Homeಎಕಾನಮಿಆರ್ಥಿಕ ಬೆಳವಣಿಗೆ ಕಡಿಮೆಯಾಗಿದೆ ಆದರೆ ಯಾವುದೇ ಹಿಂಜರಿತ ಇಲ್ಲ: ನಿರ್ಮಲಾ ಸೀತಾರಾಮನ್ 

ಆರ್ಥಿಕ ಬೆಳವಣಿಗೆ ಕಡಿಮೆಯಾಗಿದೆ ಆದರೆ ಯಾವುದೇ ಹಿಂಜರಿತ ಇಲ್ಲ: ನಿರ್ಮಲಾ ಸೀತಾರಾಮನ್ 

- Advertisement -
- Advertisement -

ಆರ್ಥಿಕ ಬೆಳವಣಿಗೆ ಕಡಿಮೆಯಾಗಿದೆ ಆದರೆ ಯಾವುದೇ ಹಿಂಜರಿತ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಹೇಳಿದ್ದಾರೆ.

ಬುಧವಾರ ಸಂಸತ್ತಿನಲ್ಲಿ ಮಾತನಾಡಿದ ಅವರು “ನೀವು ಆರ್ಥಿಕತೆಯನ್ನು ವಿವೇಚನೆಯಿಂದ ನೋಡುತ್ತಿದ್ದರೆ, ಬೆಳವಣಿಗೆ ಇಳಿದಿರಬಹುದು ಎಂದು ಅನಿಸುತ್ತದೆ. ಆದರೆ ಅದು ಇನ್ನೂ ಆರ್ಥಿಕ ಹಿಂಜರಿತವಲ್ಲ, ಅದು ಎಂದಿಗೂ ಆರ್ಥಿಕ ಹಿಂಜರಿತವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಹಿಂಜರಿತ ಅನಭವಿಸುತ್ತಿದೆ ಎಂಬ ಪ್ರತಿಪಕ್ಷದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು “ನಾನು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ದಾಖಲಿಸುತ್ತೇನೆ” ಎಂದಿದ್ದಾರೆ. ಜುಲೈ-ಸೆಪ್ಟೆಂಬರ್ ಅವಧಿಯ ಅಧಿಕೃತ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಅಂಕಿ-ಸಂಖ್ಯೆಗಳನ್ನು ಬಿಡುಗಡೆ ಮಾಡುವ ಕೆಲವೇ ದಿನಗಳ ಮೊದಲು ಅವರು ಹೀಗೆ ಹೇಳಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಒತ್ತಡವನ್ನು ಗುರುತಿಸಿದೆ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಅವರು ರೂ. ಕೇಂದ್ರ ಬಜೆಟ್‌ನ ಭಾಗವಾಗಿ ಸರ್ಕಾರಿ ಬ್ಯಾಂಕುಗಳ ಮರು ಬಂಡವಾಳೀಕರಣಕ್ಕಾಗಿ 70,000 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮಾಹಿತಿಯನ್ನು ಶುಕ್ರವಾರ ಸಂಜೆ ಸರ್ಕಾರ ಬಿಡುಗಡೆ ಮಾಡಲಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಜಿಡಿಪಿ ಬೆಳವಣಿಗೆಯು ಆರು ವರ್ಷಗಳಿಗಿಂತಲೂ ಕಡಿಮೆ ಅಂದರೆ ಶೇಕಡಾ 5 ರಷ್ಟಕ್ಕೆ ಕುಸಿದಿತ್ತು.

ಈ ನಡುವೆ ದೇಶದ ಅತಿದೊಡ್ಡ ಸಾಲಗಾರರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ವಿಸ್ತರಣೆ ಮತ್ತಷ್ಟು ಕುಸಿಯಲಿದ್ದು ಅಂದರೆ ಶೇಕಡಾ 4.2 ಕ್ಕೆ ಇಳಿಯಲಿದೆ ಎಂದು ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...