ಹೈದರಾಬಾದ್‌ನ ದಿಲ್‌ಸುಖ್‌ನಗರ ಅವಳಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಗಳಾದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಐವರು ಸದಸ್ಯರಿಗೆ ಎನ್‌ಐಎ ನ್ಯಾಯಾಲಯ 2016ರಲ್ಲಿ ವಿಧಿಸಿದ್ದ ಮರಣದಂಡನೆಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ (ಏಪ್ರಿಲ್ 8) ಎತ್ತಿಹಿಡಿದಿದೆ.
2013ರಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ 18 ಜನರ ಸಾವಿಗೀಡಾಗಿದ್ದರು ಮತ್ತು 121 ಜನರು ಗಾಯಗೊಂಡಿದ್ದರು.
ನ್ಯಾಯಮೂರ್ತಿಗಳಾದ ಕೆ. ಲಕ್ಷ್ಮಣ್ ಮತ್ತು ಪಿ. ಶ್ರೀ ಸುಧಾ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸೆಷನ್ಸ್ ನ್ಯಾಯಾಧೀಶರು ಮರಣದಂಡನೆಯನ್ನು ದೃಢಪಡಿಸುವಂತೆ ಮಾಡಿದ ಉಲ್ಲೇಖದ ಮೇರೆಗೆ ಮತ್ತು ಆರೋಪಿಗಳಾದ ಅಸದುಲ್ಲಾ ಅಖ್ತರ್ ಹದ್ದಿ ತಬ್ರೆಜ್ ಡ್ಯಾನಿಯಲ್ ಅಸಾದ್, ಜಿಯಾ ಉರ್ ರೆಹಮಾನ್, ಮೊಹಮ್ಮದ್ ತಹ್ಸೀನ್ ಅಖ್ತರ್ ಹಸನ್, ಮೊಹಮ್ಮದ್ ಅಹ್ಮದ್ ಸಿದ್ದಿಬಾಪ ಅಲಿಯಾಸ್ ಯಾಸಿನ್ ಭಟ್ಕಳ್ ಮತ್ತು ಅಜಾಜ್ ಶೇಖ್ ಸಮರ್ ಅರ್ಮಾನ್ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ.
ಎನ್‌ಐಎ ಆರೋಪಪಟ್ಟಿಯ ಪ್ರಕಾರ 6 ಜನರನ್ನು ಬಾಂಬ್ ಸ್ಪೋಟದ ಹೊಣೆಗಾರರನ್ನಾಗಿ ಮಾಡಲಾಗಿದ್ದರೂ, ಸ್ಪೋಟದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾದ ರಿಯಾಜ್ ಭಟ್ಕಳ್ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಹೀಗಾಗಿ, ಬಂಧನದಲ್ಲಿರುವ ಐವರು ಆರೋಪಿಗಳ ವಿರುದ್ಧ ಮಾತ್ರ ವಿಚಾರಣೆ ನಡೆಸಲಾಗಿದೆ.
“ಬಾಂಬ್ ಸ್ಫೋಟಗಳನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಯೋಜಿಸಿತ್ತು ಮತ್ತು ಭಾರತದ ವಿರುದ್ಧ ಯುದ್ಧ ನಡೆಸಲು ಉನ್ನತ ಮಟ್ಟದ ಪಿತೂರಿ ನಡೆಸಲಾಗಿತ್ತು. ಆ ಪಿತೂರಿಯ ಪ್ರಕಾರ ಜನರ ಮನಸ್ಸಿನಲ್ಲಿ ಭಯ ಸೃಷ್ಟಿಸಲು ಹೈದರಾಬಾದ್‌ನಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಲು ಅಪರಾಧಿಗಳು ನಿರ್ಧರಿಸಿದ್ದರು” ಎನ್‌ಐಎ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾಗಿ ಲೈವ್ ಲಾ ವರದಿ ಮಾಡಿದೆ.
ಫೆಬ್ರವರಿ 21,2013ರಂದು ಸಂಜೆ 7 ಗಂಟೆ ಸುಮಾರಿಗೆ ಹೈದರಾಬಾದ್‌ನ ದಿಲ್‌ಸುಖ್‌ನಗರ ಮಾರುಕಟ್ಟೆಯಲ್ಲಿ ಅವಳಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಘಟನೆಯಲ್ಲಿ ತಾಯಿಯ ಗರ್ಭದಲ್ಲಿದ್ದ ಒಂದು ಮಗು ಸೇರಿದಂತೆ 18 ಜನರು ಸಾವಿಗೀಡಾಗಿದ್ದರು ಮತ್ತು 131 ಜನರು ಗಾಯಗೊಂಡಿದ್ದರು. ಮೊದಲ ಸ್ಫೋಟ ಸಂಜೆ 7 ಗಂಟೆ ಸುಮಾರಿಗೆ ದಿಲ್‌ಸುಖ್‌ನಗರದ 107 ಬಸ್ ನಿಲ್ದಾಣದ ಬಳಿ ಸಂಭವಿಸಿತ್ತು. ಇದಾಗಿ, ಕೆಲವು ಸೆಕೆಂಡುಗಳ ನಂತರ ಎರಡನೇ ಸ್ಫೋಟ ದಿಲ್‌ಸುಖ್‌ನಗರದ ಎ -1 ಮಿರ್ಚಿ ಸೆಂಟರ್ ಅಂಗಡಿಯ ಬಳಿ ಸಂಭವಿಸಿತ್ತು.
ಈ ಕುರಿತ ತನಿಖೆಯಲ್ಲಿ ಬಾಂಬ್ ಸ್ಫೋಟಗಳು ಮತ್ತು ಆರೋಪಿಗಳ ನಡುವೆ ಸಂಪರ್ಕವಿದೆ ಎಂದು ಅಧಿಕಾರಿಗಳು ಹೇಳಿದ್ದರು. ಹೆಚ್ಚುವರಿಯಾಗಿ, ತನಿಖಾಧಿಕಾರಿಗಳು ಅಮೋನಿಯಂ ನೈಟ್ರೇಟ್, ಡಯೋಡ್‌ಗಳು, ಸಂಪರ್ಕಿತ ತಂತಿಗಳು, ಟೈಮರ್‌ಗಳು, ಬ್ಯಾಟರಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಇವುಗಳನ್ನು ಬಳಸಿ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆ ಇತ್ತು ಎಂದಿದ್ದರು.
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಮದರಸಾ ಶಿಕ್ಷಕನಿಗೆ 187 ವರ್ಷಗಳ ಜೈಲು ಶಿಕ್ಷೆ


