ಹದಿನೈದು ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ಎರಡು ವರ್ಷದ ಬಾಲಕಿ ಹಕ್ಕಿ ಜ್ವರಕ್ಕೆ ಬಲಿಯಾಗಿದ್ದಾಳೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ‘ಹಿಂದೂಸ್ಥಾನ್ ಟೈಮ್ಸ್’ ವರದಿ ಮಾಡಿದೆ.
ಮಾರ್ಚ್ 16 ರಂದು ಶಿಶು ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ; ಪುಣೆ ಮೂಲದ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಮಾರ್ಚ್ 24 ರಂದು ಆಕೆಯ ಮಾದರಿಯನ್ನು ಪರೀಕ್ಷಿಸಿದ ನಂತರ, ಬಾಲಕಿಗೆ ಹಕ್ಕಿ ಜ್ವರ ಬಂದಿದೆ ಎಂದು ದೃಢಪಡಿಸಿದೆ. ದೆಹಲಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮಾದರಿಗಳ ಪರೀಕ್ಷೆಯಿಂದ ಹಕ್ಕಿ ಜ್ವರವನ್ನು ದೃಢಪಡಿಸಿದೆ ಎಂದು ಅಧಿಕಾರಿ ಹೇಳಿದರು.
“ಏಮ್ಸ್-ಮಂಗಳಗಿರಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಬಾಲಕಿ ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದಾಳೆ” ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೂ, ಮಗುವಿನ ಕುಟುಂಬ ಸದಸ್ಯರಿಗೆ ಹಕ್ಕಿ ಜ್ವರ ಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿದಾಗ, ಫೆಬ್ರವರಿ 26 ರಂದು ಬಾಲಕಿ ಹಸಿ ಕೋಳಿಯ ಸಣ್ಣ ತುಂಡನ್ನು ತಿಂದಿದ್ದಾಳೆ ಎಂದು ದೃಢೀಕರಣ ಸಿಕ್ಕಿದೆ. ಇದು ರೋಗ ಹರಡಲು ಸಂಭವನೀಯ ಕಾರಣ ಎನ್ನಲಾಗಿದೆ. ಕುಟುಂಬ ಸದಸ್ಯರು ಹೇಳುವಂತೆ, ಹುಡುಗಿ ಒಂದು ಅಥವಾ ಎರಡು ತುಂಡು ಹಸಿ ಕೋಳಿ ಮಾಂಸವನ್ನು ತಿನ್ನುತ್ತಿದ್ದಳು. ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಆಕೆ ಒಂದು ತುಂಡು ಸೇವಿಸಿದ್ದಳು.
ಫೆಬ್ರವರಿ 28 ರಂದು ಅವಳಿಗೆ ಜ್ವರ ಮತ್ತು ಇತರ ಲಕ್ಷಣಗಳು ಕಾಣಿಸಿಕೊಂಡವು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಮಾರ್ಚ್ 4 ರಂದು, ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಅತಿಸಾರದ ಲಕ್ಷಣಗಳು ಕಾಣಿಸಿಕೊಂಡ ನಂತರ ಅವಳನ್ನು ಏಮ್ಸ್- ಮಂಗಳಗಿರಿಗೆ ದಾಖಲಿಸಲಾಯಿತು.
ಪಲ್ನಾಡು ಜಿಲ್ಲೆಯ ನರಸಾಪೇಟ್ ಪಟ್ಟಣದ ಬಲಿಯಾ ನಗರದಲ್ಲಿ ಹುಡುಗಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು; ತಂದೆ ಬ್ಯಾಂಕ್ ರಿಕವರಿ ಏಜೆಂಟ್ ಮತ್ತು ತಾಯಿ ಗೃಹಿಣಿಯಾಗಿದ್ದಾರೆ. ಕುಟುಂಬದ ಎಲ್ಲ ಸದಸ್ಯರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವರ ದೇಃದಲ್ಲಿ ಪಕ್ಷಿ ನೆಗೆಟಿವ್ ವರದಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಟಿ. ದಾಮೋದರ್ ನಾಯ್ಡು, ಪಲ್ನಾಡು ಮತ್ತು ನೆರೆಯ ಜಿಲ್ಲೆಗಳಿಂದ ಯಾವುದೇ ಹಕ್ಕಿ ಜ್ವರದ ಪ್ರಕರಣ ವರದಿಯಾಗಿಲ್ಲ ಎಂದು ಹೇಳಿದರು. “ನಾವು ಈ ಪ್ರದೇಶದ ಎಲ್ಲ ಕೋಳಿ ಸಾಕಣೆ ಕೇಂದ್ರಗಳ ಭೌತಿಕ ಕಣ್ಗಾವಲು ನಡೆಸಿದ್ದೇವೆ. ಕೋಳಿಗಳಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ” ಎಂದು ಅವರು ಹೇಳಿದರು.
“ಹಸಿ ಕೋಳಿ ಮಾಂಸವನ್ನು ತಿಂದ ನಂತರ ಹುಡುಗಿಗೆ ಹಕ್ಕಿ ಜ್ವರ ಬಂದಿರಬಹುದು. ಆದರೆ, ಕುಟುಂಬವು ಬೇಯಿಸಿದ ಕೋಳಿ ಮಾಂಸವನ್ನು ಸೇವಿಸಿತ್ತು” ಎಂದು ಡಾ. ನಾಯ್ಡು ಹೇಳಿದರು. “60-70 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಹಕ್ಕಿ ಜ್ವರ ವೈರಸ್ ಬದುಕುಳಿಯುವುದಿಲ್ಲವಾದ್ದರಿಂದ, ಚೆನ್ನಾಗಿ ಬೇಯಿಸಿದ ನಂತರ ಕೋಳಿ ಮತ್ತು ಮೊಟ್ಟೆಯನ್ನು ಸೇವಿಸಲು ನಾವು ಜನರಿಗೆ ಸಲಹೆ ನೀಡುತ್ತೇವೆ” ಎಂದು ಅವರು ಹೇಳಿದರು.
ಜನರ ಹಿತದೃಷ್ಟಿಯಿಂದ ಮಾತುಕತೆಗೆ ಸಿದ್ದ: ಸಿಪಿಎಂ (ಮಾವೋವಾದಿ) ಕೇಂದ್ರ ಸಮಿತಿ


