ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ 30 ವರ್ಷ ಹಳೆಯ ಮದರಸಾವೊಂದನ್ನು ಶನಿವಾರದಂದು ಕೆಡವಿಹಾಕಲಾಗಿದೆ. ಬಿಡಿ ಕಾಲೋನಿಯಲ್ಲಿರುವ ಮದರಸಾವನ್ನು ಕಾನೂನು ಅನುಮತಿಯಿಲ್ಲದೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಸರಕಾರಿ ಆಡಳಿತಾಂಗವು ಆರೋಪಿಸಿ ಮದರಸಾ ಆಡಳಿತ ಮಂಡಳಿಗೆ ನೋಟಿಸ್ ನೀಡಿದ ನಂತರ ಅದನ್ನು ಕೆಡವಿ ಹಾಕಲಾಯಿತು.
ಇದು ಹೊಸದಾಗಿ ಜಾರಿಗೆ ತರಲಾದ ವಕ್ಫ್ ತಿದ್ದುಪಡಿ ಕಾಯ್ದೆಯಡಿಯಲ್ಲಿ ಪರಿಶೀಲನೆಗೆ ಒಳಪಟ್ಟ ಮೊದಲ ಮುಸ್ಲಿಂ ಒಡೆತನದ ನಿರ್ಮಾಣವಾಗಿದೆ.
ಸ್ಥಳೀಯ ಮುಸ್ಲಿಂ ನಿವಾಸಿಯೊಬ್ಬರು ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ ಅವರಿಗೆ ದೂರು ನೀಡಿದ ನಂತರ ಆಡಳಿತ ಅಧಿಕಾರಿಗಳು ನೋಟಿಸ್ ನೀಡಿದ್ದರು ಎಂದು ಭಾನುವಾರ ಇಲ್ಲಿಗೆ ಬಂದ ವರದಿಗಳು ತಿಳಿಸಿವೆ. ಶರ್ಮಾ ಅವರು ಅಧಿಕೃತ ದೂರು ದಾಖಲಿಸಿದವರಾಗಿದ್ದಾರೆ.
ಮದರಸಾ ನಿರ್ಮಿಸಿದವರು ಈ ಹಿಂದೆ ನೀಡಿದ ಸೂಚನೆಗಳನ್ನು ಪಾಲಿಸಿರಲಿಲ್ಲ; ಆದಾಗ್ಯೂ, ಕಟ್ಟುನಿಟ್ಟಿನ ಜಾರಿಯ ಎಚ್ಚರಿಕೆ ನೀಡಿದಾಗ ಮದರಸಾವನ್ನು ಸ್ವಯಂಪ್ರೇರಣೆಯಿಂದ ಕೆಡವಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
A madrasa in Madhya Pradesh’s Panna district was demolished on Saturday, becoming the first Muslim-owned structure to come under scrutiny under the newly implemented Waqf Amendment Act.
The madrasa, located in BD Colony and reportedly standing for nearly 30 years, was alleged by… pic.twitter.com/TnROW8Bjxo
— The Siasat Daily (@TheSiasatDaily) April 13, 2025
ಈ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬಹಳ ಹಿಂದಿನಿಂದಲೂ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ದೂರುಗಳ ಹೊರತಾಗಿಯೂ, ಇತ್ತೀಚಿನವರೆಗೂ ಯಾವುದೇ ನಿರ್ಣಾಯಕ ಕ್ರಮಕೈಗೊಂಡಿರಲಿಲ್ಲ ಎನ್ನಲಾಗಿದೆ.
ಈ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಆರಂಭದಲ್ಲಿ ಅನುಮತಿ ನೀಡಿತ್ತು, ಆದರೆ ಈಗ ಈ ಪ್ರದೇಶವು ಪುರಸಭೆಯ ವ್ಯಾಪ್ತಿಗೆ ಬರುತ್ತಿರುವುದರಿಂದ ಇದನ್ನು ಅನಧಿಕೃತವೆಂದು ಪರಿಗಣಿಸಲಾಗುತ್ತಿದೆ. ಇದು ದೀರ್ಘ ನ್ಯಾಯಾಲಯದ ಪ್ರಕರಣವಾಗಿರುವುದರಿಂದಾಗಿ ಈ ಹಿಂದೆ ಆಡಳಿತಾತ್ಮಕ ಕ್ರಮಕ್ಕೆ ನಿರ್ಬಂಧಿಸಿತ್ತು, ಆದರೆ ಇತ್ತೀಚಿನ ಕಾನೂನು ತಿದ್ದುಪಡಿಗಳು ಅಧಿಕಾರಿಗಳಿಗೆ ಅಂತಿಮ ಸೂಚನೆಯನ್ನು ಹೊರಡಿಸಲು ಅವಕಾಶ ಮಾಡಿಕೊಟ್ಟವು, ಇದು ಕೆಡವಲು ಕಾರಣವಾಯಿತು ಎಂದು ವರದಿಗಳು ತಿಳಿಸಿವೆ.
ವಕ್ಫ್ ತಿದ್ದುಪಡಿ ಕಾಯ್ದೆಯು ವಕ್ಫ್ ಆಸ್ತಿಗಳ ದುರುಪಯೋಗವನ್ನು ಕಡಿಮೆ ಮಾಡಲು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಹಣವನ್ನು ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಬಿಜೆಪಿ ಅಧ್ಯಕ್ಷ ಶರ್ಮಾ ಹೇಳಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆಯಲಾಗಿದೆ ಎಂದು ಮದರಸಾ ಮಾಲೀಕರು ಹೇಳಿಕೊಂಡಿದ್ದಾರೆ. ಹೊಸದಾಗಿ ಅಂಗೀಕರಿಸಲಾದ ಕಾನೂನಿನ ಅಡಿಯಲ್ಲಿ ನೇರ ಆಡಳಿತಾತ್ಮಕ ಹಸ್ತಕ್ಷೇಪವನ್ನು ತಪ್ಪಿಸುವುದಕ್ಕಾಗಿ ಮದರಸಾ ಕಟ್ಟಡವನ್ನು ತಾವೇ ಸ್ವತಃ ಬುಲ್ಡೋಜರ್ ಬಳಸಿ ಸಂಪೂರ್ಣ ಕೆಡವಿಹಾಕಲು ನಿರ್ಧರಿಸಿದ್ದಾರೆ.
ಹುಬ್ಬಳ್ಳಿ ಬಾಲಕಿ ಅಪಹರಣ, ಕೊಲೆ ಪ್ರಕರಣ | ಆರೋಪಿ ಬಿಹಾರದ ವಲಸೆ ಕಾರ್ಮಿಕ ‘ಎನ್‌ಕೌಂಟರ್’ನಲ್ಲಿ ಹತ



Hello Team
Just a request, the title for this article and the matter inside are contradicting. To catch readers attention please don’t use these short cuts..
Thanks for understanding…