Homeಕರ್ನಾಟಕಅದಾನಿ ವಶದಲ್ಲಿರುವ ವಿಮಾನ ನಿಲ್ದಾಣದ ಬಗ್ಗೆ ಪ್ರಶ್ನಿಸಬೇಕಿದ್ದ ಯುವಜನರು ಅದಕ್ಕೆ ಕೋಟಿ ಚೆನ್ನಯ್ಯ ಹೆಸರು ಇಡಬೇಕು...

ಅದಾನಿ ವಶದಲ್ಲಿರುವ ವಿಮಾನ ನಿಲ್ದಾಣದ ಬಗ್ಗೆ ಪ್ರಶ್ನಿಸಬೇಕಿದ್ದ ಯುವಜನರು ಅದಕ್ಕೆ ಕೋಟಿ ಚೆನ್ನಯ್ಯ ಹೆಸರು ಇಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ: ಹೋರಾಟಗಾರ ಮುನೀರ್ ಕಾಟಿಪಳ್ಳ

- Advertisement -
- Advertisement -

ಮಂಗಳೂರಿನಲ್ಲಿ ದೊಡ್ಡ ದೊಡ್ಡ ಕೈಗಾಗರಿಕೆಗಳು ಇವೆ. ಆದರೆ ಅಲ್ಲಿ ವರ್ಷದಿಂದ ವರ್ಷಕ್ಕೆ ಉದ್ಯೋಗಗಳು ಇಳಿಯುತ್ತಿವೆ. ಕೈಗಾರಿಗಕೆಗಳು, ಬಂದರು ಮತ್ತು ವಿಮಾನ ನಿಲ್ದಾಣಗಳು ಖಾಸಗೀಕರಕ್ಕೆ ಒಳಗಾಗಿದೆ. ಮಂಗಳೂರು ವಿಮಾನ ನಿಲ್ದಾಣ ಅದಾನಿ ವಶದಲ್ಲಿದೆ, ಅದರ ಬಗ್ಗೆ ನಮ್ಮ ಯುವಜನರು ಮಾತನಾಡಬೇಕಿತ್ತು. ಆದರೆ ಭಾವನಾತ್ಮಕವಾಗಿ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರು ಇಡಬೇಕು ಎಂದು ಹೋರಾಟ ಮಾಡಲಾಗುತ್ತಿದೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಗುರುವಾರ ಹೇಳಿದರು. ಅದಾನಿ ವಶದಲ್ಲಿರುವ

‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ಗುರುವಾರ ‘ಉದ್ಯೋಗ ಮತ್ತು ಬಜೆಟ್’ ಎಂಬ ವಿಚಾರದ ಬಗ್ಗೆ ಮುನೀರ್ ಕಾಟಿಪಳ್ಳ ಮಾತನಾಡುತ್ತಿದ್ದರು.

“ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡುವುದು ಬಿಟ್ಟು ಉದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ. ಇರುವ 80% ಉದ್ಯೋಗಗಳು ಕೂಡಾ ಗುತ್ತಿಗೆ ಆಧಾರದ ಉದ್ಯೋಗಗಳಾಗಿದ್ದು, ಜೊತೆಗೆ ಸ್ಥಳೀಯರಿಗೆ ಉದ್ಯೊಗ ನೀಡುತ್ತಿಲ್ಲ. ಕೈಗಾರಿಕೆಗಳಲ್ಲಿ ಯುನಿಯನ್‌ಗಳ ಶಕ್ತಿ ಕೂಡಾ ಕಡಿಮೆ ಮಾಡಲಾಗಿದೆ. ಹೊಸ ಉದ್ಯೋಗಗಳಾದ ಸ್ವಿಗ್ಗಿ, ಜೊಮೆಟೊ ರೀತಿಯ ಉದ್ಯೋಗಗಳು ಸೃಷ್ಟಿಯಾದರೂ ವೇತನ ತೀರಾ ಕಡಿಮೆ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.

ದೊಡ್ಡ ಕಂಪೆನಿಗಳು ಮಾಡುವ ಚಿಲ್ಲರೆ ವ್ಯಾಪಾರದಿಂದಾಗಿ ಸ್ವಯಂ ಉದ್ಯೋಗಗಳು ಇಲ್ಲಾದಾಗಿದೆ. ಕಾರ್ಮಿಕ ಸಂಘಗಳು ಕಟ್ಟಲು ಅವಕಾಶವಿಲ್ಲ. ಯುವಜನರ ಇಡೀ ಜೀವನ ಅಭದ್ರತೆಯಲ್ಲಿ ಕಳಯುವಂತೆ ಆಗಿದೆ ಎಂದು ಅವರು ಹೇಳಿದರು.

“ದೊಡ್ಡ ಕಂಪೆನಿಗಳಲ್ಲಿ ಉದ್ಯೋಗ ಎಂಬ ಕಾರಣಕ್ಕೆ ಯುವಜನರಿಗೆ ಮದುವೆಯಾಗುತ್ತಿದೆ ಎಂಬ ಲಾಭವೊಂದನ್ನು ಬಿಟ್ಟು ಬೇರೇನೂ ಆಗುತ್ತಿಲ್ಲ. ಆದರೆ ಅವರ ವೇತನಗಳು 15 ಸಾವಿರ ಕೂಡಾ ಇರುವುದಿಲ್ಲ. ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿ ಕೆಲಸ ಮಾಡುವ ಯುವಜನರು ಅಲ್ಲಿ ಕೆಲಸ ಮಾಡಿ ಹೊರಗಡೆ ಕೂಡಾ ಹತ್ತು ಗಂಟೆಯ ವರೆಗೆ ಕೆಲಸ ಮಡುತ್ತಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ಯಾರು ಹೊಣೆ?” ಎಂದು ಮುನೀರ್ ಕಾಟಿಪಳ್ಳ ಅವರು ಕೇಳಿದರು.

“ಭೂಸ್ವಾಧಿನ ಮಾಡುವಾಗ ಎಸ್‌ಇಝೆಡ್ ಪರವಾಗಿ ಇದ್ದ ಬಜರಂಗದಳ, ಭಾವನಾತ್ಮಕ ವಿಚಾರದಲ್ಲಿ ಮಾತ್ರ ಪ್ರತಿಭಟನೆ ಮಾಡುತ್ತಿದೆ. ಭಾವನಾತ್ಮಕ ವಿಚಾರವಾಗಿ ಪ್ರತಿಭಟನೆ ಮಡುವವರು ಉದ್ಯೊಗದ ಬಗ್ಗೆ ಪ್ರತಿಭಟನೆ ಮಾಡುತ್ತಿಲ್ಲ. ಧರ್ಮ ಎಂಬ ಅಫೀಮನ್ನು ನೀಡಲಾಗಿದೆ. ಉದ್ಯೋಗದ ಬಗ್ಗೆ ಮಾತಾನಾಡದ ಸೂಲಿಬೆಲೆ ಮುಸ್ಲಿಮರ ಹೆಣ್ಣುಗಳನ್ನು ಮದುವೆ ಆಗಿ ಎಂದು ದ್ವೆಷ ಭಾಷಣ ಮಾಡುತ್ತಿದ್ದಾರೆ” ಎಂದು ಹೇಳಿದರು.

“ವಿದೇಶಗಳಲ್ಲಿ ಉದ್ಯೋಗ ನಷ್ಟ ಹೊಂದಿದ ಯುವಕರಿಗೆ ಮರು ಜೀವನ ಕಟ್ಟಿಕೊಳ್ಳಲು ಸರ್ಕಾರ ನೆರವಾಗುತ್ತಿಲ್ಲ. ಕೇರಳದಲ್ಲಿ ಇಂತಹ ಯುವಕರಿಗೆ ಸರ್ಕಾರ ನೆರವು ನೀಡುತ್ತಿದೆ. ಬಜೆಟ್‌ನಲ್ಲಿ ಖಾಸಗಿ ಕಂಪೆನಿಗೆ ಸಾವಿರಾರು ಕೋಟಿ ರೂ. ಸಬ್ಸಿಡಿ ನೀಡುವ ಸರ್ಕಾರ, ಅವರು ಎಷ್ಟು ಖಾಯಂ ಉದ್ಯೋಗ ಎಷ್ಟು ಕೊಡುತ್ತಿದ್ದಾರೆ? ಎಷ್ಟು ವೇತನ ನೀಡುತ್ತಾರೆ ಎಂಬ ಬಗ್ಗೆ ಹೇಳುವುದಿಲ್ಲ” ಎಂದು ಹೇಳಿದರು.

ಸಾರ್ವಜನಿಕ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದ ಸರ್ಕಾರವನ್ನು ಕಾರ್ಪೋರೇಟ್ ಪರವಾದ ಸರ್ಕಾರ ಎಂದೇ ಹೇಳಬೇಕು: ಜನಪರ ವೈದ್ಯ ಡಾ. ಅನಿಲ್ ಕುಮಾರ್ ಅವುಲಪ್ಪ

ಕಾರ್ಯಕ್ರಮದಲ್ಲಿ ‘ಜನಾರೋಗ್ಯ ಮತ್ತು ಬಜೆಟ್’ ಎಂಬ ವಿಚಾರದ ಬಗ್ಗೆ ಮಾತನಾಡಿದ ಖ್ಯಾತ ಜನಪರ ವೈದ್ಯರಾದ ಡಾ. ಅನಿಲ್ ಕುಮಾರ್ ಅವುಲಪ್ಪ, ಸ್ವಾತಂತ್ಯ್ರ ಬಂದು 78 ವರ್ಷಗಳಾದರೂ ಸಹಜ ಪ್ರಕ್ರಿಯೆಯಾದ ಗರ್ಭದಾರಣೆಯ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

“ಸ್ವಾತಂತ್ರ ನಂತರ ಕೂಡಾ ಕಾಯಿಲೆಗೆ ಬಲಿಯಾಗುವುದು ಹೆಚ್ಚಾಗಿದೆ. 70 ದಶಕಗಳ ಹೊತ್ತಿಗೆ ಸಾಂಕ್ರಮಿಕ ಕಾಯಿಲೆಗೆ ಬಲಿಯಾಗುತ್ತಿದ್ದರೆ, 90ರ ನಂತರ ಸಾಂಕ್ರಾಮಿಕವಲ್ಲದ ಕಾಯಿಲೆಗೆ ಬಲಿಯಾದರು. ಆದರೆ ಈಗ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗೆ ಬಲಿಯಾಗುತ್ತಿದ್ದೇವೆ. ಬ್ರಿಟೀಷರ ಕಾಲದಿಂದಲೂ ಟಿಬಿ ಮುಕ್ತ ಎಂದು ಹೇಳುವ ನಾವು ಈಗಲೂ ಅದನ್ನೆ ಹೇಳುತ್ತಲೆ ಇದ್ದೇವೆ” ಎಂದು ಹೇಳಿದರು.

“ಇಂಡಿಯನ್ ಪಬ್ಲಿಕ್ ಹೆಲ್ತ್‌ ಸ್ಟಾಂಡರ್ಡ್‌ ಪ್ರಕಾರ ಆರೋಗ್ಯಕ್ಕೆ ಬಜೆಟ್‌ನ 8% ಮೀಸಲಿಡಬೇಕಿದೆ. ಆದರೆ ನಮ್ಮ ಸರ್ಕಾರ ಕೇವಲ 4% ಅಷ್ಟೆ ಇದೆ. ರಾಜ್ಯದ ಜಿಡಿಪಿಯಲ್ಲಿ 2.5%ರಷ್ಟು ಆರೋಗ್ಯಕ್ಕೆ ಖರ್ಚು ಮಾಡಬೇಕು ಎಂದು ಅದೇ ನಿಯಮ ಹೇಳುತ್ತದೆ. ಆದರೆ ರಾಜ್ಯ ಸರ್ಕಾರ ಯಾವತ್ತೂ ಕೂಡಾ 0.6% ಕ್ಕಿ ಹೆಚ್ಚು ಖರ್ಚು ಮಾಡಿಲ್ಲ. ಕೇಂದ್ರೆ ಸರ್ಕಾರ ತನ್ನ ಭಾರತದ ಜಿಡಿಪಿಯಲ್ಲಿ 1.97% ಮಾತ್ರ ಖರ್ಚು ಮಾಡುತ್ತಿದೆ” ಎಂದು ಅವರು ಹೇಳಿದರು. ಅದಾನಿ ವಶದಲ್ಲಿರುವ

“ಮೂಲಭೂತವಾಗಿ ಜನರ ಆರೋಗ್ಯಕ್ಕಾಗಿ ವೈದ್ಯಕೀಯ ಸಂಸ್ಥೆಗಳು ಬೇಕಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಗುಲ್ಬರ್ಗಾ ವಿಭಾಗಗಳಿವೆ. 2022ರ ವರೆಗೆ ರಾಜ್ಯದ ಗುಲ್ಬರ್ಗಾ ಹೊರತು ಪಡಿಸಿ ರಾಜ್ಯದ ಇತರ ಕಡೆಗಳಲ್ಲಿ ಹೆಚ್ಚೆ ಸಂಸ್ಥೆಗಳು ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಆರೋಗ್ಯ ಕೇಂದ್ರಗಳು ಹೆಚ್ಚಿದ್ದರೂ, ಸಮುದಾಯ ಕೇಂದ್ರಗಳು ರಾಜ್ಯದಾದ್ಯಂತ ಕಡಿಮೆಯಿವೆ. ಅದಾಗ್ಯೂ, ಈ ಎಲ್ಲಾ ಸಂಸ್ಥೆಗಳಿಗೆ ಬೇಕಾದ ಮಾನವ ಸಂಪನ್ಮೂಲಗಳು ಕಡಿಮೆಯಿದೆ.” ಎಂದು ಅವರು ಹೇಳಿದರು.

“ಹುದ್ದೆಗಳು ಖಾಲಿಯಿದ್ದರೂ ಅದಕ್ಕೆ ಸರ್ಕಾರ ನೇಮಿಸುತ್ತಿಲ್ಲ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಬಜೆಟ್‌ನಲ್ಲಿ ಯಾವುದೇ ರೀತಿಯ ಘೋಷಣೆಗಳನ್ನು ಮಾಡಿಲ್ಲ. ಸಾರ್ವಜನಿಕ ವೈದ್ಯಕೀಯ ಸಂಸ್ಥೆಗಳ ಹುದ್ದೆಗಳನ್ನು ಭರ್ತಿ ಮಾಡಲು ಬೇಕಾಗುವ ಅನುದಾನ ಘೋಷಿಸದ ಯಾವುದೇ ಸರ್ಕಾರ ಕಾರ್ಪೋರೇಟ್ ಪರವಾದ ಸರ್ಕಾರ ಎಂದೇ ಹೇಳಬೇಕಿದೆ” ಎಂದು ಅವರು ಹೇಳಿದರು.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಅಂಬೇಡ್ಕರ್‌ರನ್ನು ಉಲ್ಲೇಖಿಸುವ ಸಿಎಂ ಲ್ಯಾಟರಲ್‌ ಎಂಟ್ರಿ ಮಾದರಿಯ ವ್ಯವಸ್ಥೆ ತರುತ್ತಿದ್ದಾರೆ: ಶಿಕ್ಷಣ ತಜ್ಞ ಶ್ರೀಪಾದ ಭಟ್

ಅಂಬೇಡ್ಕರ್‌ರನ್ನು ಉಲ್ಲೇಖಿಸುವ ಸಿಎಂ ಲ್ಯಾಟರಲ್‌ ಎಂಟ್ರಿ ಮಾದರಿಯ ವ್ಯವಸ್ಥೆ ತರುತ್ತಿದ್ದಾರೆ: ಶಿಕ್ಷಣ ತಜ್ಞ ಶ್ರೀಪಾದ ಭಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಟ್ರಿಬ್ಯೂನಲ್ ನ್ಯಾಯಾಧೀಶರಿಂದ ಚುನಾವಣಾ ಆಯೋಗದ ಪೋರ್ಟಲ್ ವೈಫಲ್ಯದ ಬಗ್ಗೆ ಗಂಭೀರ ಆರೋಪ: ‘ನೋಡೀಸ್ ಜಾರಿ, ವಿಚಾರಣೆ ಅಥವಾ ಮತದಾರರ ಹಕ್ಕು ಮರುಸ್ಥಾಪನೆ ಅಸಾಧ್ಯ!

ಪ್ರಮುಖ ರಾಷ್ಟ್ರೀಯ ದಿನಪತ್ರಿಕೆ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿರುವಂತೆ, ಪಶ್ಚಿಮ ಬಂಗಾಳದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅಳಿಸಲ್ಪಟ್ಟ ಲಕ್ಷಾಂತರ ಮತದಾರರ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಸುಪ್ರೀಂ ಕೋರ್ಟ್...

‘ನಕಲಿ ಫಾರ್ಮ್ 7 ಸಲ್ಲಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಿ..’; ಅಧಿಕಾರಿಗಳಿಗೆ ತೆಲಂಗಾಣ ಸಿಇಒ ಸೂಚನೆ

ತೆಲಂಗಾಣದಲ್ಲಿ ಫಾರ್ಮ್ 7 ರ ಮೂಲಕ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (ಡಿಇಒ) ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ)...

ಕರ್ನಾಟಕ ಎಸ್ಐಆರ್: ಮುಸ್ಲೀಮರನ್ನು ಗುರಿಯಾಗಿಸಿ ತೀರ್ಥಹಳ್ಳಿಯಲ್ಲಿ 81 ಮತದಾರರ ಹೆಸರು ಅಳಿಸಲು ಬಿಜೆಪಿ ಮುಖಂಡರ ಮನವಿ

ಶಿವಮೊಗ್ಗ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ನಡುವೆಯೇ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸುರುಳಿ ಬಾಳೆಬೈಲು ಗ್ರಾಮದಲ್ಲಿ 81 ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಅಳಿಸುವಂತೆ ಬಿಜೆಪಿ...

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಪ್ರಕರಣ: ಬಿಜೆಪಿ ನಾಯಕ ರವಿ ಪಾಟೀಲ್‌ಗೆ ನಿರೀಕ್ಷಣಾ ಜಾಮೀನು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ಮೋಸದಿಂದ ಡಿಲೀಟ್ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಡಾ. ರವಿ ಬಸಲಿಂಗಪ್ಪಗೌಡ ಪಾಟೀಲ್ ಅವರಿಗೆ ಕರ್ನಾಟಕದ ಬೆಳಗಾವಿಯ...

ಫಾರ್ಮ್-7 ಆಕ್ಷೇಪಣೆ; ಈವರೆಗೆ ಯಾವ ಮತದಾರರ ಹೆಸರನ್ನೂ ಕೈಬಿಟ್ಟಿಲ್ಲ ಎಂದ ಅನ್ಬುಕುಮಾರ್

ಫಾರ್ಮ್-7 ಮೂಲಕ ಅರ್ಹ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಿದ ತಕ್ಷಣ ಮತದಾರರ ಹೆಸರು ಸ್ವಯಂಚಾಲಿತವಾಗಿ ಡಿಲೀಟ್ ಆಗುವುದಿಲ್ಲ. ಇಆರ್‌ಒಗಳ ಕಡ್ಡಾಯ ಪರಿಶೀಲನೆ, ಅರ್ಜಿ ಕೊಟ್ಟವರಿಗೆ ನೋಟೀಸ್ ಮತ್ತು ವಿಚಾರಣೆ ನಡೆಸಿದ...

‘ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದಲೇ ಆಗಬೇಕು’: ಗ್ಯಾನೇಶ್ ಕುಮಾರ್ ಪ್ರಕರಣದಲ್ಲಿ ಆಯೋಗಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಚುನಾವಣಾ ಆಯೋಗದ ಮಹತ್ವದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು...

ಎಸ್‌ಐಆರ್; ಮತದಾರರ ಪಟ್ಟಿ ಅಕ್ರಮದಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ನಾರಿಮನ್ ಕಳವಳ

ದೇಶದಲ್ಲಿ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ಲಕ್ಷಾಂತರ ನಾಗರಿಕರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಇದರಿಂದ "ಪ್ರಜಾಪ್ರಭುತ್ವ ಹಾಗೂ ನಾಗರಿಕರ ಮತದಾನದ ಹಕ್ಕು ತೀವ್ರ ಅಪಾಯದಲ್ಲಿದೆ" ಎಂದು...

ಕಡೂರಿನಲ್ಲಿ 30 ಅರ್ಹ ಮತದಾರರ ಹೆಸರು ಅಳಿಸಲು ಫಾರಂ-7 ಸಲ್ಲಿಕೆ: ಮಾಜಿ ಕೌನ್ಸಿಲರ್ ಮತ್ತು ಬಿಜೆಪಿಯ ಸದಸ್ಯ ಮೋಹನ್ ಕುಮಾರ್ ವಿರುದ್ಧ ಆರೋಪ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ರಾಜ್ಯಾದ್ಯಂತ ತೀವ್ರಗೊಂಡಿವೆ. ಇದರ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ...

ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ ಆದಿವಾಸಿ ವಿದ್ಯಾರ್ಥಿಗಳ ಸರಣಿ ಸಾವು ಖಂಡಿಸಿ ಬೃಹತ್ ಪ್ರತಿಭಟನೆ: ಎನ್‌ಎಸ್‌ಯುಐ ಅಧ್ಯಕ್ಷ ಸೇರಿ ಹಲವರ ಬಂಧನ, ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ!

ಮಹಾರಾಷ್ಟ್ರದ ಸರ್ಕಾರಿ ಹಾಗೂ ಅನುದಾನಿತ ಆಶ್ರಮ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಭದ್ರತಾ ಲೋಪ ಖಂಡಿಸಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಬುಡಕಟ್ಟು ಕ್ಷೇಮಾಭಿವೃದ್ಧಿ...

ಬಿಜೆಪಿ ನಾಯಕರ ದ್ವೇಷ ಭಾಷಣ, ಹಿಂಸಾಚಾರ, ಜಾಮಿಯಾ ಪೊಲೀಸ್ ದೌರ್ಜನ್ಯ: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

ನವದೆಹಲಿ: 2020ರ ಈಶಾನ್ಯ ದೆಹಲಿ ಹಿಂಸಾಚಾರ, 2019ರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಹಿಂಸಾಚಾರ ಹಾಗೂ ಹಿಂಸಾಚಾರಕ್ಕೂ ಮುನ್ನ ನಡೆದಿದ್ದ ಎನ್ನಲಾದ ದ್ವೇಷ ಭಾಷಣಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು...