“ಅಂಬೇಡ್ಕರ್ ಅವರನ್ನು ಉಲ್ಲೇಖಿಸುವ ಮುಖ್ಯಮಂತ್ರಿ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಅನ್ನು ನೇಮಕ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಕೂಡಾ ಲ್ಯಾಟರಲ್ ಎಂಟ್ರಿ ಮಾದರಿಯ ವ್ಯವಸ್ಥೆಯಾಗಿದೆ. ಅಂಬೇಡ್ಕರ್ ಅವನ್ನು ಮೊದಲನೇ ಪುಟದಲ್ಲಿ ಉಲ್ಲೇಖ ಮಾಡಿ, ಕೊನೆಯ ಪುಟದಲ್ಲಿ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಅನ್ನು ಜಾರಿಗೆ ತರುತ್ತೇವೆ ಎಂದರೆ ಎಂತಹ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ ಎಂದು ಶಿಕ್ಷಣ ತಜ್ಞ ಶ್ರೀಪಾದ ಭಟ್ ಅವರು ಗುರುವಾರ ಕೇಳಿದರು. ಅಂಬೇಡ್ಕರ್‌ರನ್ನು ಉಲ್ಲೇಖಿಸುವ
‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಸಮಾನ ಶಿಕ್ಷಣ ಮತ್ತು ಬಜೆಟ್’ ಎಂಬ ವಿಚಾರದ ಬಗ್ಗೆ ಗುರುವಾರ ಶ್ರೀಪಾದ ಭಟ್ ಅವರು ಮಾತನಾಡಿದರು. ಅಂಬೇಡ್ಕರ್‌ರನ್ನು ಉಲ್ಲೇಖಿಸುವ
“ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಎಂದರೆ ಕೈಗಾರಿಕೆ ಮತ್ತು ಕಾರ್ಪೋರೇಟ್‌ಗಳಲ್ಲಿ ಇರುವ ಪ್ರಮುಖ ವೃತ್ತಿಪರ ವ್ಯಕ್ತಿಗಳನ್ನು ಅಧ್ಯಾಪಕರನ್ನಾಗಿ ನೇಮಕ ಮಾಡುವುದಾಗಿದೆ. ಅವರು ಬಂದು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವ್ಯವಸ್ಥೆ ಇದಾಗಿದೆ. ಸರ್ಕಾರ ಇದರಲ್ಲಿ ಮೀಸಲಾತಿಯಿದೆ ಎಂದು ಅದನ್ನು ಸಮರ್ಥನೆ ಮಾಡುತ್ತಿದೆ, ಆದರೆ ಯಾವ ಕೈಗಾರಿಕೆಯಲ್ಲಿ ಜನರಲ್ ಮ್ಯಾನೇಜರ್ ಸೇರಿದಂತೆ ದೊಡ್ಡ ಕಂಪನಿಯ ದೊಡ್ಡ ಹುದ್ದೆಗಳಲ್ಲಿ ದಲಿತರಿದ್ದಾರೆ” ಎಂದು ಅವರು ಕೇಳಿದರು
“ಸರ್ಕಾರಗಳು ಬಜೆಟ್ ಮಂಡಿಸಬೇಕಾದಾಗ ಪ್ರಾದೇಶಿಕ, ಸಾಮಾಜಿಕ ಅಸಮತೋಲನವನ್ನು ಗಮನಿಸಬೇಕಾಗಿತ್ತು. ಆದರೆ ಈ ಸರ್ಕಾರಗಳು ಅದನ್ನು ಮಾಡುತ್ತಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಶಿಕ್ಷಣಕ್ಕೆ 45,800 ಕೋಟಿ ನೀಡಲಾಗಿದೆ ಎಂದು ಎಂದು ಹೇಳುತ್ತಿದ್ದಾರೆ. ಆದರೆ ಇದರಲ್ಲಿ ಉನ್ನತ ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ಎಷ್ಟು ಎಂಬುವುದು ಅವರಿಗೇ ಗೊತ್ತಿಲ್ಲ. ಕಾಂಗ್ರೆಸ್ ಆಗಲಿ, ಇತರ ಯಾವುದೆ ಸರ್ಕಾರವಾಗಲಿ ಶಿಕ್ಷಣದ ವಿಚಾರದಲ್ಲಿ ಸಾರ್ವಜನಿಕ ಶಿಕ್ಷಣದಿಂದ ಹೊರಹೋಗುತ್ತಿವೆ.” ಎಂದು ಅವರು ಹೇಳಿದರು.
“ಶಿಕ್ಷಣಗಳು ಕಾರ್ಪೋರೇಟ್ ಕೈಗಳಿಗೆ ಹೋಗುತ್ತಿವೆ. ಎನ್‌ಇಪಿ ಕೂಡಾ ಅನಧೀಕೃತವಾಗಿ ತಯಾರಾಗಿದ್ದು ಅಜೀಂ ಪ್ರೇಮ್‌ಜಿ ಯುನಿವರ್ಸಿಟಿಯಲ್ಲಾಗಿದೆ. ಶಾಲೆಗಳನ್ನು ದಾನಿಗಳು ದತ್ತು ತೆಗೆದುಕೊಳ್ಳುತ್ತಿರುವುದು ಕೂಡಾ ಅಪಾಯಕಾರಿಯಾಗಿದೆ. ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಯೋಜನೆ ಇಲ್ಲ. ಜೊತೆಗೆ ತರಗತಿಗಳನ್ನು ಕೂಡಾ ಎನ್‌ಜಿಒಗಳು ದತ್ತು ತೆಗೆದುಕೊಳ್ಳುತ್ತಿವೆ.” ಎಂದು ಅವರು ಹೇಳಿದರು.
ಎನ್‌ಇಪಿಯನ್ನು ಕರ್ನಾಟಕ ಜಾರಿ ಮಾಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಸಂಸತ್ತಿನಲ್ಲಿ ಹೇಳಿ ಮೂರು ದಿನವಾದರೂ, ಇದರ ಬಗ್ಗೆ ಕಾಂಗ್ರೆಸ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಶ್ರೀಪಾದ್ ಭಟ್ ಅವರು ಹೇಳಿದ್ದಾರೆ.
ಬಡವರಿಗೆ ಬೆಂಕಿಪೊಟ್ಟಣದ ರೀತಿಯ ಮನೆ ಕೊಟ್ಟರೆ ಸಾಕು ಎಂಬ ಭಾವನೆ ಸರ್ಕಾರಕ್ಕಿದೆ: ಹೋರಾಟಗಾರ ಕುಮಾರ್ ಸಮತಳ

ಜನ ಚಳವಳಿಗಳ ಅಧಿವೇಶನದಲ್ಲಿ ‘ವಸತಿ ಮತ್ತು ಬಜೆಟ್’ ವಿಚಾರದಲ್ಲಿ ಮಾತನಾಡಿದ ಹೋರಾಟಗಾರ ಕುಮಾರ್ ಸಮತಳ, “ವಸತಿ ಮತ್ತು ಭೂಮಿ ಕೊಡುವುದು ನಮ್ಮ ಆದ್ಯತೆ ಎಂದು ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕರ ಹೇಳಿತ್ತು. ಆದರೆ ಈಗಿನ ಬಜೆಟ್‌ನಲ್ಲಿ ಈ ಭಗ್ಗೆ ಯಾವುದೇ ಘೋಷಣೆಯಿಲ್ಲ. ಜೊತೆಗೆ, ಬಡವರಿಗೆ ನೀಡುವ ವಸತಿ ಎಂದರೆ ಬೆಂಕಿಪೊಟ್ಟಣದ ರೀತಿಯಲ್ಲಿ ಒಂದರ ಮೇಲೆ ಒಂದು ಮನೆ ಕೊಟ್ಟರೆ ಸಾಕು ಎಂಬ ಭಾವನೆಯಿದೆ. ಅವರಿಗೆ ಖಾಸಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ.” ಎಂದು ಹೇಳಿದರು.
“ವಸತಿ ಸಮಸ್ಯೆ ಒಂದು ಸಾಮಾಜಿಕ ಸಮಸ್ಯೆಯಾಗಿದೆ. ಪ್ರತಿ ಪಂಚಾಯತ್‌ನಲ್ಲೂ ಮುಂದಿನ 30 ವರುಷಕ್ಕೆ ವಸತಿಗೆ ಎಂದು ಭೂಮಿ ಮೀಸಲು ಇಡಬೇಕು. ಸರ್ಕಾರವು ಗೋಮಾಳದ ಮತ್ತು ಸರ್ಕಾರಿ ಭೂಮಿಯನ್ನು ಖಾಸಗಿಗೆ ಮತ್ತು ಮಠಗಳಿಗೆ ನೀಡುತ್ತದೆ. ಒಂದು ವೇಳೆ ಭೂಮಿ ಕೊಟ್ಟರೆ ಊರಿನ ಹೊರಗೆ ಕೊಡುತ್ತದೆ. ಅಲ್ಲಿ ವಾಸ ಮಾಡಲು ಕೂಡಾ ಸಾಧ್ಯವಿಲ್ಲ. ಬಡವರಿಗೆ ನೀಡುವ ಮನೆ 20/40 ಆದರೆ ಸಾಕು ಎನ್ನುವ ಸರ್ಕಾರದ ಶಾಸಕರು, ತಮ್ಮ ಮನೆಗಳನ್ನು ನಾಲ್ಕು ಎಕರೆಗಳಲ್ಲಿ ಕಟ್ಟಿಕೊಂಡಿರುತ್ತಾರೆ.” ಎಂದು ಹೇಳಿದರು.


