ಕೇಂದ್ರದ ಮೋದಿ ಸರ್ಕಾರ ಜಾರಿಗೆ ತಂದಿರುವ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ “ಧೈರ್ಯ ಮತ್ತು ತತ್ವಬದ್ಧ ನಿಲುವು” ವ್ಯಕ್ತಪಡಿಸಿದ್ದಕ್ಕಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಶನಿವಾರ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಕಗ್ಗತ್ತಲ ದಾರಿದೀಪ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮೆಹಬೂಬಾ ಮುಫ್ತಿ ಅವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ ಕೆ ಸ್ಟಾಲಿನ್ ಮತ್ತು ಕರ್ನಾಟಕದ ಸಿದ್ದರಾಮಯ್ಯ ಅವರಿಗೆ ಒಂದೇ ರೀತಿಯ ಪತ್ರಗಳನ್ನು ಬರೆದಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಅವರು, “ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಧೈರ್ಯ ಮತ್ತು ತತ್ವಬದ್ಧ ನಿಲುವಿಗೆ ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್ ಮತ್ತು ಸಿದ್ದರಾಮಯ್ಯ ಅವರಿಗೆ ನಾನು ಪತ್ರ ಬರೆದಿದ್ದೇನೆ. ಯಾವುದೇ ರೀತಿಯ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಲಾಗುತ್ತಿರುವ ಇಂದಿನ ಭಾರತದಲ್ಲಿ ಅವರ ನಿಸ್ಸಂದಿಗ್ಧ ಧ್ವನಿಗಳು ಹೆಚ್ಚಿನ ಹುಮ್ಮಸ್ಸನ್ನು ನೀಡುತ್ತವೆ” ಎಂದು ಹೇಳಿದ್ದಾರೆ
“ದೇಶದ ಏಕೈಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಜಮ್ಮು ಕಾಶ್ಮೀರದ ನಿವಾಸಿಗಳಾಗಿ, ಈ ಕರಾಳ ಮತ್ತು ಸವಾಲಿನ ಕಾಲದಲ್ಲಿ ನಿಮ್ಮ ಅಚಲ ನಿಲುವಿನಲ್ಲಿ ನಾವು ಸಾಂತ್ವನ ಮತ್ತು ಸ್ಫೂರ್ತಿಯನ್ನು ಕಂಡುಕೊಳ್ಳುತ್ತೇವೆ” ಎಂದು ಮುಫ್ತಿ ಹೇಳಿದ್ದು, ಮೂವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಕೂಡಾ ಮಾಡಿದ್ದಾರೆ.
I have written to @MamataOfficial ji, @mkstalin ji & @siddaramaiah ji expressing heartfelt gratitude for their courageous & principled stand against the Waqf Amendment Bill. In today’s India where dissent of any kind is increasingly criminalised their unequivocal voices come as a… pic.twitter.com/TVtTaboI4I
— Mehbooba Mufti (@MehboobaMufti) April 12, 2025
“ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಭಾರತವು ಬಹುತ್ವ ಮತ್ತು ವೈವಿಧ್ಯತೆಯ ಮೂಲ ಮೌಲ್ಯಗಳಿಗೆ ಬೆದರಿಕೆ ಹಾಕುತ್ತಲೆ ಬೆಳೆಯುತ್ತಿರುವ ಬಹುಸಂಖ್ಯಾತರ ಅಲೆಯನ್ನು ಎದುರಿಸುತ್ತಿದೆ. ಹೆಚ್ಚಿನ ನಾಗರಿಕರು ಈ ಕಾರ್ಯಸೂಚಿಯನ್ನು ತಿರಸ್ಕರಿಸುತ್ತಿದ್ದರೆ, ದ್ವೇಷ ಮತ್ತು ವಿಭಜನೆಯನ್ನು ಉತ್ತೇಜಿಸುವವರು ಈಗ ನಮ್ಮ ಸಂವಿಧಾನ, ಸಂಸ್ಥೆಗಳು ಮತ್ತು ಜಾತ್ಯತೀತ ಸಂರಚನೆಯನ್ನು ಗುರಿಯಾಗಿಸಿಕೊಂಡು ಅಧಿಕಾರವನ್ನು ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಅಲ್ಪಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರು, ಇತ್ತೀಚೆಗೆ ನಮ್ಮ ಧಾರ್ಮಿಕ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸುವ ಹೊಸ ವಕ್ಫ್ ಕಾನೂನುಗಳ ಅನಿಯಂತ್ರಿತ ಜಾರಿಯ ಮೂಲಕ ಹೊರೆಯನ್ನು ಹೊತ್ತಿದ್ದಾರೆ. ಸರ್ಕಾರದ ಈ ಕ್ರಮಗಳು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರವನ್ನು ವಿಭಜಿಸಿದಂತಹ ಈ ಹಿಂದಿನ ಅನ್ಯಾಯಗಳನ್ನು ಪ್ರತಿಧ್ವನಿಸುತ್ತವೆ ಮತ್ತು ಹಕ್ಕುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಮಾದರಿಯನ್ನು ಪ್ರತಿಬಿಂಬಿಸುತ್ತವೆ” ಎಂದು ಅವರು ಹೇಳಿದ್ದಾರೆ.
“ಈ ಕರಾಳ ಸಮಯದಲ್ಲಿ, ನಿಮ್ಮ ಧೈರ್ಯ ಮತ್ತು ಸ್ಪಷ್ಟತೆಯು ಅಪರೂಪದ ಭರವಸೆಯ ದಾರಿದೀಪವಾಗಿದೆ. ಕೆಲವು ತತ್ವಬದ್ಧ ಧ್ವನಿಗಳ ಜೊತೆಗೆ ನೀವು ನ್ಯಾಯಕ್ಕಾಗಿ ಮತ್ತು ಭಾರತದ ಸಮಗ್ರ ಕಲ್ಪನೆಗಾಗಿ ಎದ್ದು ನಿಂತಿದ್ದೀರಿ. ಧ್ವನಿ ಇಲ್ಲದ ಮತ್ತು ತಳಮಟ್ಟದಲ್ಲಿರುವ ಅನೇಕರ ಪರವಾಗಿ ನನ್ನ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. ಕಗ್ಗತ್ತಲ ದಾರಿದೀಪ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉತ್ತರಾಖಂಡ: ಮುಸ್ಲಿಂ ಹೆಸರು ಬದಲಾವಣೆ ಅಭಿಯಾನ: ಮೊಘಲರ ಬಗ್ಗೆ ದ್ವೇಷ, ಬ್ರಿಟಿಷರ ಬಗ್ಗೆ ಪ್ರೀತಿ?
ಉತ್ತರಾಖಂಡ: ಮುಸ್ಲಿಂ ಹೆಸರು ಬದಲಾವಣೆ ಅಭಿಯಾನ: ಮೊಘಲರ ಬಗ್ಗೆ ದ್ವೇಷ, ಬ್ರಿಟಿಷರ ಬಗ್ಗೆ ಪ್ರೀತಿ?


Names changed forcefully by invaders to be restored to original names is no crime, though our secularist crowd rules so?