ಹಿಂದೆಂದೂ ಕಂಡರಿಯದ ‘ಮೋಸ’ದ ಮೂಲಕ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದು, ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕೆಂದು ತೀವ್ರವಾಗಿ ವಾದ ಮಂಡಿಸಿದ್ದಾರೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಎಐಸಿಸಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮೋದಿ ಸರ್ಕಾರವು ತನ್ನ ಆಪ್ತ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಆಸ್ತಿಗಳನ್ನು ‘ಮಾರಾಟ’ ಮಾಡುತ್ತಿದ್ದು, ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊನೆಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ಇಡೀ ಜಗತ್ತು ಇವಿಎಂಗಳಿಂದ ಬ್ಯಾಲೆಟ್ ಪೇಪರ್‌ಗೆ ಬದಲಾಗುತ್ತಿದೆ. ಆದರೆ ನಾವು ಇವಿಎಂಗಳನ್ನು ಬಳಸುತ್ತಿದ್ದೇವೆ. ಇದೆಲ್ಲವೂ ವಂಚನೆ. ಅವರು ಅದನ್ನು ಸಾಬೀತುಪಡಿಸಲು ನಮ್ಮನ್ನು ಕೇಳುತ್ತಾರೆ. ನೀವು ಆಡಳಿತ ಪಕ್ಷಕ್ಕೆ ಪ್ರಯೋಜನಕಾರಿಯಾಗುವ ಮತ್ತು ವಿರೋಧ ಪಕ್ಷವನ್ನು ಅನಾನುಕೂಲಕ್ಕೆ ಒಳಪಡಿಸುವ ತಂತ್ರಗಳನ್ನು ರೂಪಿಸಿದ್ದೀರಿ” ಎಂದು ಖರ್ಗೆ ಹೇಳಿದ್ದಾರೆ.
ಅದಾಗ್ಯೂ, ಈ ದೇಶದ ಯುವಕರು ಧ್ವನಿಯೆತ್ತಿ ‘ನಮಗೆ ಬ್ಯಾಲೆಟ್ ಪೇಪರ್ ಬೇಕು ಎಂದು ಹೇಳುತ್ತಾರೆ’ ಎಂದು ಅವರು ಸಬರಮತಿ ನದಿಯ ದಡದಲ್ಲಿ ನಡೆಯುತ್ತಿರುವ ಪಕ್ಷದ ಅಧಿವೇಶನದ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದಾರೆ.
“ಮಹಾರಾಷ್ಟ್ರದಲ್ಲಿ ಏನಾಯಿತು. ಈ ಬಗ್ಗೆ ನಾವು ಎಲ್ಲೆಡೆ ಈ ಧ್ವನಿ ಎತ್ತಿದ್ದೇವೆ. ರಾಹುಲ್ ಗಾಂಧಿ ಈ ವಿಷಯವನ್ನು ತೀವ್ರವಾಗಿ ಎತ್ತಿದ್ದೇವೆ. ಅವರು ಯಾವ ರೀತಿಯ ಮತದಾರರ ಪಟ್ಟಿಯನ್ನು ಮಾಡಿದ್ದಾರೆ? ಮಹಾರಾಷ್ಟ್ರ ಚುನಾವಣೆ ವಂಚನೆಯಾಗಿದ್ದು, ಹರಿಯಾಣದಲ್ಲೂ ಅದೇ ಸಂಭವಿಸಿದೆ” ಎಂದು ಖರ್ಗೆ ಹೇಳಿದ್ದಾರೆ.
पूरी दुनिया के विकसित देश EVM को छोड़कर बैलेट पेपर की तरफ चले गए हैं।
दुनिया में तमाम देश EVM का इस्तेमाल नहीं कर रहे हैं, लेकिन हम EVM पर निर्भर हैं।
ये सब फ्रॉड है।
सरकार ने ऐसे तरीके ईजाद कर लिए हैं, जिससे सिर्फ उन्हें ही फायदा मिल रहा है, लेकिन आने वाले समय में देश के… pic.twitter.com/wwlfib0w0o
— Congress (@INCIndia) April 9, 2025
ಬಿಜೆಪಿ 90% ರಷ್ಟು ಸ್ಥಾನಗಳನ್ನು ಗೆದ್ದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಇದು ಹಿಂದೆಂದೂ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. “ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದಂತಹ ವಂಚನೆ ಪ್ರಜಾಪ್ರಭುತ್ವವನ್ನು ನಾಶಮಾಡುವ ಗುರಿಯನ್ನು ಹೊಂದಿದೆ. ನಾವು ಅನ್ನು ಕಂಡುಹಿಡಿಯಲಿದ್ದು, ಕಳ್ಳ ಯಾವತ್ತಿದ್ದರೂ ಸಿಕ್ಕಿಬೀಳುತ್ತಾನೆ. ನಮ್ಮ ವಕೀಲರು ಮತ್ತು ನಾಯಕರು ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಕಳೆದ 11 ವರ್ಷಗಳಲ್ಲಿ ಆಡಳಿತ ಪಕ್ಷವು ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ, ಸರ್ಕಾರವು ಸಂಸತ್ತಿನ ಬಜೆಟ್ ಅಧಿವೇಶನವನ್ನು ತಮ್ಮ ಇಚ್ಛೆಯಂತೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ. “ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳ ಮೇಲೆ ದಾಳಿ ನಡೆಯುತ್ತಿದ್ದು, ಅವುಗಳನ್ನು ರಕ್ಷಿಸಲು ನಾವು ಹೋರಾಡಬೇಕಾಗಿದೆ” ಎಂದು ಖರ್ಗೆ ಹೇಳಿದ್ದಾರೆ.
“ಸ್ಪೀಕರ್ ಪ್ರತಿಪಕ್ಷ ನಾಯಕನ ಹೆಸರನ್ನು ಉಲ್ಲೇಖಿಸುತ್ತಾರೆ, ಆದರೆ ಅವರನ್ನು ಮಾತನಾಡಲು ಬಿಡಲಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ನಾಚಿಕೆಗೇಡಿನ ಸಂಗತಿ. ಪ್ರತಿಪಕ್ಷ ನಾಯಕರನ್ನು ಮಾತನಾಡಲು ಬಿಡದ ನೀವು ಜನರು ಧ್ವನಿ ಎತ್ತಲು ಹೇಗೆ ಬಿಡುತ್ತೀರಿ” ಎಂದು ಖರ್ಗೆ ಹೇಳಿದ್ದಾರೆ. ಜನರ ಸಮಸ್ಯೆಗಳನ್ನು ಚರ್ಚಿಸುವ ಬದಲು, ಸರ್ಕಾರವು ತನ್ನ ಕೋಮು ಧ್ರುವೀಕರಣದ ಕಾರ್ಯಸೂಚಿಗಾಗಿ ತಡರಾತ್ರಿಯವರೆಗೆ ಚರ್ಚೆ ನಡೆಸಿತು ಎಂದು ವಕ್ಫ್ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಯನ್ನು ಉಲ್ಲೇಖಿಸಿ ಖರ್ಗೆ ಹೇಳಿದ್ದಾರೆ.
ಮಣಿಪುರದ ಕುರಿತು ಚರ್ಚೆ ಬೆಳಿಗ್ಗೆ 4 ಗಂಟೆಗೆ ನಡೆಯಿತು ಮತ್ತು ಮರುದಿನ ಅದನ್ನು ನಡೆಸಬೇಕೆಂದು ತಾವು ವಿನಂತಿಸಿದರು ಸರ್ಕಾರ ಅದಕ್ಕೆ ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರವು ಏನನ್ನೊ ಮರೆಮಾಡಲು ಬಯಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ. “ಪ್ರಜಾಪ್ರಭುತ್ವವನ್ನು ನಿಧಾನ-ನಿಧಾನವಾಗಿ ಮುಗಿಸಲಾಗುತ್ತಿದೆ” ಎಂದು ಖರ್ಗೆ ಆರೋಪಿಸಿದ್ದಾರೆ. ಹಿಂದೆಂದೂ ಕಂಡರಿಯದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಇದರ ಬದಲಿಗೆ ಮಾನಸಿಕ ಆಸ್ಪತ್ರೆ ಸೇರುವುದು ಉತ್ತಮ..’: ಬಿಗ್‌ಬಾಸ್ ಆಫರ್ ತಿರಸ್ಕರಿಸಿದ ಕುನಾಲ್ ಕಮ್ರಾ
‘ಇದರ ಬದಲಿಗೆ ಮಾನಸಿಕ ಆಸ್ಪತ್ರೆ ಸೇರುವುದು ಉತ್ತಮ..’: ಬಿಗ್‌ಬಾಸ್ ಆಫರ್ ತಿರಸ್ಕರಿಸಿದ ಕುನಾಲ್ ಕಮ್ರಾ

