ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭ ಮೇಳವನ್ನು ಮಂಗಳವಾರ ಸದನದಲ್ಲಿ ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಷ್ಟೊಂದು ದೊಡ್ಡ ಸಭೆಯನ್ನು ಆಯೋಜಿಸಿ ಭಾರತದ ಸಾಮೂಹಿಕ ಶಕ್ತಿಯನ್ನು ಪ್ರಶ್ನಿಸಿದವರಿಗೆ ಇದು ಸೂಕ್ತ ಉತ್ತರವನ್ನು ನೀಡಿದೆ ಎಂದು ಹೇಳಿದ್ದಾರೆ. ಕುಂಭಮೇಳವನ್ನು ಶ್ಲಾಘಿಸಿ
ಲೋಕಸಭೆಯಲ್ಲಿ ಅವರ ಹೇಳಿಕೆಯು ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಕುಂಭಮೇಳದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಅದೇ ಕಾರ್ಯಕ್ರಮದ ಸಮಯದಲ್ಲಿ ಕಾಲ್ತುಳಿತಕ್ಕೆ ಒಳಪಟ್ಟು ಸಾವನ್ನಪ್ಪಿದ ಜೀವಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ವಿಪಕ್ಷಗಳು ಪ್ರಶ್ನಿಸಿವೆ. ಕುಂಭಮೇಳವನ್ನು ಶ್ಲಾಘಿಸಿ
ಲೋಕಸಭೆಯಲ್ಲಿ ಮಾತನಾಡಿದ ಮೋದಿ, ಮಹಾ ಕುಂಭದಲ್ಲಿ ನಡೆದ ಬೃಹತ್ ಏಕತೆಯ ಪ್ರದರ್ಶನವು ಭಾರತದ ಶಕ್ತಿಯಾಗಿದೆ ಎಂದು ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ಜಗತ್ತು ಅಸ್ತವ್ಯಸ್ತವಾಗಿರುವ ಈ ಸಮಯದಲ್ಲಿ ಈ ಕಾರ್ಯಕ್ರಮ ಭಾರತದ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ. “ಇತಿಹಾಸದಾದ್ಯಂತ, ಮುಂದಿನ ಪೀಳಿಗೆಗೆ ಉದಾಹರಣೆಗಳಾಗುವ ನಿರ್ಣಾಯಕ ಕ್ಷಣಗಳಿವೆ” ಎಂದು ಅವರು ಹೇಳಿದ್ದಾರೆ.
“ನಮ್ಮ ರಾಷ್ಟ್ರವು ಸಹ ಹೊಸ ದಿಕ್ಕನ್ನು ನೀಡಿದ ಮತ್ತು ತನ್ನ ಜನರನ್ನು ಜಾಗೃತಗೊಳಿಸಿದ ಅಂತಹ ಕ್ಷಣಗಳಿಗೆ ಸಾಕ್ಷಿಯಾಗಿದೆ… ಅದೇ ರೀತಿ, ನಮ್ಮ ಸ್ವಾತಂತ್ರ್ಯ ಹೋರಾಟವು ಹಲವಾರು ತಿರುವುಗಳಿಂದ ಗುರುತಿಸಲ್ಪಟ್ಟಿದೆ – 1857 ರ ದಂಗೆ, ವೀರ್ ಭಗತ್ ಸಿಂಗ್ ಅವರ ಹುತಾತ್ಮತೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ದೆಹಲಿ ಚಲೋ’ ಎಂಬ ಘೋಷಣೆ ಮತ್ತು ಮಹಾತ್ಮ ಗಾಂಧಿಯವರ ದಂಡಿ ಮೆರವಣಿಗೆ” ಎಂದು ಮೋದಿ ಹೇಳಿದ್ದಾರೆ.
“ಜನರು ತಮ್ಮ ಅಹಂಕಾರವನ್ನು ಬದಿಗಿಟ್ಟು ‘ನಾನು’ ಅಲ್ಲ ‘ನಾವು’ ಎಂಬ ಭಾವನೆಯೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ಒಟ್ಟುಗೂಡಿದರು. ಮಹಾ ಕುಂಭವು ದೊಡ್ಡವರು ಮತ್ತು ಸಣ್ಣವರು ಎಂಬ ಭೇದವಿಲ್ಲ ಎಂಬುದನ್ನು ಪ್ರದರ್ಶಿಸಿತು” ಎಂದು ಅವರು ಹೇಳಿದ್ದಾರೆ. ಅದಾಗ್ಯೂ, ಮಹಾಕುಂಭದಲ್ಲಿ ವಿವಿಐಪಿಗಳಿಗೆ ಪ್ರತ್ಯೇಕ ಮತ್ತು ಸಾಮಾನ್ಯ ಜನರಿಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿತ್ತು ಎಂದು ವರದಿಯಾಗಿದೆ.
ತಮ್ಮ ಇತ್ತೀಚಿನ ಮಾರಿಷಸ್ ಭೇಟಿಯನ್ನು ನೆನಪಿಸಿಕೊಂಡ ಮೋದಿ, ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ಗಂಗಾ ತಲಾಬ್‌ನಲ್ಲಿ ಅರ್ಪಿಸಿದ ಕ್ಷಣ ಭಕ್ತಿ, ನಂಬಿಕೆ ಮತ್ತು ಈ ಆಚರಣೆಯ ವಾತಾವರಣವು ನಿಜವಾಗಿಯೂ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.
ನಂತರ, ಮಹಾ ಕುಂಭದ ಕುರಿತು ಚರ್ಚೆ ನಡೆಸಲು ಕೋರಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮಾತನ್ನು ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದರು. ಇದರ ನಂತರ ವಿರೋಧ ಪಕ್ಷಗಳ ಪೀಠವು ಪ್ರತಿಭಟನೆ ನಡೆಸಿದೆ. ವಿರೋಧ ಪಕ್ಷದ ಸಂಸದರು ಸದನದ ಬಾವಿಗೆ ಧಾವಿಸಿ ಪ್ರಧಾನಿಗೆ ಯಾವ ನಿಯಮದ ಅಡಿಯಲ್ಲಿ ಮಾತನಾಡಲು ಅವಕಾಶವಿದೆ ಎಂದು ಕೇಳಿದ್ದಾರೆ.
ಪ್ರಧಾನಿ ಮತ್ತು ಸಚಿವರು ಸದನದಲ್ಲಿ ಹೇಳಿಕೆ ನೀಡಲು ಅನುಮತಿಸುವ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆ ನಿಯಮಗಳ ನಿಯಮ 372 ಅನ್ನು ಈ ವೇಳೆ ಬಿರ್ಲಾ ಉಲ್ಲೇಖಿಸಿದ್ದು, ಆದರೆ ಹೇಳಿಕೆಯ ನಂತರ ಯಾವುದೇ ಪ್ರಶ್ನೆಗಳನ್ನು ಕೇಳಲು ಅವಕಾಶವಿಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಮುಂದುವರೆಸಿದ್ದರಿಂದ ಸದನವನ್ನು ನಂತರ 30 ನಿಮಿಷಗಳ ಕಾಲ ಮುಂದೂಡಲಾಯಿತು.
ಮಹಾ ಕುಂಭ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ಗೌರವ ಸಲ್ಲಿಸಲಿಲ್ಲ ಎಂದು ರಾಹುಲ್ ಹೇಳಿದ್ದಾರೆ. “ಪ್ರಧಾನಿಯವರು ಹೇಳಿದ್ದನ್ನು ನಾನು ಬೆಂಬಲಿಸಲು ಬಯಸಿದ್ದೆ. ಕುಂಭ ನಮ್ಮ ಇತಿಹಾಸ ಮತ್ತು ಸಂಸ್ಕೃತಿ. ಕುಂಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ಸಂತಾಪ ಸೂಚಿಸಲಿಲ್ಲ ಎಂಬುದು ನಮ್ಮ ಏಕೈಕ ದೂರು” ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹೆಚ್‌ಡಿ ಕುಮಾರಸ್ವಾಮಿ ಭೂ ಒತ್ತುವರಿ: ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ
ಹೆಚ್‌ಡಿ ಕುಮಾರಸ್ವಾಮಿ ಭೂ ಒತ್ತುವರಿ: ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ

