ಜಾಮ್‌ನಗರದಿಂದ ದ್ವಾರಕಾಗೆ ಪಾದಯಾತ್ರೆ ನಡೆಸುತ್ತಿರು ಪ್ರಧಾನಿ ಮೋದಿ ಅವರ ಆಪ್ತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ”ಕೋಳಿಗಳ ಜೀವ ರಕ್ಷಣೆ” ಮಾಡಿದ್ದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವ್ಯಂಗಕ್ಕೀಡಾಗಿದ್ದು, ”ಪಿಆರ್ ನಾಟಕ ಮಿತಿಯಲ್ಲಿರಲಿ” ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ಪಿಆರ್ ನಾಟಕ ಮಿತಿಯಲ್ಲಿರಲಿ
ಅನಂತ್ ಅಂಬಾನಿ ಅವರು ಪಾದಯಾತ್ರೆ ಮಾಡುತ್ತಿರುವಾಗ ಅವರ ಬಳಿಯಿಂದ ಕೋಳಿ ಸಾಕಣೆ ವ್ಯಾನ್ ಸಾಗಿದ್ದು, ಈ ವೇಳೆ ಅವರು ತಮ್ಮೊಂದಿಗೆ ನಡೆಯುತ್ತಿದ್ದ ತಮ್ಮ ಸಹಚರರೊಂದಿಗೆ ಕೋಳಿಗಳನ್ನು ಖರೀದಿಸಿ ಅವುಗಳನ್ನು ವಧೆಯಿಂದ ರಕ್ಷಿಸುವಂತೆ ಕೇಳಿಕೊಂಡಿದ್ದಾರೆ. ಇದರ ನಾಟಕೀಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಅವರು ಗುಜರಾತಿ ಭಾಷೆಯಲ್ಲಿ, “ಈ ಕೋಳಿಯನ್ನು ಉಳಿಸಿ. ಅದನ್ನು ಖರೀದಿಸಿ. ಅದರ ಮಾಲೀಕರಿಗೆ ಹಣ ನೀಡಿ” ಎಂದು ಹೇಳಿದ್ದಾರೆ. ಅನಂತ್ ಅಂಬಾನಿ ಕೋಳಿ ರಕ್ಷಣೆ ಮಾಡಿರುವ ನಿಖರವಾದ ಸ್ಥಳ ವರದಿಯಾಗಿಲ್ಲದಿದ್ದರೂ, ಗುಜರಾತ್‌ನ ರಸ್ತೆಗಳಲ್ಲಿ ಅವರು ಇತ್ತೀಚೆಗೆ ನಡೆಯುತ್ತಿದ್ದಾಗ ಘಟನೆ ನಡೆದಿದೆ ಎಂದು ದ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.
ಅದಾಗ್ಯೂ, ಹಲವು ಎಕ್ಸ್ ಬಳಕೆದಾರರು ಇದನ್ನು ಪಿಆರ್ (ಪ್ರಚಾರ) ಸ್ಟಂಟ್ ಎಂದು ಬಣ್ಣಿಸಿದ್ದು, ಅವರಿಗೆ ಅದನ್ನು ಮಿತಿಯಲ್ಲಿ ಮಾಡಲು ಸಲಹೆ ನೀಡಿದ್ದಾರೆ. ಜೊತೆಗೆ ಅನಂತ್ ಅಂಬಾನಿ ನಡೆಸುತ್ತಿರುವ ‘ವನತಾರಾ’ ಮೃಗಾಲಯದಲ್ಲಿರುವ ಸಿಂಹ ಮತ್ತು ಹುಲಿಗಳಿಗೆ ದನಗಳ ಮಾಂಸವನ್ನು ನೀಡುವುದನ್ನು ನೆನಪಿಸಿಕೊಂಡಿದ್ದಾರೆ.
ಎಕ್ಸ್ ಬಳಕೆದಾರರಾದ ರೋಶನ್ ರೈ ಅವರು, “ಇವರು ಮುಖೇಶ್ ಅಂಬಾನಿಯವರ ಮಗ ಅನಂತ್ ಅಂಬಾನಿ. ಜಾಮ್‌ನಗರದಿಂದ ದ್ವಾರಕೆಗೆ ಪಾದಯಾತ್ರೆ ಮಾಡುವಾಗ, ಕೋಳಿ ತುಂಬಿದ ಟ್ರಕ್ ಸಾಗಿಸುವುದನ್ನು ಅವರು ನೋಡಿದರು. ಅವರ ಹೃದಯ ಕರಗಿತು. ಅವರು ತಕ್ಷಣವೆ ಟ್ರಕ್ ಅನ್ನು ನಿಲ್ಲಿಸಿ ಕೋಳಿಗಳನ್ನು ವಧೆಯಿಂದ ರಕ್ಷಿಸಲು ಎರಡು ಪಟ್ಟು ಬೆಲೆಗೆ ಇಡೀ ಟ್ರಕ್ ಲೋಡ್ ಅನ್ನು ಖರೀದಿಸಿದ್ದಾರೆ.
ವನತಾರಾವನ್ನು ನಡೆಸುವ ಮತ್ತು ಅದರಲ್ಲಿ ಹುಲಿಗಳು ಮತ್ತು ಸಿಂಹಗಳನ್ನು ಹೊಂದಿರುವ ಅದೇ ವ್ಯಕ್ತಿ ಇವರಾಗಿದ್ದಾರೆ. ಅಲ್ಲಿನ ಸಿಂಹಗಳು ಮತ್ತು ಹುಲಿಗಳಿಗೆ ಆಹಾರಕ್ಕಾಗಿ ಪ್ರತಿದಿನ ಗೋಮಾಂಸ ಸೇರಿದಂತೆ ಟನ್‌ಗಳಷ್ಟು ಮಾಂಸವನ್ನು ವನತಾರಾಕ್ಕೆ ಸಾಗಿಸಲಾಗುತ್ತದೆ. ಪಿಆರ್ ನಾಟಕ ಮಿತಿಯಲ್ಲಿರಲಿ.” ಎಂದು ಅವರು ವ್ಯಂಗ್ಯವಾಡಿದ್ದಾರೆ.
This is Anant Ambani, Son of Mukesh Ambani.
During his Padyatra from Jamnagar to Dwarka, he saw a truck full of chicken being transported, his heart melted, he quickly stopped the truck and bought the whole truck load of chickens for double the price to rescue them from being… pic.twitter.com/r30JZuQtiY
— Roshan Rai (@RoshanKrRaii) April 1, 2025
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!
ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

