ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ (ತಿದ್ದುಪಡಿ) ಕಾಯ್ದೆ-2025 ವಿರೋಧಿಸಿ ಮಂಗಳೂರಿನಲ್ಲಿ ಏಪ್ರಿಲ್ 18ರ ಶುಕ್ರವಾರದಂದು ಬೃಹತ್ ಪ್ರತಿಭಟನೆಗೆ ರಾಜ್ಯದ ಧಾರ್ಮಿಕ ಸಂಘಟನೆಗಳ ಒಕ್ಕೂಟ ಮುಂದಾಗಿದೆ. ಈ ಹಿಂದೆ ಎನ್‌ಆರ್‌ಸಿ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿದ್ದ ಬೆಂಗಳೂರು – ಮಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಅಡ್ಯಾರ್ ಎನ್‌ಆರ್‌ಸಿ ಮೈದಾನದಲ್ಲಿ ಈ ಪ್ರತಿಭಟನೆಗೆ ಸಿದ್ದತೆ ಪ್ರಾರಂಭವಾಗಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಸುನ್ನಿ ಧಾರ್ಮಿಕ ಸಂಘಟನೆಗಳ ಒಕ್ಕೂಟವಾದ ‘ಕರ್ನಾಟಕ ಉಲಮಾ ಒಕ್ಕೂಟ’ದ ಅಡಿಯಲ್ಲಿ ಈ ಬೃಹತ್ ಪ್ರತಿಭಟನೆ ನಡೆಯಲಿದ್ದು, ಕರಾವಳಿಯಾದ್ಯಂತ ಈ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯ ಪ್ರಾರಂಭವಾಗಿದೆ. ಏಪ್ರಿಲ್ 11ರ ಶುಕ್ರವಾರದ ಜುಮಾ ನಮಾಜಿನ ಬಳಿಕ ಎಲ್ಲಾ ಮಸೀದಿಗಳಲ್ಲಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ‘ಕರ್ನಾಟಕ ಉಲಮಾ ಒಕ್ಕೂಟ’ ಕರೆ ನೀಡಿದೆ.
ಮಂಗಳೂರು ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಶನಿವಾರ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಲಭ್ಯವಾಗಲಿದೆ ಎಂದು ಮೂಲವೊಂದು ನಾನುಗೌರಿ.ಕಾಂಗೆ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹರಿಯಾಣ| ದಲಿತ ವರನ ಮದುವೆ ಮೆರವಣಿಗೆಗೆ ಅಡ್ಡಿ; 8 ಜನರ ವಿರುದ್ಧ ಪ್ರಕರಣ ದಾಖಲು
ಹರಿಯಾಣ| ದಲಿತ ವರನ ಮದುವೆ ಮೆರವಣಿಗೆಗೆ ಅಡ್ಡಿ; 8 ಜನರ ವಿರುದ್ಧ ಪ್ರಕರಣ ದಾಖಲು

