ಒಂದು ವಿಶಿಷ್ಟ ವಿವಾಹ ಸಮಾರಂಭದಲ್ಲಿ ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಒಂದೇ ಮಂಟಪದಲ್ಲಿ ಇಬ್ಬರು ಪ್ರೇಮಿಗಳನ್ನು ವ್ಯಕ್ತಿಯೊಬ್ಬ ಮದುವೆಯಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದಲ್ಲಿ ವಾಸಿಯಾದ ಸೂರ್ಯದೇವ್, ಲಾಲ್ ದೇವಿ ಮತ್ತು ಝಲ್ಕರಿ ದೇವಿ ಎಂಬ ಇಬ್ಬರು ಮಹಿಳೆಯರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದನು ಮತ್ತು ಒಂದೇ ವಿವಾಹ ಸಮಾರಂಭದಲ್ಲಿ ಇಬ್ಬರನ್ನೂ ಮದುವೆಯಾಗಲು ನಿರ್ಧರಿಸಿದ್ದನು ಎಂದು NDTV ವರದಿ ಮಾಡಿದೆ.
ವರನು ಎರಡೂ ವಧುಗಳ ಹೆಸರನ್ನು ಒಂದೇ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಅದ್ಧೂರಿ ಸಮಾರಂಭದಲ್ಲಿ ಮದುವೆಯಾದನು. ಒಬ್ಬರನ್ನೇ ಮದುವೆಯಾಗಿ ದಾಂಪತ್ಯಗಳು ಬಹುಬೇಗನೆ ಮುರಿದುಬೀಳುತ್ತಿರುವ ಕಾಲಘಟ್ಟದಲ್ಲಿ ವ್ಯಕ್ತಿಯೊಬ್ಬ ಇಬ್ಬರನ್ನು ಮದುವೆಯಾಗಿರುವುದು ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Man Marries 2 Women Together In Telangana pic.twitter.com/5vgvNkFdLw
— Indian News Network (@INNChannelNews) March 28, 2025
ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ವಿವಾಹದ ಸಮಯದಲ್ಲಿ ಇಬ್ಬರು ಮಹಿಳೆಯರು ಪುರುಷನ ಕೈ ಹಿಡಿದುಕೊಂಡಿರುವುದು ಕಂಡುಬಂದಿದೆ. ಮೂವರು ತಮ್ಮ ಕುಟುಂಬಗಳು, ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿದರು.
ಸೂರ್ಯದೇವ್ ಅವರು ಝಲ್ಕರಿ ದೇವಿ ಮತ್ತು ಲಾಲ್ ದೇವಿ ಎಂಬಿಬ್ಬರನ್ನು ಪ್ರೀತಿಸಿದ್ದನು ಮತ್ತು ಮೂವರು ಒಟ್ಟಿಗೆ ವಾಸಿಸಲು ನಿರ್ಧರಿಸಿದರು ಎಂದು NDTV ವರದಿ ಮಾಡಿದೆ.
ಆರಂಭದಲ್ಲಿ ಗ್ರಾಮದ ಹಿರಿಯರು ಇದಕ್ಕೆ ಒಪ್ಪಲಿಲ್ಲ. ಆದರೆ ಅಂತಿಮವಾಗಿ ಅವರು ಮದುವೆಗೆ ಒಪ್ಪಿಗೆ ನೀಡಿದರು. ಭಾರತದಲ್ಲಿ ಬಹುಪತ್ನಿತ್ವ ಹಿಂದೂಗಳಿಗೆ ಕಾನೂನುಬಾಹಿರವಾಗಿದೆ.
2021ರಲ್ಲಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಒಬ್ಬ ವ್ಯಕ್ತಿ ಒಂದೇ ‘ಮಂಟಪ’ದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದಾಗ ಇದೇ ರೀತಿಯ ಪ್ರಕರಣ ಸಂಭವಿಸಿತು.
ಮ್ಯಾನ್ಮಾರ್, ಥೈಲ್ಯಾಂಡ್ ಭೂಕಂಪ: 700ಕ್ಕೂ ಅಧಿಕ ಸಾವು, ಸಾವಿರಾರು ಜನರಿಗೆ ಗಾಯ


