ಪ್ರಭುತ್ವವನ್ನು ಈಗ ಕಾರ್ಪೊರೇಟ್ ಕಂಪೆನಿಗಳು ಎಂದು ಕರೆಯಬಹುದಾಗಿದ್ದು, ಯಾಕೆಂದರೆ ಅದು ಈಗ ಕಾರ್ಪೋರೇಟ್ ಕಂಪೆನಿಗಳ ಕಪಿ ಮುಷ್ಟಿಯಲ್ಲಿ ಇದೆ. ಈ ಕಾರ್ಪೊರೇಟ್ ಕಂಪೆನಿಗಳು 35% ಇರುವ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಏಕಸ್ವಾಮ್ಯ ಗಳಿಸಿದ್ದು, ಉಳಿದ 65% ಇರುವ ಕೃಷಿ ವಲಯದಲ್ಲಿ ಇರುವ 65% ಜನರನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿಎಚ್ ಪೂಜಾರ್ ಹೇಳಿದರು. ಪ್ರಾಣ ಒತ್ತೆಯಿಟ್ಟು ರೈತರು
ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಂಯುಕ್ತ ಹೋರಾಟ-ಕರ್ನಾಟಕ’ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು. ಭೂಮಿ ಪ್ರಶ್ನೆ ಮತ್ತು ಬಜೆಟ್‌ನ ಧೋರಣೆಗಳು ಎಂಬ ವಿಚಾರದಲ್ಲಿ ಹೋರಾಟಗಾರರಾದ ಸಿರಿಮನೆ ನಾಗರಾಜ್ ಮತ್ತು ರೈತ ಮುಖಂಡ ಯು ಬಸವರಾಜ್ ಅವರು ಮಂಡಿಸಿದ ವಿಚಾರಗಳಿಗೆ ಪ್ರತಿಕ್ರಿಯಿಸಿದ ಅವರು ರೈತ ಸಂಘಟನೆಗಳು ರಾಜ್ಯದ ಅರ್ಧ ಶಕ್ತಿಯಾಗಿದ್ದು, ಇವರಿಗೆ ದಲಿತ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಹೇಳಿದರು. ಪ್ರಾಣ ಒತ್ತೆಯಿಟ್ಟು ರೈತರು
“ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಭೂಮಿಯನ್ನು ಮುಂದಿನ ಪೀಳಿಗೆಗಾಗಿ ಉಳಿಯಬೇಕು ಎಂದು ಹೇಳುತ್ತಾರೆ. ಇದರ ಅರ್ಥ ಯಾವುದೇ ಕಾರಣಕ್ಕೂ ಭೂಮಿಯ ಪಟ್ಟಾ ಕೊಡೊಲ್ಲ ಎಂದಾಗಿದೆ. ಅಂದರೆ ಇವೆಲ್ಲವನ್ನೂ ಕಾರ್ಪೊರೇಟ್‌ಗೆ ಬಿಟ್ಟು ಕೊಡುತ್ತೇವೆ ಎಂದು ಅರ್ಥ. ಹಾಗಾಗಿ ರೈತರು ತಮ್ಮ ಭೂಮಿಯನ್ನು ಪ್ರಾಣ ಒತ್ತೆಯಿಟ್ಟು ಉಳಿಸಬೇಕಾಗಿ. ಸರ್ಕಾರಿ ಅಧಿಕಾರಿಗಳು ಕಾರ್ಪೊರೇಟ್ ಪರವಾಗಿ ಇರಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಮೋದಿ ಚೊಂಬು ಕೊಟ್ಟರೆ, ಸಿದ್ದರಾಮಯ್ಯ ಚಿಪ್ಪು ಕೊಟ್ಟರು: ಎಂ. ಪುಟ್ಟಮಾದು
ಜನ ಚಳವಳಿ ಅಧಿವೇಶನದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ. ಪುಟ್ಟಮಾದು ಅವರು, “ಬಜೆಟ್ ಪೂರ್ವ ಸಭೆಯಲ್ಲಿ ನಾವು ನಮ್ಮ ಬೇಡಿಕೆ ಸರ್ಕಾರದ ಮುಂದಿಟ್ಟಿದ್ದೆವು. ನಮ್ಮ ಬೇಡಿಕೆ ಸರ್ಕಾರ ಈಡೇರಿಸುತ್ತದೆ ಎಂದು ಭಾವಿಸಿದ್ದೆವು. ಸರ್ಕಾರ ಕೂಡಾ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಆದರೆ ಈ ಗ ನೋಡಿದರೆ, ಮೋದಿಯವರು ನಮಗೆ ಚೊಂಬು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಾರೆ, ಆದರೆ ಸಿದ್ದರಾಮಯ್ಯಾ ಅವರು ನಮಗೆ ಚಿಪ್ಪು ಕೊಟ್ಟರು” ಎಂದು ಹೇಳಿದರು.
ಮುಂದಿನ ಮೂರು ವರ್ಷಗಳ ನಂತರ ನಾವು ಮುಂದಿನ ಜನ ಚಳವಳಿ ಬಜೆಟ್ ಅಧಿವೇಶನವನ್ನು ವಿಧಾನಸೌಧದಲ್ಲೆ ಮಾಡಬೇಕು. ಅಂತಹ ಹೋರಾಟವನ್ನು ರೂಪಿಸಬೇಕಿದೆ. ನಾಲ್ಕಿ ಲಕ್ಷ ಕೋಟಿಯಲ್ಲಿ ರೈತರಿಗೆ 7ಸಾವಿರ ಕೊಟ್ಟಿದೆ. ಆದರೆ ಉಳಿದ ಕೋಟಿಗಳು ಎಲ್ಲಿ ಹೋದವು ಎಂದು ಅವರು ಪ್ರಶ್ನಿಸಿದರು.

16 ಲಕ್ಷ ಕುಟುಂಬಗಳಿಗೆ ನಿವೇಶನ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಹಿಂದಿನಿಂದಲೂ ನಾವು ಇದನ್ನು ಕೇಳುತ್ತಲೆ ಬಂದಿದ್ದೇವೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ನಿವೇಶನ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ನಿವೇಶನ ಕೊಡದೆ ಕಾರ್ಪೊರೇಟ್‌ಗೆ ನಿವೇಶನ ಕೊಟ್ಟು ಅವರು ಮನೆ ನಿರ್ಮಿಸುತ್ತಾರೆ ಎಂದು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಇಡೀ ರಾಜ್ಯದಲ್ಲಿ ಇರುವ ಒಂದುವರೆ ಕೋಟಿ ಹೆಕ್ಟೇರ್ ಭೂಮಿಯಲ್ಲಿ ನಾವು ಕೇಳುತ್ತಿರುವುದು ಕೇವಲ 60 ಸಾವಿರ ಹೆಕ್ಟೇರ್ ಭೂಮಿ. ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ”ಬಿಎಂಜಿಆರ್” ಬಜೆಟ್ ಆಗಿದೆ. ಅಂದರೆ ಬೆಂಗಳೂರು, ಮೈಸೂರು, ಗುಲ್ಬರ್ಗ ಮತ್ತು ರಾಮನಗರಕ್ಕೆ ಸೀಮಿತವಾದ ಬಜೆಟ್, ಇದು ರಾಜ್ಯದ ಬಜೆಟ್ ಅಲ್ಲ ಎಂದು ಅವರು ಹೇಳಿದರು.
14 ಲಕ್ಷ ಹೆಕ್ಟೇರ್ ಭೂಮಿ ಗೋಮಾಳ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಭೂಮಿ ಎಲ್ಲಿ ಹೋಯಿತು. ಕೇರಳದಲ್ಲಿ ಮನೆ ಕಟ್ಟಲು 7 ಲಕ್ಷ ಕೊಡುತ್ತಿದೆ. ರಾಜ್ಯದಲ್ಲಿ ನೀಡುತ್ತಿರುವುದು 1.5 ಲಕ್ಷ. ನಾವು ಕನಿಷ್ಠ 5 ಲಕ್ಷವಾದರೂ ಕೊಡಿ ಎಂದು ಕೇಳುತ್ತಿದ್ದೇವೆ. ರಾಜ್ಯ ಸರ್ಕಾರ ಅದನ್ನೂ ಕೊಡುತ್ತಿಲ್ಲ. ಈ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಚರ್ಚೆ ಮಾಡಬೇಕಿದ್ದ ಆಡಳಿತ ಮತ್ತು ವಿಪಕ್ಷಗಳು, ಅದನ್ನೂ ಮಾಡುತ್ತಿಲ್ಲ ಎಂದು ಅವರು ಹೇಳಿದರು.
ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸರ್ಕಾರಗಳಲ್ಲಿ ಜಡತ್ವ ಇದೆ. ಕೇಂದ್ರದ ಬಜೆಟ್ ಅಂತೂ ರೈತ, ಮಹಿಳೆ, ಕೂಲಿಕಾರರಿಗೆ ದುಡಿಯುವ ವರ್ಗದ ಪರವಾಗಿಲ್ಲ. ಅದು ಎಂದಿದ್ದರೂ ಕಾರ್ಪೊರೇಟ್ ವರ್ಗಗಳ ಪರವಿದೆ. ಅವರ ನಿಲುವು ಎಂದಿದ್ದರೂ ಜನ ವಿರೋಧಿಯಾಗಿವೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾತರದ ರಾಜ್ಯಗಳು ಅಭಿವೃದ್ಧಿ ಹೊಂದಿ ತೆರಿಗೆ ಕಟ್ಟುತ್ತಿದೆ. ಆದರೆ ಕೇಂದ್ರ ಸರ್ಕಾರ ನಮ್ಮ ತೆರಿಗೆಯ ಹಣ ನೀಡುತ್ತಿಲ್ಲ ಎಂದು ಹೇಳಿದರು.
ನಾವು ಹೋರಾಟದ ರಂಗದಲ್ಲಿ ಇದ್ದೇವೆ. ಹೋರಾಟಗಾರರು ಹೋರಾಟ ಮಾಡುತ್ತಲೆ ಇರುತ್ತಾರೆ. ಆಳುವವರು ಆಳುತ್ತಲೆ ಇರುತ್ತಾರೆ. ಇದು ಬದಲಾಗಬೇಕಿದೆ. ರೈತ ಸಂಘಗಳೂ, ಕಮ್ಯುನಿಸ್ಟ್ ಸಂಘಟನೆಗಳು, ದಲಿತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಕೂದಲು ಸೀಲುವುದನ್ನು ಬಿಟ್ಟು ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಬಿಜೆಪಿ ಸರ್ಕಾರ ತಂದಂತಹ ಜನವಿರೋಧಿ ಕಾನೂನುಗಳನ್ನು ವಾಪಾಸು ತೆಗೆದುಕೊಳ್ಳಬೇಕು. ಆದರೆ ಕರ್ನಾಟಕ ಸರ್ಕಾರ ವಾಪಾಸು ತೆಗೆದುಕೊಳ್ಳುತ್ತಿಲ್ಲ. ಸರ್ಕಾರವನ್ನು ಭೇಟಿಯಾಗುವ ನಿಯೋಗಗಳು ಮೊದಲು ಇದನ್ನು ಪ್ರಸ್ತಾಪಿಸಬೇಕು ಎಂದು ಹೇಳಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್
ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್

