ನವಿ ಮುಂಬೈ ಮೂಲದ ಉದ್ಯಮಿಯೊಬ್ಬರ ಹೆಸರನ್ನು ಪ್ರಕರಣದಿಂದ ತೆರವುಗೊಳಿಸಲು ಹವಾಲಾ ಆಪರೇಟರ್ಗಳ ಮೂಲಕ 2.5 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ದೆಹಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಉದ್ಯಮಿಯಿಂದ 2.5 ಲಕ್ಷ ಲಂ
ಮುಂಬೈ, ತಮಿಳುನಾಡಿನ ಈರೋಡ್ ಮತ್ತು ದೆಹಲಿಯಲ್ಲಿರುವ “ಹಲವು ಹವಾಲಾ ಆಪರೇಟರ್ಗಳ” ಮೂಲಕ ಉದ್ಯಮಿಯಿಂದ ಬೇಡಿಕೆಯಿಟ್ಟ ಒಟ್ಟು 14 ಲಕ್ಷ ರೂ.ಗಳಲ್ಲಿ 2.5 ಲಕ್ಷ ರೂ.ಗಳ ಕಂತು ಪಡೆದ ಆರೋಪದ ಮೇಲೆ ದೆಹಲಿಯ ರೋಹಿಣಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿರುವ ರಾಹುಲ್ ಮಲಿಕ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ. ಉದ್ಯಮಿ ರಾಹುಲ್ ವಿರುದ್ಧದ ದೂರಿನೊಂದಿಗೆ ಸಿಬಿಐ ಅನ್ನು ಸಂಪರ್ಕಿಸಿದ್ದರು.
CBI arrests accused Sub-Inspector of Delhi Police, Cyber Police Station, Rohini, New Delhi for demanding & accepting bribe of Rs 2.5 lakh as a part payment through layers of multiple hawala operators based in Mumbai, Erode (Tamil Nadu) and Delhi pic.twitter.com/U81soZOJzD
— ANI (@ANI) March 21, 2025
ಉದ್ಯಮಿಯ ವಿರುದ್ಧದ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಆರೋಪಿ ರಾಹುಲ್, ತನಿಖೆಗೆ ಸಹಕರಿಸಿದ ಉದ್ಯಮಿಯ ಸೋದರ ಮಾವನಿಗೆ ನೋಟಿಸ್ ನೀಡಿದ್ದರೆಂದು ಹೇಳಲಾಗಿದೆ. ಅವರು ತನಿಖೆಗೆ ಹಾಜರಾಗಿದ್ದಾಗ, ಅವರನ್ನು ಬಂಧಿಸುವುದಾಗಿ ರಾಹುಲ್ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಮಾರ್ಚ್ 7, 2025 ರಂದು, ಪ್ರಕರಣದ ಆರೋಪಿ ಎಸ್ಐ/ಐಒ (ರಾಹುಲ್) ನವಿ ಮುಂಬೈನಲ್ಲಿರುವ ದೂರುದಾರರ ಮನೆಗೆ ಭೇಟಿ ನೀಡಿ, ತನ್ನ ಮತ್ತು ತನ್ನ ಸೋದರ ಮಾವನ ಹೆಸರನ್ನು ಪ್ರಕರಣದಿಂದ ತೆಗೆದುಹಾಕಲು 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಹಣವನ್ನು ಪಾವತಿ ಮಾಡದಿದ್ದರೆ ಅವರನ್ನು ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮರುದಿನ, ರಾಹುಲ್ ಮುಂಬೈನ ಘೋಡ್ಬಂದರ್ ರಸ್ತೆಯಲ್ಲಿರುವ ಹೋಟೆಲ್ನಲ್ಲಿ ತಮ್ಮನ್ನು ಭೇಟಿಯಾಗಲು ಉದ್ಯಮಿಯನ್ನು ಕೇಳಿಕೊಂಡಿದ್ದರು. ಅಲ್ಲಿ ಅವರು ತಮ್ಮ ಮೊಬೈಲ್ನಲ್ಲಿ 16 ಲಕ್ಷ ರೂ.ಗಳನ್ನು ಟೈಪ್ ಮಾಡುವ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ಪಾವತಿ ಮಾಡದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಉದ್ಯಮಿ ತನ್ನ ವಕೀಲರೊಂದಿಗೆ ರೋಹಿಣಿ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಕೂಡಾ ಬೆದರಿಕೆಗಳು ಮುಂದುವರೆದಿದ್ದವು ಎಂದು ವರದಿಯಾಗಿದೆ. ಮಾತುಕತೆಯ ನಂತರ ರಾಹುಲ್ 14 ಲಕ್ಷ ರೂ.ಗಳ ಲಂಚವನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದವು. ನಂತರ ಅವರು ಮುಂಬೈನಲ್ಲಿರುವ ಹವಾಲಾ ಆಪರೇಟರ್ನ ಸಂಖ್ಯೆಯನ್ನು ಮತ್ತು ಲಂಚವನ್ನು ಪಾವತಿಸಬೇಕಾದ ಹವಾಲಾ ಟೋಕನ್ ಸಂಖ್ಯೆಯ ವಿವರಗಳನ್ನು ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಅದರ ಪ್ರಕಾರ, ಮಾರ್ಚ್ 19, 2025 ರಂದು, ಸಿಬಿಐ ಅವರಿಗೆ ಬಲೆ ಹೆಣೆದಿದ್ದು ಅವರನ್ನು ಯಶಸ್ವಿಯಾಗಿ ಬಂಧಿಸಿತ್ತು. ಈ ವೇಳೆ ಅವರ ಪರವಾಗಿ ಮುಂಬೈ, ಈರೋಡ್ (ತಮಿಳುನಾಡು) ಮತ್ತು ನವದೆಹಲಿಯಲ್ಲಿ ನೆಲೆಗೊಂಡಿರುವ ವಿವಿಧ ಹವಾಲಾ ಆಪರೇಟರ್ಗಳ ಹಂತಗಳ ಮೂಲಕ 2.5 ಲಕ್ಷ ರೂ. ಲಂಚವನ್ನು ಸ್ವೀಕರಿಸಿದ್ದರು” ಎಂದು ಸಿಬಿಐ ಹೇಳಿಕೆ ತಿಳಿಸಿದೆ. ಉದ್ಯಮಿಯಿಂದ 2.5 ಲಕ್ಷ ಲಂ ಉದ್ಯಮಿಯಿಂದ 2.5 ಲಕ್ಷ ಲಂ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿಯ ಇಬ್ಬರು ಎಂಎಲ್ಸಿಗಳಿಗೆ ಕಾಂಗ್ರೆಸ್ ಸೇರುವಂತೆ ಸದನದಲ್ಲೆ ಆಫರ್ ನೀಡಿದ ಡಿ.ಕೆ. ಶಿವಕುಮಾರ್!
ಬಿಜೆಪಿಯ ಇಬ್ಬರು ಎಂಎಲ್ಸಿಗಳಿಗೆ ಕಾಂಗ್ರೆಸ್ ಸೇರುವಂತೆ ಸದನದಲ್ಲೆ ಆಫರ್ ನೀಡಿದ ಡಿ.ಕೆ. ಶಿವಕುಮಾರ್!

