ದಲಿತರಿಗೆ ಮಾತ್ರ ಮೀಸಲಾತಿಯಿದೆ ಎಂಬಂತೆ ಬಿಂಬಿಸಿ ಅವರನ್ನು ಗತಿಗೆಟ್ಟವರು ಎಂದು ಅವಮಾನಿಸಲಾಗುತ್ತಿದೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಅವರು ಮಾವಳ್ಳಿ ಶಂಕರ್ ಹೇಳಿದರು. ಬುಧವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಂಯುಕ್ತ ಹೋರಾಟ-ಕರ್ನಾಟಕ’ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಸಾಮಾಜಿಕ ನ್ಯಾಯ ಮತ್ತು ಬಜೆಟ್ ಧೋರಣೆಗಳು’ ಎಂಬ ವಿಷಯದಲ್ಲಿ ‘ದಲಿತ ಸಮುದಾಯದ ಆಗ್ರಹಗಳು’ ಎಂಬ ವಿಚಾರದ ಬಗ್ಗೆ ವಿಷಯ ಮಂಡನೆ ಮಾಡಿ ಅವರು ಮಾತನಾಡುತ್ತಿದ್ದರು. ಮೀಸಲಾತಿ ವಿಚಾರದಲ್ಲಿ ದಲಿತರನ್ನು
ಭಾರತದಲ್ಲಿ ಅಕ್ಷರಸ್ಥರಲ್ಲೂ ಜಾತಿ ಇನ್ನೂ ಬಿಗಿಯಾಗುತ್ತಿವೆ. ಮರ್ಯಾದ ಹತ್ಯೆ, ಅಶ್ಪ್ರಶ್ಯತೆ ಇನ್ನೂ ಜಾಸ್ತಿಯಾಗುತ್ತಿವೆ. ಇದನ್ನು ಉದ್ದೇಶಿಸಿ ಮಾತನಾಡದೆ ಕೇವಲ ಕಾರ್ಪೊರೇಟ್, ಶ್ರಿಮಂತರು, ಸರ್ಕಾರ ಎಂದು ಮಾತನಾಡಿದರೆ ದಲಿತರು ಹತ್ತಿರ ಬರುವುದಿಲ್ಲ. ಕಂಬಾಲಪಳ್ಳಿ ದುರ್ಘಟನೆಗೆ 25 ವರ್ಷಗಳಾಯಿತು. ಅಲ್ಲಿನ ದಲಿತರ ಸುಟ್ಟ ವಾಸನೆ ಇನ್ನೂ ಕಾಡುತ್ತಿದೆ. ದಲಿತರನ್ನು ಇನ್ನೂ ಕೊಲ್ಲುತ್ತಲೆ ಇದ್ದಾರೆ ಎಂದು ಮಾವಳ್ಳಿ ಶಂಕರ್ ಅವರು ಹೇಳಿದರು. ಮೀಸಲಾತಿ ವಿಚಾರದಲ್ಲಿ ದಲಿತರನ್ನು
“ದಲಿತರ ವಿರುದ್ಧ ನಡೆದ ಎಲ್ಲಾ ಘಟನೆಗಳಲ್ಲಿ ದಲಿತರು ಕೂಲಿ ಜಾಸ್ತಿ ಕೇಳಿದ್ದಕ್ಕೆ ಮಾಡಲಾಗಿದೆ. ಎಲ್ಲಾ ಅಂಕಿ ಅಂಶಗಳು, ಅಧ್ಯಯನಗಳು ಮತ್ತು ವರದಿಗಳು ದಲಿತರ ಸಮಸ್ಯೆ ಇವತ್ತಿಗೂ ಹಾಗೆ ಇದೆ ಎಂದು ಹೇಳುತ್ತಿವೆ. ಎಷ್ಟೆ ಸಮಾಜ ಸುಧಾರಕರು, ಹೋರಾಟಗಾರರು ಬಂದರೂ ಸಮಸ್ಯೆ ಈಡೇರಿಲ್ಲ. ಮೀಸಲಾತಿಯನ್ನು ದಲಿತರಿಗೆ ಮಾತ್ರ ಕೊಡಲಾಗುತ್ತಿದೆ ಎಂಬ ಭಾವನೆಯಿದೆ. ದಲಿತರನ್ನು ಗತಿಗೆಟ್ಟವರು ಎಂದು ಅವಮಾನಿಸಲಾಗುತ್ತಿದೆ” ಎಂದು ಅವರು ಹೇಳಿದರು.
“ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವ ಕಾನೂನು ತಂದರು. ಆದರೆ ಕೊಟ್ಟಂತಹ ಹಣ ಏನಾಗಿದೆ ಎಂದು ತಿಳಿಯುತ್ತಿಲ್ಲ. 1 ಕೋಟಿಗೂ ಹೆಚ್ಚು ಇರುವ ದಲಿತರಿಗಾಗಿ ಈ ಹಣವನ್ನು ಬಳಸಿದ್ದಾಗಿ ಹೇಳುತ್ತಿದ್ದಾರೆ. ಆದರೆ ಈ ದುಡ್ಡು ಎಲ್ಲಿ ಹೋಯಿತು. ದಲಿತರು ಈಗಲೂ ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. ಕನಿಷ್ಠ ಈ ಹಣವನ್ನು ದಲಿತರ ಮನೆ ಮನೆಗೆ ಕೊಟ್ಟರೆ ಸಾಲುತ್ತಿತ್ತು” ಎಂದು ಅವರು ತಿಳಿಸಿದರು.
“ಗ್ಯಾರೆಂಟಿ ಯೋಜನೆಗಾಗಿ ಈ ಹಣವನ್ನು ಬಳಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಈ ಹಣವನ್ನು ದಲಿತರು ಬಳಸಿ ಸಬಲೀಕರಣ ಆಗಿದ್ದಾರೆ ಎಂದು ಯಾವ ಅಂಕಿ ಅಂಶಗಳನ್ನು ಇಟ್ಟು ಹೇಳುತ್ತಿದ್ದಾರೆ. ಸರ್ಕಾರದಿಂದ ದಲಿತರಿಗೆ ಏನೂ ಸಿಗದಿದ್ದರೂ, ದಲಿತರಿಗೆ ಮಾತ್ರ ಸರ್ಕಾರ ಕೊಡುತ್ತಿದೆ ಎಂಬಂತೆ ಸಮಾಜದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಹತ್ತಾರು ಎಕರೆ ಭೂಮಿಯಿರುವ ಭೂಮಾಲಿಕ ರೈತರೆ ಕಷ್ಟದಲ್ಲಿ ಇದಬೇಕಾದರೆ, ಭೂ ಹೀನ ದಲಿತರು, ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುವ ದಲಿತರ ಪರಿಸ್ಥಿತಿ ಹೇಗಿರಬಹುದು” ಎಂದು ಅವರು ಕೇಳಿದರು.
“ದಲಿತ ಸಮುದಾಯದ ವಿದ್ಯಾರ್ಥಿಗಳು ದನಗಳ ಕೊಟ್ಟಿಗೆಯಲ್ಲಿ ಇರುವ ಹಾಗೆ ಹಾಸ್ಟೆಲ್‌ನಲ್ಲಿ ವಾಸಿಸುತ್ತಿವೆ. ಸಂವೇದನ ಇರುವ ಸರ್ಕಾರ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ ಎಲ್ಲಾ ಸಮುದಾಯದ ಮಕ್ಕಳಿಗೂ ಕರಾಟೆಗಳನ್ನು ಕಲಿಸುವಂತೆ ವ್ಯವಸ್ಥೆ ಮಾಡಬೇಕಿತ್ತು. ಕೇಂದ್ರ ಸರ್ಕಾರವು ಮಾರವಾಡಿ ಬಡ್ಡಿ ವಸೂಲಿ ಮಾಡುವ ರೀತಿ 60%-40% ಎಂದು ಆಟವಾಡುತ್ತಿದೆ. ಎರಡೂ ಸರ್ಕಾರಗಳು ದಲಿತರ ಸಮುದಾಯವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಚಿನ್ನದ ಕಳ್ಳಸಾಗಣೆ ಪ್ರಕರಣ: ಬಂಧನದ ಭೀತಿಯಲ್ಲಿ ರನ್ಯಾ ರಾವ್ ಅವರ ಪತಿ ಹೈಕೋರ್ಟ್‌ಗೆ ಮೊರೆ
ಚಿನ್ನದ ಕಳ್ಳಸಾಗಣೆ ಪ್ರಕರಣ: ಬಂಧನದ ಭೀತಿಯಲ್ಲಿ ರನ್ಯಾ ರಾವ್ ಅವರ ಪತಿ ಹೈಕೋರ್ಟ್‌ಗೆ ಮೊರೆ

