ತೆಲುಗು ದೇಶಂ ಪಕ್ಷದ ವಿಜಯನಗರಂ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು ಮೂರನೇ ಮಗುವನ್ನು ಹೆತ್ತ ಮಹಿಳೆಯರಿಗೆ ಪ್ರೋತ್ಸಾಹ ಧನ ಘೋಷಿಸಿದ್ದಾರೆ; ಹೆಣ್ಣು ಮಗುವಿಗೆ ₹50,000 ಮತ್ತು ಗಂಡು ಮಗುವಿಗೆ ಜಜ್ಮ ನೀಡಿದರೆ ಹಸು ಎಂದು ಹೇಳಿದ್ದಾರೆ. ಅಪ್ಪಲನಾಯ್ಡು ಅವರ ಈ ಕೊಡುಗೆ ರಾಜ್ಯಾದ್ಯಂತ ಗಮನ ಸೆಳೆದಿದ್ದು, ಅನೇಕರು ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆಗಳನ್ನು ಅನುಸರಿಸಿ ಈ ಘೋಷಣೆ ಮಾಡಲಾಗಿದೆ. ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯ್ಡು ಅವರು ಮಕ್ಕಳ ಸಂಖ್ಯೆಯನ್ನು ಲೆಕ್ಕಿಸದೆ ಎಲ್ಲ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ನೀಡಲಾಗುವುದು ಎಂದು ಘೋಷಿಸಿದರು.
“ಎಲ್ಲ ಮಹಿಳೆಯರು ಸಾಧ್ಯವಾದಷ್ಟು ಮಕ್ಕಳನ್ನು ಹೊಂದಬೇಕು’ ಎಂದು ಮುಖ್ಯಮಂತ್ರಿ ಹೇಳಿದರು. ಎಲ್ಲ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ಅನ್ವಯಿಸುತ್ತದೆಯೇ ಎಂದು ಕಾನ್‌ಸ್ಟೆಬಲ್ ಒಬ್ಬರು ಶುಕ್ರವಾರ ಗೃಹ ಸಚಿವರನ್ನು ಕೇಳಿದರು. ಮೊದಲ ಎರಡು ಹೆರಿಗೆಗಳಿಗೆ ಮಾತ್ರವಲ್ಲದೆ ಎಲ್ಲ ಹೆರಿಗೆಗಳಿಗೂ ಹೆರಿಗೆ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಶನಿವಾರ ಸ್ಪಷ್ಟಪಡಿಸಿದರು.
ಇಲ್ಲಿಯವರೆಗೆ, ಮಹಿಳಾ ಉದ್ಯೋಗಿಗಳು ಎರಡು ಹೆರಿಗೆಗಳಿಗೆ ಮಾತ್ರ ಪೂರ್ಣ ವೇತನದೊಂದಿಗೆ ಆರು ತಿಂಗಳ ಹೆರಿಗೆ ರಜೆಯನ್ನು ಪಡೆಯುತ್ತಿದ್ದರು. ಈ ಪ್ರಯೋಜನವು ಈಗ ಎಲ್ಲ ಹೆರಿಗೆಗಳಿಗೆ ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ಘೋಷಿಸಿದರು.
ಇದರ ನಂತರ, ವಿಜಯನಗರಂ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಮೂರನೇ ಮಗುವನ್ನು ಹೊಂದಿರುವವರಿಗೆ ಪ್ರೋತ್ಸಾಹ ಧನವನ್ನು ಘೋಷಿಸಿದರು. ಅಂತರರಾಷ್ಟ್ರೀಯ ಮಹಿಳಾ ದಿನದಂದು ವಿಜಯನಗರಂನ ರಾಜೀವ್ ಸ್ಪೋರ್ಟ್ಸ್ ಕಾಂಪೌಂಡ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಒಬ್ಬ ಮಹಿಳೆ ಮೂರನೇ ಮಗುವಿಗೆ, ಅಂದರೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ, ನನ್ನ ಸಂಬಳದಿಂದ ಆಕೆಗೆ ₹50,000 ನೀಡಲಾಗುತ್ತದೆ. ಗಂಡು ಮಗುವಾಗಿದ್ದರೆ, ಆಕೆಗೆ ಹಸುವನ್ನು ಹಸ್ತಾಂತರಿಸಲಾಗುತ್ತದೆ” ಎಂದು ಹೇಳಿದರು.
ಈ ಘೋಷಣೆಯು ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ವಾಟ್ಸಾಪ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ರಣಸ್ಥಳಂ ಮಂಡಲದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಇದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ಎನ್‌ಇಪಿ-ಕ್ಷೇತ್ರ ಪುನರ್‌ವಿಂಗಡಣೆ ನಿರ್ಣಯದ ಕುರಿತು ಸಭೆ ನಡೆಸಿದ ಡಿಎಂಕೆ ಸಂಸದರು


