Homeಮುಖಪುಟಅಯೋಧ್ಯೆ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಇಲ್ಲ: ಸುನ್ನಿ ವಕ್ಫ್‌ ಬೋರ್ಡ್‌ ಸ್ಪಷ್ಟನೆ

ಅಯೋಧ್ಯೆ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಇಲ್ಲ: ಸುನ್ನಿ ವಕ್ಫ್‌ ಬೋರ್ಡ್‌ ಸ್ಪಷ್ಟನೆ

- Advertisement -
- Advertisement -

ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ದ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದಿರಲು ಕೇಂದ್ರ ಸುನ್ನಿ ವಕ್ಫ್‌ ಬೋರ್ಡ್ ತೀರ್ಮಾನಿಸಿದೆ. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಪರ್ಯಾಯ 5 ಎಕರೆ ಭೂಮಿ ನೀಡುವುದನ್ನು ಒಪ್ಪುವ ಸಂಬಂಧ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಂಡಳಿ ಅಧ್ಯಕ್ಷ ಜುಕಾರ್ ಫಾರೂಕಿ ಹೇಳಿದ್ದಾರೆ.

ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಂಡಿರುವ ವಕ್ಫ್ ಬೋರ್ಡ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಪುನರುಚ್ಛರಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿ ವರದಿ ಮಾಡಿರುವ ದಿ ವೈರ್.ಕಾಮ್ ಲಕ್ನೋದಲ್ಲಿ ನಡೆದ ವಕ್ಫ್‌ ಬೋರ್ಡ್ ಸಭೆಯಲ್ಲಿ ಒಟ್ಟು ಏಳು ಮಂದಿ ಭಾಗವಹಿಸಿದ್ದರು ಎಂದು ಹೇಳಿದೆ.

ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ಅಬ್ದುಲ್ ರಜಾಕ್ ಖಾನ್ ಅಧ್ಯಕ್ಷರು ತೆಗೆದುಕೊಂಡಿರುವ ತೀರ್ಮಾನವನ್ನು ವಿರೋಧಿಸಿದ್ದಾರೆ. ಬಾಬ್ರಿ ಮಸೀದಿ ಜಾಗಕ್ಕೆ ಪರ್ಯಾಯವಾಗಿ 5 ಎಕರೆ ನೀಡುವಂತೆ ಆದೇಶಿರುವುದನ್ನು ಒಪ್ಪಿ ಕೊಳ್ಳಬೇಕೇ ಅಥವಾ ಒಪ್ಪಿಕೊಳ್ಳಬಾರದೇ ಎಂಬ ಬಗ್ಗೆ ಯಾವುದೇ ತೀರ್ಮಾವನ್ನು ಪ್ರಕಟಿಸಿಲ್ಲ.

ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸುವಂತೆ ಸಭೆಯಲ್ಲಿ ಕೋರಿದಾಗ ಆರು ಮಂದಿ ಸದಸ್ಯರು ತಮ್ಮ ಅಭಿಪ್ರಾಯ ಹೇಳಲು ಸಮಯವಕಾಶ ಕೊಡಬೇಕು. ಒಂದೊಮ್ಮೆ ನಿರ್ಧಾರ ಕೈಗೊಂಡರೆ ಅದನ್ನು ಪ್ರತ್ಯೇಕವಾಗಿ ತಿಳಿಸುತ್ತೇವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ದಿ ವೈರ್ ತಿಳಿಸಿದೆ.

ಇದನ್ನೂ ಓದಿ: ಅಯೋಧ್ಯೆ ಪ್ರಕರಣ:ಸುಪ್ರೀಂ ತೀರ್ಪಿನ ವಿರುದ್ದ ಪುನರ್ ಪರಿಶೀಲನ ಅರ್ಜಿ ಸಲ್ಲಿಸಲು ನಿರ್ಧಾರ

ಆದರೆ ಅಖಿಲ ಭಾರತ ಮುಸ್ಲೀಂ ವೈಯಕ್ತಿಕ ಕಾನೂನು ಮಂಡಳಿ, ಸುಪ್ರೀಂಕೋರ್ಟ್ ತೀರ್ಪು ವಿರುದ್ದ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿದೆ. ಬಾಬ್ರಿ ಮಸೀದಿಗೆ ನೀಡಲಾಗುವ ಪರ್ಯಾಯ 5 ಎಕರೆ ಭೂಮಿಯನ್ನು ಒಪ್ಪಿಕೊಳ್ಳದಿರಲು ಅದು ನಿರ್ಧರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...