ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.7) ತಮ್ಮ ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ಗೂ ಮುಂಚಿತವಾಗಿ ಸಂಪ್ರದಾಯದಂತೆ ಮುಖ್ಯಮಂತ್ರಿ ಅವರ ಕಡೆಯಿಂದ ಗುರುವಾರ ರಾತ್ರಿ ಬೆಂಗಳೂರಿನ ರ‍್ಯಾಡಿಸನ್ ಬ್ಲೂ ಪಂಚತಾರ ಹೊಟೇಲ್‌ನಲ್ಲಿ ಪತ್ರಕರ್ತರಿಗೆ ಔತಣಕೂಟವಿತ್ತು. ರಾಜ್ಯದ ಎಲ್ಲಾ ಪ್ರಮುಖ ಮಾಧ್ಯಮಗಳ ಮತ್ತು ಪತ್ರಿಕೆಗಳ ಪತ್ರಕರ್ತರು ಈ ಔತಣಕೂಟದಲ್ಲಿ ಭಾಗವಹಿಸಿದ್ದರು. ಸಿದ್ದರಾಮಯ್ಯ ಮಂಡಿಸಿದ್ದು
ಅದಾಗ್ಯೂ, ಈ ಔತಣಕೂಟದ ನಂತರ ಹೆಚ್ಚಿನ ಎಲ್ಲಾ ಪತ್ರಕರ್ತರು ಬಿಜೆಪಿಯ ಜಗನ್ನಾಥ ಭವನ ಅಥವಾ ಆರೆಸ್ಸೆಸ್‌ನ ಕೇಶವಕೃಪಾ ಕಚೇರಿಗೆ ಹೋಗಿ ಸಭೆ ನಡೆಸಿದ್ದಾರೆ ಎಂದು ನನ್ನ ಅನುಮಾನ. ಯಾಕೆಂದರೆ, ಇಂದು ಸಿದ್ದರಾಮಯ್ಯ ಅವರ ರಾಜ್ಯದ 2025-26 ಆರ್ಥಿಕ ವರ್ಷದ ಬಜೆಟ್ ಮಂಡಿಸಿ ಮುಗಿಸುತ್ತಿದ್ದಂತೆ ಬಿಜೆಪಿ ಮತ್ತು ಕನ್ನಡ ಮಾಧ್ಯಮಗಳು ಒಂದೇ ಧ್ವನಿಯಲ್ಲಿ ಮಾತನಾಡುತ್ತಿವೆ. ಮುಖ್ಯಮಂತ್ರಿ ಮಂಡಿಸಿದ ಬಜೆಟ್ ಅನ್ನು ವಿಶ್ಲೇಷಣೆ ಮಾಡಿದರೆ ಇವರುಗಳ ಒಂದೇ ಧ್ವನಿಯನ್ನು ಒಪ್ಪಬಹುದಿತ್ತು. ಆದರೆ, ಕನ್ನಡ ಮಾಧ್ಯಮಗಳು ಮತ್ತು ವಿಪಕ್ಷ ಬಿಜೆಪಿ ಬಜೆಟ್ ಅನ್ನು ಕೋಮುದೃಷ್ಠಿಯಿಂದ ನೋಡುತ್ತಾ ಎಂದಿನಂತೆ ಮುಸ್ಲಿಮರ ವಿರುದ್ಧ ನಂಜು ಕಾರಿಕೊಳ್ಳುತ್ತಿವೆ.
ರಾಜ್ಯ ಸರ್ಕಾರದ ಬಜೆಟ್ ವಿಶ್ಲೇಷಣೆ ಮಾಡುವುದು, ಅದರಲ್ಲಿನ ಮಿತಿಗಳ ಬಗ್ಗೆ ಟೀಕೆ ಮಾಡುವುದು ವಿಪಕ್ಷವಾಗಿ ಬಿಜೆಪಿ ಮತ್ತು ಮಾಧ್ಯಮಗಳ ಕರ್ತವ್ಯವೆ ಆಗಿದೆ. ಆದರೆ ಈ ಮಾಧ್ಯಮಗಳು ಅವುಗಳನ್ನು ಬಿಟ್ಟು ಬಜೆಟ್ ಅನ್ನು ಕೂಡಾ ಕೋಮುವಾದಿ ನೆಲೆಯಲ್ಲಿ ಮಾತನಾಡುತ್ತಾ, ಈಗಾಗಲೆ ಕುಗ್ಗಿರುವ ಈ ರಾಜ್ಯದ ಮುಸ್ಲಿಮರನ್ನು ಮತ್ತಷ್ಟು ಅವಮಾನಿಸುತ್ತಾ ಇವೆ. ಸಿದ್ದರಾಮಯ್ಯ ಮಂಡಿಸಿದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಬಜೆಟ್ ‘ಸಾಬ್ರ’ ಬಜೆಟ್ ಎಂಬುವುದು ನಿಜವೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ ಮೊತ್ತ ನಾಲ್ಕು ಲಕ್ಷ ಕೋಟಿ ರೂಪಾಯಿಗಳಾಗಿದೆ. ಇದನ್ನು ಅಂಕೆಯಲ್ಲಿ ಬರೆದರೆ, 4,095,490,000,000 ಆಗುತ್ತದೆ. ಮುಸ್ಲಿಮರು ಸೇರಿ ಈ ರಾಜ್ಯದ ಎಲ್ಲಾ ಅಲ್ಪ ಸಂಖ್ಯಾತರಿಗೆ ಮೀಸಲಿಟ್ಟ ಹಣ ಕೇವಲ 1,300 ಕೋಟಿ ರೂಪಾಯಿಗಳಾಗಿವೆ. ರಾಜ್ಯದಲ್ಲಿ ಅಲ್ಪ ಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ. 2% ಕ್ರಿಶ್ಚಿಯನ್ನರು, 1% ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಇದ್ದಾರೆ. ಈ ವಿಚಾರ ಬಿಜೆಪಿಗಾಗಲಿ, ಕನ್ನಡ ಮಾಧ್ಯಮಗಳಿಗಾಗಲಿ ತಿಳಿದಿಲ್ಲ ಎಂಬುವುದೇನಿಲ್ಲ.
ಮುಸ್ಲಿಮರು ಈ ರಾಜ್ಯದ 1 ಕೋಟಿ(13%)ಯಷ್ಟು ಜನಸಂಖ್ಯೆ ಹೊಂದಿರುವ ದೊಡ್ಡ ಸಮುದಾಯ. ಮುಖ್ಯಮಂತ್ರಿ ಮಂಡಿಸಿದ ನಾಲ್ಕು ಲಕ್ಷ ಕೋಟಿ ರೂಪಾಯಿಯ ಬೃಹತ್ ಬಜೆಟ್‌ನಲ್ಲಿ, ನೇರವಾಗಿ ಮುಸ್ಲಿಮರಿಗೆ ಎಂದು ಮೀಸಲಿಟ್ಟ ಅನುದಾನ ಕೇವಲ 250 ಕೋಟಿ ರೂಪಾಯಿಗಳು ಮಾತ್ರವಾಗಿದೆ. ಇದು ಬಜೆಟ್‌ನ 0.061% ಮಾತ್ರ. ಉಳಿದಂತೆ 1000 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರಿಗೆ ಸರ್ಕಾರ ಮೀಸಲಿಟ್ಟಿದೆ.
ಮುಸ್ಲಿಮರಿಗೆ ನೇರವಾಗಿ ನೀಡಿರುವ 250 ಕೋಟಿ ಹಾಗೂ 1000 ಕೋಟಿ ರೂಪಾಯಿಗಳು ಸೇರಿಸಿ 1300 ಕೋಟಿಯಾಗುತ್ತದೆ. ಇತರ ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಪಾಲನ್ನು ಮುಸ್ಲಿಮರೆ ಪಡೆದರೂ, ಅಲ್ಲಿ ಸಿಗುವುದು ಬಜೆಟ್‌ನ ಪಾಲು 0.318% ಅಷ್ಟೇ. ಬಜೆಟ್‌ನ ಮೊತ್ತದಲ್ಲಿ ಒಂದು ಶೇಖಡ ಕೂಡಾ ಇಲ್ಲ. ಕನಿಷ್ಠ ಪಕ್ಷ ಅರ್ಧ ಶೇಖಡಾ ಕೂಡಾ ಇಲ್ಲ.
ಈ ರಾಜ್ಯದಲ್ಲೆ ದುಡಿದು, ಇಲ್ಲೆ ಖರ್ಚು ಮಾಡಿ ತೆರಿಗೆ ಕಟ್ಟುವ, ಈ ರಾಜ್ಯದ ಅಭಿವೃದ್ಧಿಗೆ ಪಾಲು ನೀಡುವ 13% ಮುಸ್ಲಿಮರಿಗೆ ರಾಜ್ಯ ಕನಿಷ್ಠ ಪಕ್ಷ ಅರ್ಧ ಶೇಖಡಾ ಕೂಡಾ ವಾಪಾಸು ನೀಡುತ್ತಾ ಇಲ್ಲ. ಈ ಅನ್ಯಾಯವನ್ನು ವಿಪಕ್ಷಗಳು ಮತ್ತು ಮಾಧ್ಯಮಗಳು ಕೇಳಬೇಕು ಅಲ್ಲವೆ? ಬಿಜೆಪಿ ರೀತಿಯ ವಿಪಕ್ಷವಾಗಲಿ, ಮಾಧ್ಯಮವಾಗಲಿ ಮೇಲಿನಂತೆ ರಾಜ್ಯ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಬೇಕೆ ವಿನಃ, ಅವಮಾನಿತ, ಅನುಮಾನಿತ ಮತ್ತು ಹಿಂದುಳಿದ ಸಮುದಾಯವನ್ನು ಮತ್ತಷ್ಟು ಕುಗ್ಗಿಸುವುದಲ್ಲ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: Karnataka Budget 2025-26 | ಶಿಕ್ಷಣ ಕ್ಷೇತ್ರದ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
Karnataka Budget 2025-26 | ಶಿಕ್ಷಣ ಕ್ಷೇತ್ರದ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ


BJP an Kannada media shoul keep their anti muslim attitude live, so that can influence communal voilence to be in the political limelight