ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ‘ಪಲಾಯನ್ ರೋಕೋ, ನೌಕ್ರಿ ದೋ’ (ವಲಸೆ ನಿಲ್ಲಿಸಿ, ಉದ್ಯೋಗ ನೀಡಿ) ಪಾದಯಾತ್ರೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಸೇರಿಕೊಂಡಿದ್ದಾರೆ. ಎನ್‌ಎಸ್‌ಯುಐ ರಾಷ್ಟ್ರೀಯ ಉಸ್ತುವಾರಿ ಕನ್ಹಯ್ಯಾ ಕುಮಾರ್ ನೇತೃತ್ವದಲ್ಲಿ ಈ ಯಾತ್ರೆ ಆರಂಭವಾಗಿದೆ. ಬಿಹಾರ
ಬೇಗುಸರಾಯ್ ಪಟ್ಟಣದಲ್ಲಿ ನಡೆದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಕನ್ಹಯ್ಯಾ ಕುಮಾರ್ ಮತ್ತು ಬಿಹಾರ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಜೇಶ್ ಕುಮಾರ್ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮತ್ತು ಅದರ ವಿದ್ಯಾರ್ಥಿ ಮತ್ತು ಯುವ ಘಟಕಗಳ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ರಕ್ಷಣಾ ಪಡೆಗಳಲ್ಲಿನ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಒತ್ತಾಯಿಸಿದ್ದಾರೆ. ಬಿಹಾರ
नेता विपक्ष श्री @RahulGandhi ने आज 'पलायन रोको, नौकरी दो यात्रा' में कदमताल कर यात्रा के संदेश को मजबूती के साथ बुलंद किया।
बिहार के युवाओं को पलायन नहीं, उन्हें खुद के प्रदेश में रोजगार मिले- ये हमारी यात्रा का लक्ष्य है।
ये यात्रा बिहार के संघर्ष की आवाज और उम्मीद है। हम… pic.twitter.com/Goc7x5qzQi
— Congress (@INCIndia) April 7, 2025
ಪಾಟ್ನಾದಿಂದ ಬೇಗುಸರಾಯ್‌ಗೆ ಪಾದಯಾತ್ರೆಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಜಯ ಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜೇಶ್ ಕುಮಾರ್ ಮತ್ತು ಇತರ ಹಿರಿಯ ಪಕ್ಷದ ನಾಯಕರು ಬರಮಾಡಿಕೊಂಡರು.
ಚುನಾವಣೆ ನಡೆಯಲಿರುವ ಬಿಹಾರಕ್ಕೆ ಈ ವರ್ಷದ ಜನವರಿಯಿಂದ ರಾಹುಲ್ ಗಾಂಧಿ ಅವರ ಮೂರನೇ ಭೇಟಿ ಇದಾಗಿದೆ. ಬೇಗುಸರಾಯ್ ಕನ್ಹಯ್ಯಾ ಅವರ ತವರು ಜಿಲ್ಲೆಯಾಗಿದ್ದು, ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೇಗುಸರಾಯ್ ಜಿಲ್ಲೆಯ ವಿಧಾನಸಭಾ ಯಾವುದಾದರೂ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.
ಪಾದಯಾತ್ರೆಯಲ್ಲಿ ಭಾಗವಹಿಸಿದ ನಂತರ ಪಾಟ್ನಾದಲ್ಲಿ ‘ಸಂವಿಧಾನ ಸುರಕ್ಷಾ ಸಮ್ಮೇಳನ’ವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಮತ್ತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ರಾಹುಲ್ ಗಾಂಧಿ ಸೋಮವಾರ ಬೇಗುಸರಾಯ್‌ನಲ್ಲಿ ನಡೆಯಲಿರುವ ‘ಪಲಾಯನ್ ರೋಕೋ, ನೌಕ್ರಿ ದೋ’ ಯಾತ್ರೆಯಲ್ಲಿ ಭಾಗವಹಿಸುವಂತೆ ಯುವಕರಿಗೆ ಮನವಿ ಮಾಡಿದ್ದಾರೆ. ಬಿಳಿ ಟಿ-ಶರ್ಟ್‌ಗಳನ್ನು ಧರಿಸಿ ಯಾತ್ರೆಯಲ್ಲಿ ಭಾಗವಹಿಸುವಂತೆ ಅವರು ಕೇಳಿಕೊಂಡಿದ್ದರು.
“ಬಿಹಾರದ ಯುವ ಸ್ನೇಹಿತರೇ, ನಾನು ಏಪ್ರಿಲ್ 7 ರಂದು ‘ಪಲಾಯನ್ ರೋಕೋ, ನೌಕ್ರಿ ದೋ’ ಮೆರವಣಿಗೆಯಲ್ಲಿ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಬೇಗುಸರಾಯ್‌ಗೆ ಬರುತ್ತಿದ್ದೇನೆ. ಉದ್ಯೋಗ ಹುಡುಕಿಕೊಂಡು ಇತರ ರಾಜ್ಯಗಳಿಗೆ ವಲಸೆ ಹೋಗಬೇಕಾದ ಬಿಹಾರದ ಯುವಕರ ದುಃಸ್ಥಿತಿಯನ್ನು ಜಗತ್ತಿಗೆ ತೋರಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
“ನೀವೂ ಬಿಳಿ ಟೀ ಶರ್ಟ್ ಧರಿಸಿ ಬನ್ನಿ, ಪ್ರಶ್ನೆಗಳನ್ನು ಕೇಳಿ ಮತ್ತು ನಿಮ್ಮ ಹಕ್ಕುಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ಅವರನ್ನು ಅಧಿಕಾರದಿಂದ ಕಿತ್ತುಹಾಕಲು ನಿಮ್ಮ ಧ್ವನಿಯನ್ನು ಎತ್ತಿ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜೊತೆಗೆ ಬಿಳಿ ಟೀ ಶರ್ಟ್ ಚಳವಳಿಗೆ ಸೇರಲು ಅವರು ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
बिहार के युवा साथियों, मैं 7 अप्रैल को बेगूसराय आ रहा हूं, पलायन रोको, नौकरी दो यात्रा में आपके साथ कंधे से कंधा मिलाकर चलने।
लक्ष्य है कि पूरी दुनिया को बिहार के युवाओं की भावना दिखे, उनका संघर्ष दिखे, उनका कष्ट दिखे।
आप भी White T-Shirt पहन कर आइए, सवाल पूछिए, आवाज़ उठाइए -… pic.twitter.com/LhVUROFCOW
— Rahul Gandhi (@RahulGandhi) April 6, 2025
ಬಿಹಾರವನ್ನು ಅವಕಾಶಗಳ ರಾಜ್ಯವನ್ನಾಗಿ ಮಾಡುವಂತೆ ಅವರು ಇದೇ ವೇಳೆ ಯುವಕರಿಗೆ ಮನವಿ ಮಾಡಿದ್ದಾರೆ.
ಇದರ ನಂತರ ರಾಹುಲ್ ಗಾಂಧಿ ಅವರು ರಾಜ್ಯದ ರಾಜಧಾನಿಯಲ್ಲಿ ‘ಸಂವಿಧಾನ ಉಳಿಸಿ ಸಮ್ಮೇಳನ’ ಮತ್ತು ಕಾರ್ಯಕರ್ತ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ವಲಸೆ ಮತ್ತು ನಿರುದ್ಯೋಗವನ್ನು ಎತ್ತಿ ತೋರಿಸಲು ಮಾರ್ಚ್ 16 ರಂದು ಪಶ್ಚಿಮ ಚಂಪಾರಣ್ ಜಿಲ್ಲೆಯ ಮಹಾತ್ಮ ಗಾಂಧಿಯವರ ಭಿತಿಹರ್ವ ಆಶ್ರಮದಿಂದ ಕಾಂಗ್ರೆಸ್ ‘ಪಳಯನ್ ರೋಕೊ, ನೌಕ್ರಿ ದೋ’ ಮೆರವಣಿಗೆಯನ್ನು ಪ್ರಾರಂಭಿಸಿತು. ಕನ್ಹಯ್ಯಾ ಅವರನ್ನು ಬಿಹಾರ ರಾಜಕೀಯದ ಮುನ್ನಲೆಗೆ ತರುವ ಮೂಲಕ, ಕಾಂಗ್ರೆಸ್ ಪಕ್ಷವೂ ಲಾಲು ಪ್ರಸಾದ್ ನೇತೃತ್ವದ ತನ್ನ ಮಿತ್ರ ಪಕ್ಷವಾದ ಆರ್‌ಜೆಡಿಯ ನೆರಳಿನಿಂದ ಹೊರಬರಲು ಪ್ರಯತ್ನಿಸುತ್ತಿದೆ.
ವಾಸ್ತವವಾಗಿ ಕಾಂಗ್ರೆಸ್ ಇಬಿಸಿ ಮತ್ತು ದಲಿತರನ್ನು ತಲುಪಲು ಪ್ರಯತ್ನಿಸುತ್ತಿದೆ ಎಂದು ವರದಿಗಳು ಸೂಚಿಸಿವೆ. ಅದರಲ್ಲೂ ‘ಸಂವಿಧಾನ ಸುರಕ್ಷಾ ಸಮ್ಮೇಳನ’ದ ಮೂಲಕ ಮುಸ್ಲಿಮರನ್ನು ತಲುಪಲು ಪ್ರಯತ್ನಿಸುತ್ತಿದೆಯಾದರೂ, ಪಕ್ಷದ ಮುಖ್ಯ ಗಮನವು ಇಬಿಸಿಗಳ ಮೇಲೆಯಾಗಿದೆ. ರಾಜ್ಯದ ಜನಸಂಖ್ಯೆಯ ಸುಮಾರು 36.1% ರಷ್ಟು ಇಬಿಸಿಗಳಿದ್ದಾರೆ. ಪಕ್ಷದೊಳಗೆ ಇಬಿಸಿ ಸಮುದಾಯಗಳಿಂದ ಹೆಚ್ಚಿನ ನಾಯಕರನ್ನು ಉತ್ತೇಜಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೆ ಕಾಂಗ್ರೆಸ್ ತನ್ನ ಜಿಲ್ಲಾ ಘಟಕಗಳನ್ನು ಪರಿಷ್ಕರಿಸಿತ್ತು. “ಜಾತಿ ಸಂಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಜಿಲ್ಲಾ ಮುಖ್ಯಸ್ಥರ ಆಯ್ಕೆಯನ್ನು ಮಾಡಲಾಯಿತು” ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಕ್ಫ್ ಮಸೂದೆ ಕುರಿತು ಚರ್ಚೆಗೆ ಅವಕಾಶ ನಿರಾಕರಣೆ: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ
ವಕ್ಫ್ ಮಸೂದೆ ಕುರಿತು ಚರ್ಚೆಗೆ ಅವಕಾಶ ನಿರಾಕರಣೆ: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ

