ವಿರೋಧ ಪಕ್ಷವಾದ ಇಂಡಿಯಾ ಮೈತ್ರಿ ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಲು ಮತ್ತು ಮಸೂದೆ ಅಂಗೀಕಾರದ ಸಮಯದಲ್ಲಿ ಮತಕ್ಕೆ ಹಾಕುವಂತೆ ಕೋರಲು ಸರ್ವಾನುಮತದಿಂದ ನಿರ್ಧರಿಸಿದೆ. ಮಂಗಳವಾರ ಸಂಜೆ ನಡೆದ ಈ ಸಭೆಯಲ್ಲಿ ಎಲ್ಲಾ ವಿರೋಧ ಪಕ್ಷಗಳು ಭಾಗವಹಿಸಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ಉಲ್ಲೇಖಿಸಿದೆ. ಲೋಕಸಭೆಯಲ್ಲಿ
ಈ ಬಗ್ಗೆ ಮಾತನಾಡಿದ ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, ಎಲ್ಲಾ ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಮತ ಚಲಾಯಿಸುತ್ತವೆ, ಜೊತೆಗೆ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿ ಮತ್ತು ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ (ಬಿಜೆಡಿ) ನಂತಹ ಪಕ್ಷಗಳೊಂದಿಗೆ ಸಮನ್ವಯ ಸಾಧಿಸಲಿದ್ದೇವೆ ಎಂದು ಹೇಳಿದ್ದಾರೆ. ಚರ್ಚೆಯ ಸಮಯದಲ್ಲಿ ವಿರೋಧಿಸಬೇಕಾದ ಮಸೂದೆಯ ಕೆಲವು ಷರತ್ತುಗಳ ಕುರಿತು ಪಕ್ಷಗಳ ಸದನದ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
“ಈ ಸಾಂವಿಧಾನಿಕ ವಿರೋಧಿ ಮಸೂದೆಯನ್ನು ವಿರೋಧಿಸುವಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿವೆ. ನಾವು ಇದನ್ನು ‘ಮುಸ್ಲಿಂ’ ವಿಷಯವೆಂದು ಪರಿಗಣಿಸುತ್ತಿಲ್ಲ. ಇದು ಜಾತ್ಯತೀತ ತತ್ವಗಳನ್ನು ದುರ್ಬಲಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಸಿಪಿಎಂ ತನ್ನ ಸದಸ್ಯರಿಗೆ ಸದನದಲ್ಲಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ. ಸಿಪಿಐ ಸಂಸದ ಸಂದೋಷ್ ಕುಮಾರ್ ಮಾತನಾಡಿ, ಸಭೆಯಲ್ಲಿ 36 ಸಂಸದರು ಭಾಗವಹಿಸಿದ್ದರು ಮತ್ತು ಎಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಿದರು ಎಂದು ಹೇಳಿದ್ದಾರೆ.
“ಸಂಖ್ಯೆಗಳು ಆಡಳಿತ ಪಕ್ಷದ ಪರವಾಗಿವೆ ಎಂದು ನಮಗೆ ತಿಳಿದಿದೆ. ಆದರೆ ನಾವು ಹೋರಾಡಲು ನಿರ್ಧರಿಸಿದ್ದೇವೆ ಮತ್ತು ಚರ್ಚೆಯಲ್ಲಿ ಭಾಗವಹಿಸುತ್ತೇವೆ, ಜೊತೆಗೆ ನಮ್ಮ ಆಕ್ಷೇಪಣೆಗಳನ್ನು ಇಡುತ್ತೇವೆ. ಯಾವುದೇ ವಾಕ್ಔಟ್ ಅಥವಾ ಅಡಚಣೆ ಇರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್, “ನಾವು ನಾಳೆ ಒಗ್ಗಟ್ಟಿನಿಂದ ನಿಂತು ಚರ್ಚೆಗಳಲ್ಲಿ ಭಾಗವಹಿಸುತ್ತೇವೆ. ವಿರೋಧ ಪಕ್ಷಗಳಿಂದ ಬರುವ ತಿದ್ದುಪಡಿಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಮತದಾನಕ್ಕೆ ಕರೆ ನೀಡುತ್ತೇವೆ.” ಎಂದು ಹೇಳಿದ್ದಾರೆ.
ಅದೇ ಅಭಿಪ್ರಾಯವನ್ನು ಪ್ರತಿಧ್ವನಿಸಿದ ಐಯುಎಂಎಲ್ ಸಂಸದ ಇಟಿ ಮುಹಮ್ಮದ್ ಬಶೀರ್ ಅವರು ಎಲ್ಲಾ ಪಕ್ಷಗಳು ಸಂಪೂರ್ಣ ಹೋರಾಟ ನಡೆಸುತ್ತವೆ ಎಂದು ಹೇಳಿದ್ದಾರೆ. “ಇಂಡಿಯಾ ಮೈತ್ರಿ ಪಕ್ಷಗಳು ಈ ಬಗ್ಗೆ ಚರ್ಚೆ ನಡೆಸಿದ್ದು, ಅದು ಚೆನ್ನಾಗಿ ನಡೆಯಿತು. ನಾವು ಒಂದೇ ದೇಹ ಮತ್ತು ಒಂದೇ ಆತ್ಮವಾಗಿ ಹೋರಾಡಲು ಸ್ಪಷ್ಟವಾಗಿ ನಿರ್ಧರಿಸಿದ್ದೇವೆ. ನಾವು ಎಲ್ಲಾ ರೀತಿಯಿಂದಲೂ ಒಗ್ಗಟ್ಟಾಗಿದ್ದೇವೆ ಮತ್ತು ಬಹಳಷ್ಟು ಅನ್ಯಾಯ ನಡೆದಿರುವುದರಿಂದ ನಾವು ಇದರ ವಿರುದ್ಧ ತೀವ್ರವಾಗಿ ಹೋರಾಡುತ್ತೇವೆ ಮತ್ತು ಚರ್ಚೆಯಲ್ಲಿ ಭಾಗವಹಿಸುತ್ತೇವೆ.” ಎಂದು ಹೇಳಿದ್ದಾರೆ.
ಬಿಜೆಪಿ ವಿಭಜಕ ರಾಜಕೀಯವನ್ನು ಆಡುತ್ತಿದೆ ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದ್ದು, “ಆದ್ದರಿಂದ ಅವರು ಯಾರ ವಿರುದ್ಧ ಇದ್ದಾರೆಂದು ನಮಗೆ ತಿಳಿದಿದೆ. ನಾವು ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದೇವೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಈ ಮಸೂದೆಗಾಗಿ ಜೆಪಿಸಿ ರಚಿಸಲಾಯಿತು; ಆಗ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಇದ್ದವು ಮತ್ತು ಈಗಲೂ ಅದು ಒಗ್ಗಟ್ಟಿನಿಂದ ಇದೆ. ಮಸೂದೆಯ ನಿಬಂಧನೆಗಳು ದೇಶವನ್ನು ವಿಭಜಿಸುತ್ತವೆ. ಅವರು ಮಸೂದೆಯನ್ನು ಮಂಡಿಸಲಿ. ಅವರು ನಮ್ಮ ಸಲಹೆಗಳನ್ನು ಸೇರಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂದು ನಾವು ನೋಡುತ್ತೇವೆ. ನಾವು ನಾಳೆ ಚರ್ಚೆಗಳನ್ನು ನಡೆಸುತ್ತೇವೆ” ಎಂದು ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ.
ಲೋಕಸಭೆಯು ಬುಧವಾರ ವಿವಾದಾತ್ಮಕ ವಕ್ಫ್ ಮಸೂದೆಯನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಿದೆ. ರಾಜ್ಯಸಭೆಯು ಗುರುವಾರ ಅದನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಪ್ರಸ್ತಾವಿತ ಕಾನೂನಿನ ಚರ್ಚೆಗೆ ಎರಡೂ ಸದನಗಳಿಗೆ ತಲಾ ಎಂಟು ಗಂಟೆಗಳ ಸಮಯವನ್ನು ನಿಗದಿಪಡಿಸಲಾಗಿದೆ. ಲೋಕಸಭೆಯಲ್ಲಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಪಿಆರ್ ನಾಟಕ ಮಿತಿಯಲ್ಲಿರಲಿ’ | ಕೋಳಿಗಳನ್ನು ರಕ್ಷಿಸಿದ ಅನಂತ್ ಅಂಬಾನಿಗೆ ನೆಟ್ಟಿಗರಿಂದ ಪಾಠ!
‘ಪಿಆರ್ ನಾಟಕ ಮಿತಿಯಲ್ಲಿರಲಿ’ | ಕೋಳಿಗಳನ್ನು ರಕ್ಷಿಸಿದ ಅನಂತ್ ಅಂಬಾನಿಗೆ ನೆಟ್ಟಿಗರಿಂದ ಪಾಠ!

