Homeಮುಖಪುಟಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

- Advertisement -
- Advertisement -

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ ‘ಜೆನ್ ಝೀ’ (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು ಮಣಿಸಿದ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರದ ಫ್ಯಾಸಿಸ್ಟಿಕ್ ದುರಾಡಳಿತವನ್ನು ಕೊನೆಗೊಳಿಸಲು ಹೇಗೆ ಮುನ್ನಡೆಯಬೇಕು ಎಂಬುದನ್ನು ತೋರಿಸಿಕೊಟ್ಟ ಐತಿಹಾಸಿಕ ಮೈಲಿಗಲ್ಲಾಗಿದೆ.

ಇದುವರೆಗಿನ ಚಳುವಳಿಗಳ ಹಳೆಯ ಸಾಂಪ್ರದಾಯಿಕ ಚೌಕಟ್ಟನ್ನು ದಾಟಿ ಇಂದಿನ ಯುವಜನರು ಪ್ರಭುತ್ವದ ಯಾವ ದಾಳಿಗೂ ಅಂಜದೇ ಅತ್ಯಂತ ದಿಟ್ಟತನದಿಂದ ಸೃಜನಶೀಲತೆ, ತಂತ್ರಜ್ಞಾನ ಮತ್ತು ವ್ಯಂಗ್ಯವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡ ಈ ಹೋರಾಟ ಇಡೀ ಆಡಳಿತ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ್ದಾರೆ. ದೇಹಲಿಯ ಜಂತರ್ ಮಂತರ್ ಮತ್ತು ದೇಶಾದ್ಯಂತ ಭುಗಿಲೆದ್ದ ತೀವ್ರ ಆಕ್ರೋಶಕ್ಕೆ ಹೆದರಿದ ಪ್ರಧಾನಿ ನರೇಂದ್ರ ಮೋದಿ, ಇತಿಹಾಸದಲ್ಲೇ ಮೊದಲ ಬಾರಿಗೆ ತಡರಾತ್ರಿ ಇನ್‌ಸ್ಟಾಗ್ರಾಮ್ ರೀಲ್ ಶೈಲಿಯಲ್ಲಿ ನೇರ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನು ಶಾಂತಗೊಳಿಸಲು ಪ್ರಯತ್ನಿಸಬೇಕಾಯಿತು. ಯುವ ಜನಾಂಗವನ್ನು ತಲುಪಲು ಎಂದಿನ ‘ಮಿತ್ರೋಂ’ ಬದಲಿಗೆ ‘ಫ್ರೆಂಡ್ಸ್’ ಎಂದು ಸಂಬೋಧಿಸಿದ್ದು ಸರ್ಕಾರದೊಳಗಿನ ಆತಂಕವನ್ನು ಎತ್ತಿ ತೋರಿಸುತ್ತದೆ. ಇದರಿಂದ ಹೋರಾಟದ ತೀವ್ರತೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆದರೆ, ಅವರ ರಾಜೀನಾಮೆ ಪತ್ರದಲ್ಲಿ ನೀಟ್ ಪರಿಕ್ಷಾ ಅಕ್ರಮದ ಕುರಿತು ನೈತಿಕ ಹೊಣೆ ಹೊರುವ ಅಥವಾ ಆತ್ಮಹತ್ಯೆಗೆ ಒಳಗಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡು ನೊಂದ ಪೋಷಕರು, ವಿದ್ಯಾರ್ಥಿಗಳಿಗೆ ವಿಷಾದಿಸುವ ಯಾವುದೇ ಪಶ್ಚಾತ್ತಾಪ ಇರಲಿಲ್ಲ. ಬದಲಿಗೆ ಪ್ರತಿಭಟನೆಯನ್ನು ದೇಶವಿರೋಧಿ ಶಕ್ತಿಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸುವ ಮೂಲಕ ಬಿಜೆಪಿ ಸರ್ಕಾರದ ಆಡಳಿತದ ಎಂದಿನ ಹಠಮಾರಿತನವನ್ನೇ ಪ್ರದರ್ಶಿಸಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಪ್ರಮುಖ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಒಳಗಿನಿಂದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಆರ್.ಎಸ್.ಎಸ್ ಸಂಘಪರಿವಾರದ ದೀರ್ಘಕಾಲೀನ ಕಾರ್ಯವಿಧಾನವಾಗಿದೆ. NEET ನಂತಹ ಕೇಂದ್ರೀಕೃತ ಪರೀಕ್ಷೆಗಳ ಮೂಲಕ ಪ್ರಾದೇಶಿಕ, ರಾಜ್ಯಗಳ ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಹತ್ತಿಕ್ಕುವುದು ಇದರ ಮೂಲ ಭಾಗವಾಗಿದೆ. ಪ್ರಸ್ತುತ NEET ಪ್ರತಿಭಟನೆಗಳ ಹಿನ್ನೆಲೆಯಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದಿನ ಯುವಕರಿಗೆ ಆದೇಶಗಳಲ್ಲ, ಚರ್ಚೆ ಮತ್ತು ಸಹಮತ ಬೇಕು ಎಂದು ಹೇಳಿರುವುದು ಯುವ ಆಕ್ರೋಶದ ತೀವ್ರತೆಯನ್ನು ತಣ್ಣಗಾಗಿಸುವ ಒಂದು ಯೋಜಿತ ತಂತ್ರವೇ ಆಗಿರುವುದರ ಜೊತೆಗೆ ಈ ಹೇಳಿಕೆಯ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿಗೂ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಭವಿಷ್ಯದಲ್ಲಿ ಸಂಘಪರಿವಾರ ಹರಡಬಹುದಾದ ವಿವಿಧ ತಿರುಚಿದ ನಿರೂಪಣೆಗಳ ವಿರುದ್ಧ ಈಗಿನಿಂದಲೇ ಜಾಗರೂಕರಾಗಿರಬೇಕಾಗಿದೆ. ಈಗಾಗಲೇ RSS ಮುಖಂಡರು ಈ NEET ಮತ್ತು CJP (ಕಾಕ್ರೋಚ್ ಜನತಾ ಪಾರ್ಟಿ) ಆಂದೋಲನದ ಹಿಂದೆ ದೇಶಿ ಮತ್ತು ವಿದೇಶಿ ವಿಚ್ಛಿದ್ರಕಾರಕ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಆ ಮೂಲಕ ಭವಿಷ್ಯದಲ್ಲಿ ಈ ಇಡೀ ನ್ಯಾಯಸಮ್ಮತ ಹೋರಾಟವನ್ನು ಅಭಿವೃದ್ಧಿ ವಿರೋಧಿ ಅಥವಾ ಅಂತರರಾಷ್ಟ್ರೀಯ ಸಂಚು ಎಂದು ಬಿಂಬಿಸಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತದೆ. ಇದರೊಂದಿಗೆ ಶಿಕ್ಷಣ ಸಚಿವರ ರಾಜೀನಾಮೆಯನ್ನು ಪ್ರಭುತ್ವದ ಸೋಲು ಎಂದು ಒಪ್ಪಿಕೊಳ್ಳುವ ಬದಲಿಗೆ, ಮುಂಬರುವ ದಿನಗಳಲ್ಲಿ ಇದನ್ನು ಮೋದಿ ಸರ್ಕಾರದ ಪಾರದರ್ಶಕತೆ ಮತ್ತು ನೈತಿಕತೆಗೆ ಸಾಕ್ಷಿ ಎಂದು ತನ್ನ ಐಟಿ ಸೆಲ್ ಮೂಲಕ ತಿರುಚಲಾಗುತ್ತದೆ.

ಪರಿಕ್ಷಾ ಪ್ರಶ್ನೆ ಪತ್ರಿಕೆಯ ಸೋರಿಕೆಯು ಕೇವಲ ಒಂದು ತಾಂತ್ರಿಕ ಭದ್ರತಾ ಲೋಪ ಅಥವಾ ಕೆಲವು ಭ್ರಷ್ಟ ಅಧಿಕಾರಿಗಳ ವೈಯಕ್ತಿಕ ತಪ್ಪು ಎಂದು ಬಿಂಬಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಮೂಲಕ ಶಿಕ್ಷಣದ ಕೇಂದ್ರೀಕರಣ ಮತ್ತು ಖಾಸಗೀಕರಣದಂತಹ ವ್ಯವಸ್ಥಿತ ಹಾಗು ತನ್ನ ದೋಷಗಳನ್ನು ಸಾರ್ವಜನಿಕ ಚರ್ಚೆಯಿಂದ ಮರೆಮಾಚಲಾಗುತ್ತದೆ. ನರೇಂದ್ರ ಮೋದಿ ಫ್ಯಾಸಿಸ್ಟಿಕ್ ಸರ್ಕಾರವನ್ನು ಮಣಿಸುವುದು ಹೇಗೆ ಎಂಬುದಕ್ಕೆ 2021 ರಲ್ಲಿ ದೆಹಲಿಯ ಗಡಿಗಳಲ್ಲಿ ನಡೆದ ಐತಿಹಾಸಿಕ ರೈತ ಹೋರಾಟವೇ ನಮಗೆ ಅತ್ಯುತ್ತಮ ಉದಾಹರಣೆ ಮತ್ತು ಪ್ರೇರಣೆಯಾಗಿದೆ. ಕಾರ್ಪೊರೇಟ್ ಪರ ಕೃಷಿ ಕಾಯ್ದೆಗಳ ವಿರುದ್ಧ ರೈತರು ತೋರಿದ ನಿರಂತರ ಶಿಸ್ತುಬದ್ಧ ಹೋರಾಟವು ಸರ್ಕಾರವನ್ನು ನಡುಗಿಸಿತ್ತು ಮತ್ತು ಅಂತಿಮವಾಗಿ ಪ್ರಧಾನಿ ಮೋದಿಯವರು ದೇಶದ ಕ್ಷಮೆಯಾಚಿಸಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಅಂದು ರೈತ ಚಳುವಳಿಯು ಕೇವಲ ಕೃಷಿಕರ ಸಮಸ್ಯೆಯಾಗಿ ಉಳಿಯದೆ ದೇಶದ ರೈತಾಪಿ ವರ್ಗದ ಘನತೆಯ ಹೋರಾಟವಾಗಿ ಮಾರ್ಪಟ್ಟಿತ್ತು.

ಇಂದಿನ NEET ಹೋರಾಟವೂ ಕೂಡ ಕೇವಲ ವಿದ್ಯಾರ್ಥಿಗಳ ಸಮಸ್ಯೆಯಲ್ಲ, ಇದು ಇಡೀ ದೇಶದ ಮಧ್ಯಮ ಮತ್ತು ಬಡ ಕುಟುಂಬಗಳ ಭವಿಷ್ಯದ ಹೋರಾಟ ಎಂದು ಬಿಂಬಿಸುವಲ್ಲಿ ರೈತ ಚಳುವಳಿಯ ಕಾರ್ಯತಂತ್ರ ನಮಗೆ ಪ್ರಮುಖ ಪಾಠವಾಗಿದೆ. ರೈತ ಹೋರಾಟಕ್ಕೂ ಅಂದು ಸಂಘಪರಿವಾರ ಖಾಲಿಸ್ತಾನಿ, ದೇಶ ವಿರೋಧಿ ಹಣೆಪಟ್ಟಿ ಹಚ್ಚಲು ಪ್ರಯತ್ನಿಸಿತ್ತು ಆದರೆ ಸಂಘಟಿತ ಒಗ್ಗಟ್ಟು ಆ ಎಲ್ಲಾ ಸುಳ್ಳುಗಳನ್ನು ಧೂಳೀಪಟ ಮಾಡಿತ್ತು; ಅದೇ ಒಗ್ಗಟ್ಟನ್ನು ಇಂದಿನ ಯುವ ಹೋರಾಟದಲ್ಲೂ ಕಾಯ್ದುಕೊಳ್ಳಬೇಕಿದೆ.

ಯುವಜನರ ತತ್ಕಾಲಿಕ ಆಕ್ರೋಶವನ್ನು ದೀರ್ಘಕಾಲೀನ ಸೈದ್ಧಾಂತಿಕ ಚಳುವಳಿಯ ಪ್ರಜ್ಞೆಯಾಗಿ ಪರಿವರ್ತಿಸಲು ಎಲ್ಲ ಪ್ರಜಾಪ್ರಭುತ್ವವಾದಿ ಚಳುವಳಿಗಳು, ಎಡ‌ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಹೊಸ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. ಕ್ಲಿಷ್ಟಕರವಾದ ಹಳೆಯ ಪಾರಿಭಾಷಿಕ ಪದಗಳ ಬದಲಿಗೆ ಇಂದಿನ ಯುವಕರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಬಂಡವಾಳಶಾಹಿ ಮತ್ತು ಫ್ಯಾಸಿಸಂನ ಶೋಷಣೆಯನ್ನು ವಿವರಿಸಬೇಕು. ಇಂದಿನ ದುಬಾರಿ ಶಿಕ್ಷಣ, ಜನವಿರೋಧಿ ಅನಿಶ್ಚಿತ ಆರ್ಥಿಕತೆ ಮತ್ತು ನಿರುದ್ಯೋಗದ ಸಮಸ್ಯೆಗಳಿಗೆ ಕಾರ್ಪೊರೇಟ್ ಪರ ನೀತಿಗಳೇ ಹೇಗೆ ಕಾರಣ ಎಂಬುದನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಬೇಕು.ಸಾಂಪ್ರದಾಯಿಕ ಅಧ್ಯಯನ ವಲಯಗಳ ಬದಲಿಗೆ ಪಾಡ್‌ಕಾಸ್ಟ್‌ಗಳು, ಆಡಿಯೋ ಬುಕ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಮೂಲಕ ಜನಪರವಾದ, ಎಡ ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ಪ್ರಚಾರ ಮಾಡಬೇಕು. ಚಲನಚಿತ್ರಗಳು, ಹಿಪ್-ಹಾಪ್ ಸಂಗೀತ ಮತ್ತು ಸ್ಟ್ರೀಟ್ ಆರ್ಟ್ ಮೂಲಕ ಯುವಜನರಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು.

ಹಿರಿಯ ನಾಯಕರು ಝೆನ್-ಝೀ ಯುವಜನರನ್ನು ಕೇವಲ ಅನುಭವವಿಲ್ಲದವರು ಎಂದು ನೋಡುವ ಧೋರಣೆಯನ್ನು ಬಿಟ್ಟು, ಚಳುವಳಿಯೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನು ಬಲಪಡಿಸಿ, ಯುವ ಪೀಳಿಗೆಯ ಮುಕ್ತ ಪ್ರಶ್ನೆಗಳಿಗೆ ಸೈದ್ಧಾಂತಿಕವಾಗಿ ಮನವರಿಕೆ ಮಾಡಿಕೊಡುವ ಸಂವಾದ ಸಂಸ್ಕೃತಿಯನ್ನು ಬೆಳೆಸಬೇಕು. ಕರ್ನಾಟಕದ ಪ್ರಗತಿಪರ, ಎಡ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು NEET ಹಗರಣದ ವೈಫಲ್ಯವನ್ನು ರಾಜ್ಯದ ಸ್ವಾಯತ್ತತೆಯ ಮೇಲಿನ ದಾಳಿ ಎಂದು ಬಿಂಬಿಸಬೇಕು. ಶಿಕ್ಷಣವನ್ನು ಮತ್ತೆ ರಾಜ್ಯ ಪಟ್ಟಿಗೆ ತರಬೇಕು ಎಂಬ ಪ್ರಾದೇಶಿಕ ಆಕಾಂಕ್ಷೆಯನ್ನು ಎಡ, ಜನಪರ ಚಳುವಳಿಯ ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿಕೊಳ್ಳಬೇಕು.

ಕರ್ನಾಟಕದಲ್ಲಿ ಕೋಮು ರಾಜಕಾರಣದ ಪ್ರಯೋಗಶಾಲೆಯನ್ನು ಮೆಟ್ಟಿನಿಲ್ಲಲು ಯುವಜನರಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಂಘಪರಿವಾರ ಬಿತ್ತುತ್ತಿರುವ ದ್ವೇಷಕ್ಕೆ ಪರ್ಯಾಯವಾಗಿ ವೈಜ್ಞಾನಿಕ ಮನೋಭಾವ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಸೃಷ್ಟಿಸುವುದು ಇಂದಿನ ತುರ್ತು ಅಗತ್ಯವಾಗಿದೆ. NEET ಅಕ್ರಮದ ವಿರುದ್ಧದ ಪ್ರತಿಭಟನೆಯು ಜನಪರ ಚಳುವಳಿಗಳಿಗೆ ಹೊಸ ದಾರಿದೀಪವಾಗಿದೆ. ಸಿದ್ಧಾಂತಗಳು ಮತ್ತು ಸಾಂಪ್ರದಾಯಿಕ ಶೈಲಿಗಳು ಮುಖ್ಯವಾದರೂ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಚಳುವಳಿಗಳು ತಮ್ಮ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕು.

2021ರ ರೈತ ಹೋರಾಟದ ದೃಢತೆ, ಕರ್ನಾಟಕದ ಚಳುವಳಿಗಳ ಪ್ರಾದೇಶಿಕ ತಳಹದಿ ಮತ್ತು ಜೆನ್ ಝೀ ಯುವಕರ ಸೃಜನಶೀಲ ಆಕ್ರೋಶಕ್ಕೆ ಎಡ, ಪ್ರಜಾಪ್ರಭುತ್ವವಾದಿ ಚಳುವಳಿಗಳ ಗಟ್ಟಿಯಾದ ಸೈದ್ಧಾಂತಿಕ ಹಿನ್ನೆಲೆಯನ್ನು ಒದಗಿಸಿದರೆ, ಅದು ಬಲಪಂಥೀಯ ಆರ್.ಎಸ್.ಎಸ್ ಸಂಘಪರಿವಾರದ ಕುತಂತ್ರಗಳನ್ನು ಮೆಟ್ಟಿ ನಿಂತು ಕೋಮುವಾದಿ ಫ್ಯಾಸಿಸ್ಟ್ ಆಡಳಿತದ ತಳಹದಿಯನ್ನೇ ನಡುಗಿಸಬಲ್ಲ ದೀರ್ಘಕಾಲೀನ ರಾಜಕೀಯ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ.

ಪೃಥ್ವಿ ಎಂ‌.ಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...