Homeಕರ್ನಾಟಕಸಿದ್ದರಾಮಯ್ಯ ಮಂಡಿಸಿದ್ದು 'ಸಾಬ್ರ' ಬಜೆಟ್? ಮಾಧ್ಯಮ, ಬಿಜೆಪಿ ಆರೋಪ ನಿಜವೆ?

ಸಿದ್ದರಾಮಯ್ಯ ಮಂಡಿಸಿದ್ದು ‘ಸಾಬ್ರ’ ಬಜೆಟ್? ಮಾಧ್ಯಮ, ಬಿಜೆಪಿ ಆರೋಪ ನಿಜವೆ?

- Advertisement -
- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.7) ತಮ್ಮ ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ಗೂ ಮುಂಚಿತವಾಗಿ ಸಂಪ್ರದಾಯದಂತೆ ಮುಖ್ಯಮಂತ್ರಿ ಅವರ ಕಡೆಯಿಂದ ಗುರುವಾರ ರಾತ್ರಿ ಬೆಂಗಳೂರಿನ ರ‍್ಯಾಡಿಸನ್ ಬ್ಲೂ ಪಂಚತಾರ ಹೊಟೇಲ್‌ನಲ್ಲಿ ಪತ್ರಕರ್ತರಿಗೆ ಔತಣಕೂಟವಿತ್ತು. ರಾಜ್ಯದ ಎಲ್ಲಾ ಪ್ರಮುಖ ಮಾಧ್ಯಮಗಳ ಮತ್ತು ಪತ್ರಿಕೆಗಳ ಪತ್ರಕರ್ತರು ಈ ಔತಣಕೂಟದಲ್ಲಿ ಭಾಗವಹಿಸಿದ್ದರು. ಸಿದ್ದರಾಮಯ್ಯ ಮಂಡಿಸಿದ್ದು

ಅದಾಗ್ಯೂ, ಈ ಔತಣಕೂಟದ ನಂತರ ಹೆಚ್ಚಿನ ಎಲ್ಲಾ ಪತ್ರಕರ್ತರು ಬಿಜೆಪಿಯ ಜಗನ್ನಾಥ ಭವನ ಅಥವಾ ಆರೆಸ್ಸೆಸ್‌ನ ಕೇಶವಕೃಪಾ ಕಚೇರಿಗೆ ಹೋಗಿ ಸಭೆ ನಡೆಸಿದ್ದಾರೆ ಎಂದು ನನ್ನ ಅನುಮಾನ. ಯಾಕೆಂದರೆ, ಇಂದು ಸಿದ್ದರಾಮಯ್ಯ ಅವರ ರಾಜ್ಯದ 2025-26 ಆರ್ಥಿಕ ವರ್ಷದ ಬಜೆಟ್ ಮಂಡಿಸಿ ಮುಗಿಸುತ್ತಿದ್ದಂತೆ ಬಿಜೆಪಿ ಮತ್ತು ಕನ್ನಡ ಮಾಧ್ಯಮಗಳು ಒಂದೇ ಧ್ವನಿಯಲ್ಲಿ ಮಾತನಾಡುತ್ತಿವೆ. ಮುಖ್ಯಮಂತ್ರಿ ಮಂಡಿಸಿದ ಬಜೆಟ್ ಅನ್ನು ವಿಶ್ಲೇಷಣೆ ಮಾಡಿದರೆ ಇವರುಗಳ ಒಂದೇ ಧ್ವನಿಯನ್ನು ಒಪ್ಪಬಹುದಿತ್ತು. ಆದರೆ, ಕನ್ನಡ ಮಾಧ್ಯಮಗಳು ಮತ್ತು ವಿಪಕ್ಷ ಬಿಜೆಪಿ ಬಜೆಟ್‌ ಅನ್ನು ಕೋಮುದೃಷ್ಠಿಯಿಂದ ನೋಡುತ್ತಾ ಎಂದಿನಂತೆ ಮುಸ್ಲಿಮರ ವಿರುದ್ಧ ನಂಜು ಕಾರಿಕೊಳ್ಳುತ್ತಿವೆ.

ರಾಜ್ಯ ಸರ್ಕಾರದ ಬಜೆಟ್ ವಿಶ್ಲೇಷಣೆ ಮಾಡುವುದು, ಅದರಲ್ಲಿನ ಮಿತಿಗಳ ಬಗ್ಗೆ ಟೀಕೆ ಮಾಡುವುದು ವಿಪಕ್ಷವಾಗಿ ಬಿಜೆಪಿ ಮತ್ತು ಮಾಧ್ಯಮಗಳ ಕರ್ತವ್ಯವೆ ಆಗಿದೆ. ಆದರೆ ಈ ಮಾಧ್ಯಮಗಳು ಅವುಗಳನ್ನು ಬಿಟ್ಟು ಬಜೆಟ್‌ ಅನ್ನು ಕೂಡಾ ಕೋಮುವಾದಿ ನೆಲೆಯಲ್ಲಿ ಮಾತನಾಡುತ್ತಾ, ಈಗಾಗಲೆ ಕುಗ್ಗಿರುವ ಈ ರಾಜ್ಯದ ಮುಸ್ಲಿಮರನ್ನು ಮತ್ತಷ್ಟು ಅವಮಾನಿಸುತ್ತಾ ಇವೆ. ಸಿದ್ದರಾಮಯ್ಯ ಮಂಡಿಸಿದ್ದು

ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಬಜೆಟ್ ‘ಸಾಬ್ರ’ ಬಜೆಟ್ ಎಂಬುವುದು ನಿಜವೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್‌ ಮೊತ್ತ ನಾಲ್ಕು ಲಕ್ಷ ಕೋಟಿ ರೂಪಾಯಿಗಳಾಗಿದೆ. ಇದನ್ನು ಅಂಕೆಯಲ್ಲಿ ಬರೆದರೆ, 4,095,490,000,000 ಆಗುತ್ತದೆ. ಮುಸ್ಲಿಮರು ಸೇರಿ ಈ ರಾಜ್ಯದ ಎಲ್ಲಾ ಅಲ್ಪ ಸಂಖ್ಯಾತರಿಗೆ ಮೀಸಲಿಟ್ಟ ಹಣ ಕೇವಲ 1,300 ಕೋಟಿ ರೂಪಾಯಿಗಳಾಗಿವೆ. ರಾಜ್ಯದಲ್ಲಿ ಅಲ್ಪ ಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ. 2% ಕ್ರಿಶ್ಚಿಯನ್ನರು, 1% ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಇದ್ದಾರೆ. ಈ ವಿಚಾರ ಬಿಜೆಪಿಗಾಗಲಿ, ಕನ್ನಡ ಮಾಧ್ಯಮಗಳಿಗಾಗಲಿ ತಿಳಿದಿಲ್ಲ ಎಂಬುವುದೇನಿಲ್ಲ.

ಮುಸ್ಲಿಮರು ಈ ರಾಜ್ಯದ 1 ಕೋಟಿ(13%)ಯಷ್ಟು ಜನಸಂಖ್ಯೆ ಹೊಂದಿರುವ ದೊಡ್ಡ ಸಮುದಾಯ. ಮುಖ್ಯಮಂತ್ರಿ ಮಂಡಿಸಿದ ನಾಲ್ಕು ಲಕ್ಷ ಕೋಟಿ ರೂಪಾಯಿಯ ಬೃಹತ್ ಬಜೆಟ್‌ನಲ್ಲಿ, ನೇರವಾಗಿ ಮುಸ್ಲಿಮರಿಗೆ ಎಂದು ಮೀಸಲಿಟ್ಟ ಅನುದಾನ ಕೇವಲ 250 ಕೋಟಿ ರೂಪಾಯಿಗಳು ಮಾತ್ರವಾಗಿದೆ. ಇದು ಬಜೆಟ್‌ನ 0.061% ಮಾತ್ರ. ಉಳಿದಂತೆ 1000 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರಿಗೆ ಸರ್ಕಾರ ಮೀಸಲಿಟ್ಟಿದೆ.

ಮುಸ್ಲಿಮರಿಗೆ ನೇರವಾಗಿ ನೀಡಿರುವ 250 ಕೋಟಿ ಹಾಗೂ 1000 ಕೋಟಿ ರೂಪಾಯಿಗಳು ಸೇರಿಸಿ 1300 ಕೋಟಿಯಾಗುತ್ತದೆ. ಇತರ ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಪಾಲನ್ನು ಮುಸ್ಲಿಮರೆ ಪಡೆದರೂ, ಅಲ್ಲಿ ಸಿಗುವುದು ಬಜೆಟ್‌ನ ಪಾಲು 0.318% ಅಷ್ಟೇ. ಬಜೆಟ್‌ನ ಮೊತ್ತದಲ್ಲಿ ಒಂದು ಶೇಖಡ ಕೂಡಾ ಇಲ್ಲ. ಕನಿಷ್ಠ ಪಕ್ಷ ಅರ್ಧ ಶೇಖಡಾ ಕೂಡಾ ಇಲ್ಲ.

ಈ ರಾಜ್ಯದಲ್ಲೆ ದುಡಿದು, ಇಲ್ಲೆ ಖರ್ಚು ಮಾಡಿ ತೆರಿಗೆ ಕಟ್ಟುವ, ಈ ರಾಜ್ಯದ ಅಭಿವೃದ್ಧಿಗೆ ಪಾಲು ನೀಡುವ 13% ಮುಸ್ಲಿಮರಿಗೆ ರಾಜ್ಯ ಕನಿಷ್ಠ ಪಕ್ಷ ಅರ್ಧ ಶೇಖಡಾ ಕೂಡಾ ವಾಪಾಸು ನೀಡುತ್ತಾ ಇಲ್ಲ.‌ ಈ ಅನ್ಯಾಯವನ್ನು ವಿಪಕ್ಷಗಳು ಮತ್ತು ಮಾಧ್ಯಮಗಳು ಕೇಳಬೇಕು ಅಲ್ಲವೆ?  ಬಿಜೆಪಿ ರೀತಿಯ ವಿಪಕ್ಷವಾಗಲಿ, ಮಾಧ್ಯಮವಾಗಲಿ ಮೇಲಿನಂತೆ ರಾಜ್ಯ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಬೇಕೆ ವಿನಃ, ಅವಮಾನಿತ, ಅನುಮಾನಿತ ಮತ್ತು ಹಿಂದುಳಿದ ಸಮುದಾಯವನ್ನು ಮತ್ತಷ್ಟು ಕುಗ್ಗಿಸುವುದಲ್ಲ.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  Karnataka Budget 2025-26 | ಶಿಕ್ಷಣ ಕ್ಷೇತ್ರದ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Budget 2025-26 | ಶಿಕ್ಷಣ ಕ್ಷೇತ್ರದ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...