ರಾಜ್ಯ ಸರ್ಕಾರದ “ಸಾರಿಗೆ ವಿರೋಧಿ ವ್ಯಾಪಾರ ನೀತಿಗಳನ್ನು” ವಿರೋಧಿಸಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಭಾಗವಾಗಿ ಸೋಮವಾರ ಮಧ್ಯರಾತ್ರಿಯಿಂದ ಆರು ಲಕ್ಷಕ್ಕೂ ಹೆಚ್ಚು ಸಾರಿಗೆ ವಾಹನಗಳು ಭಾಗಿಯಾಗಲಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಆದಾಗ್ಯೂ, ಹಾಲು, ತರಕಾರಿಗಳು ಮತ್ತು ಹಣ್ಣುಗಳಂತಹ ಅಗತ್ಯ ಸರಕುಗಳನ್ನು ಸಾಗಿಸುವ ವಾಹನಗಳು ಮತ್ತು ಇತರ ಅಗತ್ಯ ಸೇವೆಗಳ ವಾಹನಗಳು ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಎಂದು ವರದಿ ಉಲ್ಲೇಖಿಸಿದೆ.
ರಾಜ್ಯದ ಟ್ರಕ್ಕರ್‌ಗಳು, ಸಾಗಣೆದಾರರು, ಪ್ರವಾಸಿ ಟ್ಯಾಕ್ಸಿಗಳು ಮತ್ತು ಮ್ಯಾಕ್ಸಿ ಕ್ಯಾಬ್ ನಿರ್ವಾಹಕರ ಪ್ರಮುಖ ಒಕ್ಕೂಟ ಎಂದು ಹೇಳಿಕೊಳ್ಳುವ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘ (FOKSLOAA) ಈ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯದ 31 ಜಿಲ್ಲೆಯ 236 ತಾಲ್ಲೂಕು ಮಟ್ಟದ ಮತ್ತು ಸ್ಥಳೀಯ ಸಾರಿಗೆ ಸಂಘಗಳು ಈ ಸಂಘಟನೆಯೊಂದಿಗೆ ಸಂಯೋಜಿತವಾಗಿವೆ ಎಂದು ಅದು ಪ್ರತಿಪಾದಿಸಿದೆ.
ಪೆಟ್ರೋಲ್ ಪಂಪ್ ಮಾಲೀಕರು, LPG ಬಲ್ಕ್ ಆಪರೇಟರ್‌ಗಳ ಸಂಘ, ವಿಮಾನ ನಿಲ್ದಾಣ ಟ್ಯಾಕ್ಸಿ ಸಂಘಗಳು, ಚಾಲಕ ಸಂಘಗಳು ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಾರಿಗೆ ಸಂಘಗಳು ಸೇರಿದಂತೆ ವಿವಿಧ ಮಿತ್ರ ವಲಯಗಳಿಂದ ಮುಷ್ಕರಕ್ಕೆ ಬೆಂಬಲ ದೊರೆತಿದೆ ಎಂದು FOKSLOAA ತಿಳಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಆದಾಗ್ಯೂ, ಕರ್ನಾಟಕ ಲಾರಿ ಮಾಲೀಕರ ಸಂಘದ ಒಕ್ಕೂಟವು ಮುಷ್ಕರವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿ ಪ್ರತಿಭಟನೆಯಿಂದ ದೂರ ಉಳಿದಿದೆ ಎಂದು ವರದಿ ತಿಳಿಸಿದೆ.
FOKSLOAA ಒಟ್ಟು ಆರು ಬೇಡಿಕೆಗಳನ್ನು ಮುಂದಿಟ್ಟಿದ್ದು, ಇತ್ತೀಚೆಗೆ ಏರಿಕೆ ಮಾಡಿರುವ ಇಂಧನ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಮಾರಾಟ ತೆರಿಗೆಯನ್ನು ಹೆಚ್ಚಿಸಿತ್ತು. ಹಾಗಾಗಿ ರಾಜ್ಯದಲ್ಲಿ ಪೆಟ್ರೋಲ್ ಲೀಟರ್‌ಗೆ ರೂ. 3 ಮತ್ತು ಡೀಸೆಲ್ ರೂ. 3.02 ರಷ್ಟು ದುಬಾರಿಯಾಗಿದೆ.
“ಸುಲಿಗೆ ಮತ್ತು ಕಿರುಕುಳದ ಕೇಂದ್ರಗಳಾಗಿ” ಮಾರ್ಪಟ್ಟಿರುವ 18 ರಾಜ್ಯ ಟೋಲ್ ಪ್ಲಾಜಾಗಳನ್ನು ರದ್ದುಗೊಳಿಸಿ ಎಂದು FOKSLOAA ಆಗ್ರಹಿಸಿದ್ದು, ಜಿಎಸ್‌ಟಿ ನಂತರದ ಯುಗದಲ್ಲಿ “ಅನಗತ್ಯ”ವಾಗಿರುವ ಚೆಕ್ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ.
ಹಳೆಯ ವಾಹನ ಫಿಟ್‌ನೆಸ್ ನವೀಕರಣ ಶುಲ್ಕವನ್ನು ರೂ. 15,000 ವರೆಗೆ ಹೆಚ್ಚಿಸುವ ಪ್ರಸ್ತಾವಿತ ಹೆಚ್ಚಳವನ್ನು ಮರುಪರಿಶೀಲಿಸುವಂತೆ ಸಂಘವು ಒತ್ತಾಯಿಸಿದ್ದು, ಬೆಂಗಳೂರು ನಗರಕ್ಕೆ ವಾಣಿಜ್ಯ ವಾಹನಗಳಿಗೆ ಪ್ರವೇಶ ಸಮಯವನ್ನು ವಿಸ್ತರಿಸುವಂತೆ ಮತ್ತು NBFCಗಳು ಮತ್ತು ಕಿರುಬಂಡವಾಳ ಪೂರೈಕೆದಾರರಿಂದ ನೀಡಲಾಗುತ್ತಿರುವ ಕಿರುಕುಳವನ್ನು ನಿಲ್ಲಿಸುವಂತೆ ಕೇಳಿಕೊಂಡಿದೆ.
ಸಮಸ್ಯೆಯನ್ನು ಪರಿಹರಿಸದಿದ್ದರೆ ರಾಜ್ಯದಾದ್ಯಂತ ಸರಕು ಮತ್ತು ಪ್ರಯಾಣಿಕರ ಚಲನೆಗೆ ತೀವ್ರ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು FOKSLOAA ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಎಚ್ಚರಿಸಿದ್ದಾರೆ. ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಹಾಗೂ ಈ ಮೂಲಕ ಬಿಕ್ಕಟ್ಟನ್ನು ತಪ್ಪಿಸಲು ಸರ್ಕಾರ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮುಷ್ಕರದ ಭಾಗವಾಗಿ, FOKSLOAA ಸದಸ್ಯರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಅತ್ತಿಬೆಲೆ ಮತ್ತು ರಾಜ್ಯದ ಇತರ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ. ರಾಜ್ಯ ಸರ್ಕಾರದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಏಪ್ರಿಲ್ 17ರ ಸಚಿವ ಸಂಪುಟ ಚರ್ಚೆಯ ನಂತರ ಜಾತಿ ಸಮೀಕ್ಷೆ ಬಗ್ಗೆ ಮಾತನಾಡುತ್ತೇನೆ: ಸಿಎಂ ಸಿದ್ದರಾಮಯ್ಯ
ಏಪ್ರಿಲ್ 17ರ ಸಚಿವ ಸಂಪುಟ ಚರ್ಚೆಯ ನಂತರ ಜಾತಿ ಸಮೀಕ್ಷೆ ಬಗ್ಗೆ ಮಾತನಾಡುತ್ತೇನೆ: ಸಿಎಂ ಸಿದ್ದರಾಮಯ್ಯ

