Homeಅಂತರಾಷ್ಟ್ರೀಯಟ್ರಂಪ್‌ ವಿರುದ್ಧ ಅಮೆರಿಕನ್ನರಿಂದ 'ಹ್ಯಾಂಡ್ಸ್ ಆಫ್' ಚಳವಳಿ; ನ್ಯೂಯಾರ್ಕ್‌ನಿಂದ ಅಲಾಸ್ಕಾವರೆಗೆ ಪ್ರತಿಭಟನಾ ರ್‍ಯಾಲಿ

ಟ್ರಂಪ್‌ ವಿರುದ್ಧ ಅಮೆರಿಕನ್ನರಿಂದ ‘ಹ್ಯಾಂಡ್ಸ್ ಆಫ್’ ಚಳವಳಿ; ನ್ಯೂಯಾರ್ಕ್‌ನಿಂದ ಅಲಾಸ್ಕಾವರೆಗೆ ಪ್ರತಿಭಟನಾ ರ್‍ಯಾಲಿ

- Advertisement -
- Advertisement -

ಅಮೆರಿಕದ ಹಲವಾರು ನಗರಗಳಲ್ಲಿ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ವಿರುದ್ಧ ಆಕ್ರೋಶಗೊಂಡ ಪ್ರತಿಭಟನಾಕಾರರು ರ್‍ಯಾಲಿ ನಡೆಸಿದರು.

ಟ್ರಂಪ್ ದೇಶವನ್ನು ನಡೆಸುತ್ತಿರುವ ರೀತಿ ವಿರೋಧಿಸಿ ಜನರು ಗುಂಪುಗೂಡಿದ್ದಾರೆ. ‘ಹ್ಯಾಂಡ್ಸ್ ಆಫ್’ ಚಳವಳಿಯನ್ನು ಅಮೆರಿಕದ 50 ರಾಜ್ಯಗಳಲ್ಲಿ 1,200 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಾಗರಿಕ ಹಕ್ಕುಗಳ ಸಂಘಟನೆಗಳು, ಕಾರ್ಮಿಕ ಸಂಘಗಳು, ಎಲ್‌ಜಿಬಿಟಿಕ್ಯೂ+, ವಕೀಲರು, ಚುನಾವಣಾ ಕಾರ್ಯಕರ್ತರು ಸೇರಿದಂತೆ 150 ಕ್ಕೂ ಹೆಚ್ಚು ಗುಂಪುಗಳು ಆಯೋಜಿಸಿದ್ದವು. ಇಲ್ಲಿಯವರೆಗೆ ಯಾವುದೇ ಬಂಧನಗಳ ವರದಿಗಳಿಲ್ಲದೆ ರ್‍ಯಾಲಿಗಳು ಶಾಂತಿಯುತವಾಗಿ ನಡೆಯುತ್ತಿವೆ.

ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಿಂದ ಅಲಾಸ್ಕಾದ ಆಂಕಾರೇಜ್‌ವರೆಗೆ ಪ್ರತಿಭಟನಾಕಾರರು ಜಮಾಯಿಸಿದರು. ಸರ್ಕಾರದ ಉದ್ಯೋಗ ಕಡಿತ, ಆರ್ಥಿಕತೆ, ವಲಸೆ ಮತ್ತು ಮಾನವ ಹಕ್ಕುಗಳ ಕುರಿತು ಟ್ರಂಪ್ ಮತ್ತು ಬಿಲಿಯನೇರ್ ಎಲಾನ್ ಮಸ್ಕ್ ಅವರ ಕ್ರಮಗಳನ್ನು ಟೀಕಿಸುತ್ತಾ ಅನೇಕ ರಾಜ್ಯ ರಾಜಧಾನಿಗಳಲ್ಲಿ ಸೇರಿದಂತೆ ಪ್ರತಿಭಟನಾಕಾರರು ಜಮಾಯಿಸಿದರು.

ಪ್ರತಿಭಟನಾಕಾರರಲ್ಲಿ ಒಬ್ಬರಾದ, ಓಹಿಯೋದ ಡೆಲವೇರ್ ಕೌಂಟಿಯಿಂದ ನಿವೃತ್ತರಾದ 66 ವರ್ಷದ ರೋಜರ್ ಬ್ರೂಮ್, “ತಾವು ರೇಗನ್ ರಿಪಬ್ಲಿಕನ್ ಆಗಿದ್ದೆ. ಆದರೆ, ಟ್ರಂಪ್ ಅವರಿಂದ ದೂರವಾಗಿದ್ದೇನೆ” ಎಂದು ಹೇಳಿದರು. “ಅವರು (ಟ್ರಂಪ್) ಈ ದೇಶವನ್ನು ಹರಿದು ಹಾಕುತ್ತಿದ್ದಾರೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇದು ಕುಂದುಕೊರತೆಗಳ ಆಡಳಿತ

ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ, ಪ್ರತಿಭಟನಾಕಾರರು “ಒಲಿಗಾರ್ಕಿ ವಿರುದ್ಧ ಹೋರಾಡಿ” ಎಂಬ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದರು. ಪೋರ್ಟ್ಲ್ಯಾಂಡ್, ಒರೆಗಾನ್ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಅಮೆರಿಕದ ನಗರಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು, ಅಲ್ಲಿ ಅವರು ಪರ್ಶಿಂಗ್ ಸ್ಕ್ವೇರ್‌ನಿಂದ ಸಿಟಿ ಹಾಲ್‌ಗೆ ಮೆರವಣಿಗೆ ನಡೆಸಿದರು.

ಫೆಡರಲ್ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವುದು, ಸಂಪೂರ್ಣ ಏಜೆನ್ಸಿಗಳನ್ನು ಮುಚ್ಚುವುದು, ಟ್ರಾನ್ಸ್‌ಜೆಂಡರ್ ಜನರಿಗೆ ರಕ್ಷಣೆಯನ್ನು ಕಡಿಮೆ ಮಾಡುವುದು, ಆರೋಗ್ಯ ನಿಧಿಯನ್ನು ಕಡಿತಗೊಳಿಸುವುದು, ಸಾಮಾಜಿಕ ಭದ್ರತಾ ಆಡಳಿತ ಕ್ಷೇತ್ರ ಕಚೇರಿಗಳನ್ನು ಮುಚ್ಚುವುದು ಸೇರಿದಂತೆ ಟ್ರಂಪ್ ಆಡಳಿತದ ನಿರ್ಧಾರವನ್ನು ವಿರೋಧಿಸುವುದು ಪ್ರತಿಭಟನೆಗಳ ಮುಖ್ಯ ಗುರಿಯಾಗಿತ್ತು.

ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಶ್ವೇತಭವನವು, “ಅಧ್ಯಕ್ಷ ಟ್ರಂಪ್ ಅವರ ನಿಲುವು ಸ್ಪಷ್ಟವಾಗಿದೆ; ಅವರು ಯಾವಾಗಲೂ ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ, ಮೆಡಿಕೇರ್ ಮತ್ತು ಮೆಡಿಕೈಡ್ ಅನ್ನು ರಕ್ಷಿಸುತ್ತಾರೆ” ಎಂದು ಹೇಳಿದೆ.

“ಈ ಮಧ್ಯೆ, ಡೆಮೋಕ್ರಾಟ್‌ಗಳ ನಿಲುವು ಅಕ್ರಮ ವಲಸಿಗರಿಗೆ ಸಾಮಾಜಿಕ ಭದ್ರತೆ, ಮೆಡಿಕೈಡ್ ಮತ್ತು ಮೆಡಿಕೇರ್ ಪ್ರಯೋಜನಗಳನ್ನು ನೀಡುತ್ತಿದೆ, ಇದು ಈ ಕಾರ್ಯಕ್ರಮಗಳನ್ನು ದಿವಾಳಿ ಮಾಡುತ್ತದೆ ಮತ್ತು ಅಮೇರಿಕನ್ ಹಿರಿಯ ನಾಗರಿಕರನ್ನು ಹತ್ತಿಕ್ಕುತ್ತದೆ” ಎಂದು ಹೇಳಿಕೆ ನೀಡುತ್ತಾ ಡೆಮೋಕ್ರಾಟ್‌ಗಳನ್ನು ನೇರವಾಗಿ ಟೀಕಿಸಲಾಗಿದೆ.

ಈ ಎಲ್ಲ ಪ್ರತಿಭಟನೆಗಳ ನಡುವೆ ಅಧ್ಯಕ್ಷರು ಟ್ರಂಪ್ ಶನಿವಾರ ಫ್ಲೋರಿಡಾದಲ್ಲಿ ಗಾಲ್ಫ್ ಆಡಿದರು. ಭಾನುವಾರ ಕೂಡ ಮತ್ತೆ ಹಾಗೇ ಮಾಡಲು ಯೋಜಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.

ಮೊದಲ ಅವಧಿಯಲ್ಲಿ, ಟ್ರಂಪ್ 2017 ರಲ್ಲಿ ಮಹಿಳಾ ಮಾರ್ಚ್‌ನೊಂದಿಗೆ ದೇಶಾದ್ಯಂತ ಪ್ರತಿಭಟನೆಗಳನ್ನು ಎದುರಿಸಿದರು. ಇದು ಸಾವಿರಾರು ಮಹಿಳೆಯರನ್ನು ವಾಷಿಂಗ್ಟನ್‌ಗೆ ಕರೆತಂದಿತು. 2020 ರಲ್ಲಿ ಮಿನ್ನಿಯಾಪೋಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಅವರನ್ನು ಪೊಲೀಸರು ಕೊಂದ ನಂತರ ನಡೆದ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರದರ್ಶನಗಳು ಸಹ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಎದುರಿಸಿದ ಪ್ರಮುಖ ವಿರೋಧಗಳಲ್ಲಿ ಸೇರಿವೆ.

ಭಾರತದ ಉತ್ಪನ್ನಗಳ ಮೇಲೆ ಶೇ. 26ರಷ್ಟು ಪ್ರತಿ ಸುಂಕ ವಿಧಿಸಿದ ಟ್ರಂಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...