ಮುಂಬೈ: ಹಿಂದೂಗಳ ಹಬ್ಬವಾದ ರಾಮನವಮಿಯನ್ನು ಆಚರಿಸುವ ಸಲುವಾಗಿ ಇಲ್ಲಿ ನಡೆದ ಮೆರವಣಿಗೆಯ ಸಂದರ್ಭದಲ್ಲಿ ದ್ವೇಷ ಭಾಷಣ, ಪ್ರಚೋದನಕಾರಿ ಮತ್ತು ಅಶ್ಲೀಲ ಘೋಷಣೆಗಳನ್ನು ಕೂಗುವುದು ಮತ್ತು ಅಶ್ಲೀಲ ಹಾಡುಗಳನ್ನು ಹಾಡುವುದು ನಡೆದಿದೆ. ಸಾರ್ವಜನಿಕ ಹಬ್ಬಗಳಲ್ಲಿ ಮುಸ್ಲಿಮರ ಮೇಲಿನ ಅಶ್ಲೀಲತೆ ಮತ್ತು ದ್ವೇಷವು ಹೊಸ ಕಳವಳಗಳನ್ನು ಹುಟ್ಟುಹಾಕಿದೆ.
ಖ್ಯಾತ ಸ್ವತಂತ್ರ ಪತ್ರಕರ್ತ ಕುನಾಲ್ ಪುರೋಹಿತ್ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಮೆರವಣಿಗೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆದರು ಮತ್ತು ಈ ಸಂದರ್ಭ ಪ್ರದರ್ಶಿಸಲಾದ ರೌಡಿಸಂನ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಮೊಘಲ್ ದೊರೆ ಔರಂಗಜೇಬನ ವಿರುದ್ಧ ನಿಂದನೀಯ ಘೋಷಣೆಗಳನ್ನು ಕೂಗಿದರು ಮತ್ತು ಮುಸ್ಲಿಮರ ವಿರುದ್ಧ ಕ್ರೂರ ಹಿಂಸೆ ನಡೆಸುವ ಬೆದರಿಕೆ ಹಾಕುವ ಅಶ್ಲೀಲ ಹಾಡುಗಳನ್ನು ಹಾಡಿದರು ಎಂದು ಅವರು ವರದಿ ಮಾಡಿದ್ದಾರೆ.
ಈ ಮೆರವಣಿಗೆ ಸಂದರ್ಭದಲ್ಲಿ ಪ್ರತಿ ನಿಮಿಷಗಳಿಗೊಮ್ಮೆ, ಒಬ್ಬ ವ್ಯಕ್ತಿ ಬಂದು “ನಿಮಗೆ ಅಫ್ಜಲ್ ಖಾನ್ ಬೇಕಾದರೆ, ಅವನನ್ನು ಪಾಕಿಸ್ತಾನಕ್ಕೆ ಕಳುಹಿಸಿ,” ಔರಂಗಜೇಬನ ಸಮಾಧಿ ಖಾಲಿಯಾಗಿದೆ, ನೀವು ಮೂರ್ಖರು, ನೀವು ಮೂರ್ಖರು,”ಮುಂತಾದ ಘೋಷಣೆಗಳೊಂದಿಗೆ ಜನಸಮೂಹವನ್ನು ಹುರಿದುಂಬಿಸುತ್ತಿದ್ದನು ಎಂದು ಪುರೋಹಿತ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
Spent a few hours in #RamNavami processions outside Mumbai's International Airport:
*Slogans like 'Aurangzeb Ki Kabr Khudegi, Maa Ch*degi, Maa Ch*degi'.
*Songs with words: Bharat Mein Jo Desh Drohi Hai, Unki Ma Ka Bh*sda.
*Songs that threaten brutal violence against Muslims. pic.twitter.com/3AnpzlTdtQ— Kunal Purohit (@kunalpurohit) April 7, 2025
ಈ ಮೆರವಣಿಗೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ನಾನು ಅಲ್ಲಿ ಇದ್ದ ಸಮಯದಲ್ಲಿ ಈ ಪುಂಡರನ್ನು ನಿಯಂತ್ರಿಸಲು ಯಾವುದೇ ಪ್ರಯತ್ನವನ್ನು ನಾನು ನೋಡಲಿಲ್ಲ. ಸಾವಿರಾರು ಸಂಖ್ಯೆಯಲ್ಲಿದ್ದ ಜನಸಮೂಹದ್ದಲ್ಲಿ 20 ಮತ್ತು 30ರ ಹರೆಯದ ಯುವಕರನ್ನು ಸಾಕಷ್ಟು ಸಂಖ್ಯೆಯಲ್ಲಿ ಒಳಗೊಂಡಿತ್ತು. ಕೆಲವು ಮಹಿಳೆಯರು ಮತ್ತು ಕೆಲವು ವೃದ್ಧರನ್ನು ಸಹ ಒಳಗೊಂಡಿತ್ತು. ಅಶ್ಲೀಲತೆಯನ್ನು ಒಳಗೊಂಡ ಈ ಹಾಡುಗಳು ಎಷ್ಟು ವ್ಯಾಪಕವಾಗಿ ಹರಡಿದವೆಂದರೆ, ಹೆಚ್ಚಿನವರು ನಿಖರವಾದ ಲಯಗಳಿಗೆ ನೃತ್ಯ ಮಾಡುತ್ತಾ ಹಾಡುತ್ತಿದ್ದರು. ಪ್ರತಿ ಬಾರಿ ಒಂದು ಹಾಡು ಮುಸ್ಲಿಮರನ್ನು ಗುರಿಯಾಗಿಸಿಕೊಂಡಾಗಲೆಲ್ಲಾ ಉದ್ವೇಗ ಹೆಚ್ಚಾಗುತ್ತಿತ್ತು ಎಂದು ಪುರೋಹಿತ್ ಹೇಳಿದ್ದಾರೆ.
ಮೆರವಣಿಗೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆಯೇ ಕಾಣುವ ವ್ಯಕ್ತಿಯೂ ಇದ್ದರು, ಯೋಗಿಯ ಪ್ರೇರಣೆಯನ್ನು ಸೂಚಿಸುತ್ತಿದ್ದರು. ಕಾರಿನ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿ ಗ್ಯಾಲರಿಗೆ ಉತ್ಸಾಹದಿಂದ ಕೈ ಬೀಸುತ್ತಾ ಹಾಡಿದರು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸೂಚಿಸುವ ಪ್ರಚೋದನಕಾರಿ ಘೋಷಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದವು, ಈ ಪುಂಡರನ್ನು ಬಂಧಿಸಬೇಕೆಂದು ಜನರು ಒತ್ತಾಯಿಸಿದರು.
ಪೊಲೀಸರು ಹಾಸ್ಯನಟರನ್ನು ಬೆನ್ನಟ್ಟುವ ಬದಲು ನೀವು ಇಂತಹ ವ್ಯಕ್ತಿಗಳನ್ನು ಬಂಧಿಸಬೇಕು. ಇದು ನಿಜಕ್ಕೂ ದೊಡ್ಡ ತಮಾಷೆ,” ಎಂದು ಪತ್ರಕರ್ತ ಪಾಲ್ವಿ ಮಿತ್ತಲ್ ಹೇಳುತ್ತಾರೆ.
This is India’s new demographic that has taken Hinduism to a new low. Just close your eyes and remember what the day of Ram Navami meant to you. For me, it meant a wonderful festivity and a shining day of yellow — turmeric rice and Narcissus.
These thugs remember Aurangzeb more… https://t.co/kFQFU0zIBI— Rahul Pandita (@rahulpandita) April 7, 2025
ಹಿಂದೂ ಧರ್ಮವನ್ನು ಅತ್ಯಂತ ಕೆಳಮಟ್ಟಕ್ಕೆ ಕೊಂಡೊಯ್ದ ಕೀರ್ತೀ ಇಂತಹ ಪುಂಡರಿಗೆ ಸಲ್ಲುತ್ತದೆ. ಒಮ್ಮೆ ಕಣ್ಣು ಮುಚ್ಚಿ ರಾಮನವಮಿಯ ದಿನಗಳಂದು ಈ ಹಿಂದೆ ನೀವು ಹೇಗೆ ಆಚರಿಸುತ್ತಿದ್ದೀರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ನನಗೆ, ಅದು ಅದ್ಭುತವಾದ ಹಬ್ಬ. ಈ ಗೂಂಡಾಗಳು ರಾಮನಿಗಿಂತ ಔರಂಗಜೇಬನನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ” ಎಂದು ಲೇಖಕ ರಾಹುಲ್ ಪಂಡಿತ ನೆನಪಿಸಿದರು.
ಮುಸ್ಲಿಮರು ಶಾಂತಿಯುತವಾಗಿ ಪ್ರಾರ್ಥಿಸಲು ಮತ್ತು ಪ್ರತಿಭಟಿಸಲು ಅವಕಾಶವಿಲ್ಲ ಆದರೆ ಹಿಂದೂತ್ವ ಗುಂಪುಗಳಿಗೆ ನಿಂದನೀಯ ಘೋಷಣೆಗಳನ್ನು ಪಠಿಸಲು ಮುಕ್ತ ಹಸ್ತವನ್ನು ನೀಡಲಾಗಿದೆ ಎಂದು ಪ್ರಮುಖ ಪತ್ರಕರ್ತೆ ರಾಣಾ ಅಯ್ಯೂಬ್ ಹೇಳಿದರು.
“ಮುಸ್ಲಿಮರು ಶಾಂತಿಯುತವಾಗಿ ಪ್ರತಿಭಟಿಸಬಾರದು, ಅವರು ಪ್ರಾರ್ಥಿಸಬಾರದು, ಅವರನ್ನು ಬೆದರಿಸಲಾಗುತ್ತದೆ, ಸಾಧ್ಯವಿರುವ ಎಲ್ಲಾ ನೆಪಗಳನ್ನು ನೀಡಿ ಜೈಲಿಗೆ ಹಾಕಲಾಗುತ್ತದೆ. ಈ ಮಧ್ಯೆ ಬಲಪಂಥೀಯರು ಬೀದಿಗಳಲ್ಲಿ ದ್ವೇಷದ ಘೋಷಣೆಗಳನ್ನು ಕೂಗಬಹುದು ಮತ್ತು ಮಸೀದಿಗಳ ಮೇಲೆ ಹತ್ತಬಹುದು ಮತ್ತು ಇದನ್ನು ತಡೆಯಲು ಯಾವುದೇ ಕಾನೂನು ಇರುವುದಿಲ್ಲ. ನಮ್ಮ ಹಿತೈಷಿಗಳು ಕೂಡ ಮೌನವಾಗಿರಬೇಕು” ಎಂದು ಅವರು ಹೇಳಿದರು.


