ಪ್ಯಾಲೆಸ್ತೀನಿ ಹೋರಾಟಗಾರರ ಗುಂಪು ‘ಹಮಾಸ್’ನ ಪರವಾಗಿದ್ದು ಅದನ್ನು ಪ್ರಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲ್ಪಟ್ಟ ಭಾರತೀಯ ಶಿಕ್ಷಣ ತಜ್ಞ ಬದರ್ ಖಾನ್ ಸೂರಿಯನ್ನು ಗಡೀಪಾರು ಮಾಡದಂತೆ ಅಮೆರಿಕದ ನ್ಯಾಯಾಧೀಶರು ಗುರುವಾರ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಆದೇಶಿಸಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಭಾರತೀಯ ವಿದ್ಯಾರ್ಥಿಯ
ವರ್ಜೀನಿಯಾ ನ್ಯಾಯಾಲಯದ ಪೂರ್ವ ಜಿಲ್ಲೆಯ ನ್ಯಾಯಾಧೀಶೆ ಪೆಟ್ರೀಷಿಯಾ ಟೋಲಿವರ್ ಗೈಲ್ಸ್ ಅವರು “ನ್ಯಾಯಾಲಯವು ವ್ಯತಿರಿಕ್ತ ಆದೇಶವನ್ನು ನೀಡುವವರೆಗೆ” ಸೂರಿಯನ್ನು ಅಮೆರಿಕದಿಂದ ಗಡೀಪಾರು ಮಾಡುವುದನ್ನು ತಡೆಹಿಡಿದು ಆದೇಶ ಹೊರಡಿಸಿದ್ದಾರೆ. ಅಮೆರಿಕ ಅವರನ್ನು ಗಡಿಪಾರು ಮಾಡಲು ಪ್ರಯತ್ನಿಸುತ್ತಿದೆ ಎಂದು ಸೂರಿ ಪರ ವಕೀಲರು ಹೇಳಿದ್ದಾರೆ. ಭಾರತೀಯ ವಿದ್ಯಾರ್ಥಿಯ
ಬದರ್ ಖಾನ್ ಸೂರಿ ಅವರು ಪ್ಯಾಲೆಸ್ತೀನಿ ಹೋರಾಟಗಾರ ಗುಂಪು ಹಮಾಸ್ ಜೊತೆಗಿನ ಸಂಬಂಧ ಹೊಂದಿದ್ದಾರೆ ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆಯು ಆರೋಪಿಸಿತ್ತು. ಜೊತೆಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಮಾಸ್ ಪರ ಪ್ರಚಾರ ಮಾಡುತ್ತಿದ್ದು, ಮತ್ತು ಯಹೂದಿಯರ ವಿರುದ್ಧ ಪ್ರೊಪಗಾಂಡ ಹರಡಿದ್ದಾರೆ ಎಂದು ಅದು ಆರೋಪಿಸಿದೆ.
ಶ್ವೇತಭವನದ ಉಪ ಮುಖ್ಯಸ್ಥ ಸ್ಟೀಫನ್ ಮಿಲ್ಲರ್ ಅವರು ಈ ಬಗ್ಗೆ ಅಲ್ಲಿನ ಬಲಪಂಥೀಯ ಚಾನೆಲ್‌ಗೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದ್ದು, ಅದಾಗ್ಯೂ ಅವರು ಯಾವುದೇ ಪುರಾವೆಗಳನ್ನು ಉಲ್ಲೇಖಿಸಿಲ್ಲ ಎಂದು ವರದಿಯಾಗಿದೆ. ಸೂರಿ ಅವರ ಚಟುವಟಿಕೆಗಳು ಅವರನ್ನು ಗಡೀಪಾರು ಮಾಡಲು ಅರ್ಹರನ್ನಾಗಿ ಮಾಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ನಿರ್ಧರಿಸಿದ್ದಾರೆ ಎಂದು ಅದು ಹೇಳಿದೆ.
ಸೂರಿ ಅವರು ವಿದ್ಯಾರ್ಥಿ ವೀಸಾದ ಮೇಲೆ ಅಮೆರಿಕದಲ್ಲಿ ವಾಸಿಸುತ್ತಿದ್ದು, ಅವರು ಅಮೇರಿಕನ್ ಪ್ರಜೆಯನ್ನು ಮದುವೆಯಾಗಿದ್ದಾರೆ. ಅವರನ್ನು ಲೂಸಿಯಾನದ ಅಲೆಕ್ಸಾಂಡ್ರಿಯಾದಲ್ಲಿ ಬಂಧಿಸಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಅವರು ವಲಸೆ ನ್ಯಾಯಾಲಯದಲ್ಲಿ ನ್ಯಾಯಾಲಯದ ವಿಚಾರಣೆಗಾಗಿ ಕಾಯುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಸೂರಿಯಬನ್ನು ಸೋಮವಾರ ರಾತ್ರಿ ವರ್ಜೀನಿಯಾದ ರೋಸ್ಲಿನ್‌ನಲ್ಲಿರುವ ಅವರ ಮನೆಯ ಹೊರಗೆ ಅಮೆರಿಕದ ತನಿಖಾ ಸಂಸ್ಥೆಯ ಅಧಿಕಾರಿಗಳ ಬಂಧಿಸಿದ್ದರು. ಬಂಧನದ ನಂತರ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೂರಿ ಯಾವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆನ್ನಲಾದರು ಎಂಬುದರ ವಿವರಗಳನ್ನು ಇಲಾಖೆ ಒದಗಿಸಿಲ್ಲ. ಪ್ಯಾಲೆಸ್ತೀನಿ ಹೋರಾಟ ಗುಂಪಾದ ಹಮಾಸ್ ಅನ್ನು ಅಮೆರಿಕ ಸರ್ಕಾರ ‘ಭಯೋತ್ಪಾದಕ ಸಂಘಟನೆ’ ಪಟ್ಟಿಯಲ್ಲಿ ಸೇರಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉಡುಪಿ| ದಲಿತ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ, ಇಬ್ಬರು ಪೊಲೀಸರು ಅಮಾನತು
ಉಡುಪಿ| ದಲಿತ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ, ಇಬ್ಬರು ಪೊಲೀಸರು ಅಮಾನತು

