ಶುಶ್ರೂಷಾಧಿಕಾರಿಗಳಿಗೆ ಮೂಲವೇತನ ನೀಡಿದಿದ್ದರೆ, ಗಾಂಧಿ ದಂಡಿನ ಸತ್ಯಾಗ್ರಹ ದಿನದಂದೇ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ರಾಧಾಸುರೇಶ್ ಪಿ.ಎನ್ ಬೆಂಗಳೂರಿನಲ್ಲಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಬೇಡಿಕೆ ಈಡೇರದಿದ್ದರೆ
ಸಂಘದ ವತಿಯಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಶುಶ್ರೂಷಾಧಿಕಾರಿಗಳ ಬೇಡಿಕೆಗಳನ್ನು ಇತ್ಯರ್ಥಗೊಳಿಸಲು ಮಾರ್ಚ್ 10ರಂದು ಸಭೆ ಮಾಡಲಾಗುವುದು ಎಂದು ತಿಳಿಸಿದ್ದರು. ಸಚಿವರ ಆಶ್ವಾಸನೆಯಂತೆ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದಿರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಬೇಡಿಕೆ ಈಡೇರದಿದ್ದರೆ
ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಗಧಿಪಡಿಸಬೇಕು. ಕನಿಷ್ಠ ಪಕ್ಷ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ವೈದ್ಯಾಧಿಕಾರಿಗಳಿರುವ ಮೂಲ ವೇತನ ಮಾದರಿಯಂತೆ ವೇತನ ನಿಗದಿ ಪಡಿಸಬೇಕು. ಮುಂಬರುವ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಲಿಕೆಯನ್ನು ನೀಡಬೇಕು ಹಾಗು ಸೇವೆಯನ್ನು ಖಾಯಂ ಮಾಡಿ ಉದ್ಯೋಗ ಭದ್ರತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗುತ್ತಿಗೆ ವೈದ್ಯಾಧಿಕಾರಿಗಳಿಗೆ 30 ಕೃಪಾಂಕ ನೀಡಿದಂತೆ, ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ವರ್ಷಕ್ಕೆ 3 ಕೃಪಾಂಕಗಳಂತೆ ಗರಿಷ್ಠ 30 ಕೃಪಾಂಕ ನೀಡಬೇಕು. ಎರಡು ವರ್ಷಗಳಿಂದ ಹಲವು ಸಭೆಗಳೆನ್ನೂ ನಡೆಸುತ್ತಿದ್ದರೂ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಕುರಿತಂತೆ ಯಾವುದೇ ನೀತಿ ರೂಪಿಸಿಲ್ಲ. ತಕ್ಷಣ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು. ಗುತ್ತಿಗೆ ಶುಶ್ರೂಷಾಧಿಕಾರಿಗಳ ಸೇವೆಯನ್ನು ನೇಮಕಾತಿಯಲ್ಲಿ ಪರಿಗಣಿಸಲು ಆದೇಶ ಹೊರಡಿಸಿದರೂ ಜಾರಿಗೆ ಬರಲಿಲ್ಲ. ತಕ್ಷಣ ಆದೇಶವನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದ್ದಾರೆ.
ಮಾರ್ಚ್ 10ರಂದು ನಡೆಯುವ ಮಹತ್ವದ ಸಭೆಯಲ್ಲಿ ಶುಶ್ರೂಷಾಧಿಕಾರಿಗಳ ‘ಮೂಲ ವೇತನ’ ಸೇರಿದಂತೆ ಇತರೇ ಬೇಡಿಕೆಗಳನ್ನು ಈಡೇರಿಸದಿದ್ದರೆ, ಗಾಂಧಿ ದಂಡಿನ ಸತ್ಯಾಗ್ರಹದ ದಿನವಾದ ಮಾರ್ಚ್ 12ರಂದೇ ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ ಮಾಡಿ, ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತೇವೆ ಎಂದು ರಾಧಾ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಜ್ಯ ಬಜೆಟ್ | ‘ಫಾಕ್ಸ್‌ಕಾನ್’ ಕಂಪನಿಗೆ ₹6,900 ಕೋಟಿ ಪ್ರೋತ್ಸಾಹಕ ಘೋಷಿಸಿದ ಸಿದ್ದರಾಮಯ್ಯ ಸರ್ಕಾರ!
ರಾಜ್ಯ ಬಜೆಟ್ | ‘ಫಾಕ್ಸ್‌ಕಾನ್’ ಕಂಪನಿಗೆ ₹6,900 ಕೋಟಿ ಪ್ರೋತ್ಸಾಹಕ ಘೋಷಿಸಿದ ಸಿದ್ದರಾಮಯ್ಯ ಸರ್ಕಾರ!

