ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್ 16 ರಂದು ಸುಪ್ರೀಂಕೋರ್ಟ್ ನಡೆಸಲಿದೆ. ದೇಶದ ಹಲವಾರು ರಾಜ್ಯಗಳಲ್ಲಿನ ಮತಾಂತರ ವಿರೋಧಿ ಕಾನೂನುಗಳ ಬಗ್ಗೆ ಕೆಲವು ಅರ್ಜಿಗಳು ಪ್ರಶ್ನಿಸಿದ್ದರೆ, ಮತ್ತೊಂದು ಅರ್ಜಿ ಬಲವಂತದ ಧಾರ್ಮಿಕ ಮತಾಂತರಗಳ ವಿರುದ್ಧ ಪರಿಹಾರ ಕೋರಿ ಸಲ್ಲಿಸಲಾಗಿದೆ.
ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಏಪ್ರಿಲ್ 16 ರಂದು ಪ್ರಕಟವಾದ ಪ್ರಕರಣದ ಪಟ್ಟಿಯಲ್ಲಿ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠದ ಮುಂದೆ ಈ ಅರ್ಜಿಗಳು ವಿಚಾರಣೆಗೆ ಬರಲಿದೆ ಎಂದು ಹೇಳಿದೆ.
ಜನವರಿ 2023 ರಲ್ಲಿ ನಡೆಸಲಾದ ವಿಚಾರಣೆಯ ಸಂದರ್ಭದಲ್ಲಿ, ಧಾರ್ಮಿಕ ಮತಾಂತರಗಳು ಗಂಭೀರ ವಿಷಯವಾಗಿದ್ದು ಅದಕ್ಕೆ ರಾಜಕೀಯ ಬಣ್ಣ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ವಂಚನೆಯ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿಯಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಸಹಾಯವನ್ನು ಸುಪ್ರಿಂಕೋರ್ಟ್ ಕೋರಿತ್ತು.
“ಬೆದರಿಕೆ, ಉಡುಗೊರೆಗಳು ಮತ್ತು ಹಣಕಾಸಿನ ನೆರವುಗಳ ಮೂಲಕ ಮೋಸ ಮಾಡುವ ಆಮಿಷ”ದ ಮೂಲಕ ಧಾರ್ಮಿಕ ಮತಾಂತರಗಳನ್ನು ತಡೆಯುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಸುಪ್ರೀಂ ಕೋರ್ಟ್ 2023 ರಲ್ಲಿ ಹಲವಾರು ರಾಜ್ಯಗಳ ಮತಾಂತರ ವಿರೋಧಿ ಕಾನೂನುಗಳನ್ನು ಪ್ರಶ್ನಿಸುವವರ ಅರ್ಜಿಗಳನ್ನು ಹೈಕೋರ್ಟ್‌ಗಳಿಂದ ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲು ಸಾಮಾನ್ಯ ಅರ್ಜಿಯನ್ನು ಸಲ್ಲಿಸುವಂತೆ ಕೇಳಿಕೊಂಡಿತ್ತು.
“ಅಲಹಾಬಾದ್ ಹೈಕೋರ್ಟ್ ಮುಂದೆ; ಮಧ್ಯಪ್ರದೇಶ ಹೈಕೋರ್ಟ್ ಮುಂದೆ ಏಳು; ಗುಜರಾತ್ ಮತ್ತು ಜಾರ್ಖಂಡ್ ಹೈಕೋರ್ಟ್‌ಗಳಲ್ಲಿ ತಲಾ ಎರಡು; ಹಿಮಾಚಲ ಪ್ರದೇಶದ ಮುಂದೆ ಮೂರು ಮತ್ತು ಕರ್ನಾಟಕ ಮತ್ತು ಉತ್ತರಾಖಂಡ್ ಹೈಕೋರ್ಟ್‌ಗಳಲ್ಲಿ ತಲಾ ಒಂದು ಸೇರಿದಂತೆ ಇಂತಹ ಕನಿಷ್ಠ ಐದು ಅರ್ಜಿಗಳು ಸಲ್ಲಿಕೆಯಾಗಿವೆ” ಎಂದು ಅದು ಹೇಳಿತ್ತು.
ಮತಾಂತರದ ಕುರಿತಾದ ತಮ್ಮ ಕಾನೂನುಗಳ ಕೆಲವು ನಿಬಂಧನೆಗಳನ್ನು ತಡೆಹಿಡಿದ ಆಯಾ ಹೈಕೋರ್ಟ್‌ಗಳ ಮಧ್ಯಂತರ ಆದೇಶಗಳನ್ನು ಪ್ರಶ್ನಿಸಿ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ.
ಜಮಿಯತ್ ಉಲಮಾ-ಐ-ಹಿಂದ್ ಸಂಘಟನೆಯು ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮತಾಂತರ ವಿರೋಧಿ ಕಾನೂನುಗಳ ವಿರುದ್ಧವೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು ಮತ್ತು ಅಂತರ್ಧರ್ಮೀಯ ದಂಪತಿಗಳಿಗೆ “ಕಿರುಕುಳ” ನೀಡಲು ಮತ್ತು ಅವರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಲು ಅವುಗಳನ್ನು ಜಾರಿಗೆ ತರಲಾಗಿದೆ ಎಂದು ವಾದಿಸಿತ್ತು.
ಐದು ರಾಜ್ಯಗಳ ಎಲ್ಲಾ ಸ್ಥಳೀಯ ಕಾನೂನುಗಳ ನಿಬಂಧನೆಗಳು ವ್ಯಕ್ತಿಯೊಬ್ಬ ತನ್ನ ನಂಬಿಕೆಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸುತ್ತವೆ ಮತ್ತು ಈ ಮೂಲಕ ಅವರ ಗೌಪ್ಯತೆಯ ಉಲ್ಲಂಘನೆ ಮಾಡುತ್ತದೆ ಎಂದು ಜಮಿಯತ್ ಉಲಮಾ-ಐ-ಹಿಂದ್ ಹೇಳಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಾಂಗ್ಲಾದೇಶ| ಶೇಖ್ ಹಸೀನಾ ಸೇರಿದಂತೆ 19 ಜನರ ವಿರುದ್ಧ ಬಂಧನ ವಾರಂಟ್

