದು ಮಾತ್ರವಲ್ಲದೆ, ಜನ ಸಮೂಹವನ್ನು ಮುನ್ನಡೆಸಿದ್ದಾರೆ ಎಂಬ ಪ್ರಾಥಮಿಕ ಅಭಿಪ್ರಾಯ ರೂಪಿಸಲು ಹಲವು ಸಾಕ್ಷ್ಯಗಳನ್ನು ಕಂಡುಕೊಂಡಿದೆ ಎಂದು ವರದಿಗಳು ಹೇಳಿತ್ತು.
ತಮಿಳುನಾಡು| ಪ್ರಬಲಜಾತಿ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ದಲಿತನ ಯುವಕನ ಮೇಲೆ ಹಲ್ಲೆ



Actually there is no proof of Sajjan Kumar’s involvement. Because he is a Congress leader and now ofcourse they’re out of power he has been fixed and punished.