‘ಮುರ್ಶಿದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರ ಪೂರ್ವ ಯೋಜಿತ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಗಲಭೆ ಪರಿಸ್ಥಿತಿಯ ಕುರಿತು ಇಮಾರುಗಳೊಂದಿಗೆ ಸಭೆ ನಡೆಸಿದ ಸಿಎಂ, “ಹಿಂಸಾಚಾರದ ಹಿಂದೆ ಟಿಎಂಸಿ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ. ಅವರು ಹೇಳಿದಂತೆ ನಮ್ಮ ಕೈವಾಡವಿದ್ದಿದ್ದರೆ ನಮ್ಮ ನಾಯಕರ ಮನೆಗಳ ಮೇಲೆ ದಾಳಿ ನಡೆಯುತ್ತಿರಲಿಲ್ಲ” ಎಂದಿದ್ದಾರೆ.
ಮುಂದುವರಿದು, “ಸಂಸತ್ತಿನ ಟಿಎಂಸಿ ವಕ್ಫ್ (ತಿದ್ದುಪಡಿ) ಮಸೂದೆ ವಿರುದ್ದ ಬಲವಾದ ನಿಲುವು ವ್ಯಕ್ತಪಡಿಸಿದೆ. ವಕ್ಫ್ (ತಿದ್ದುಪಡಿ) ಕಾಯ್ದೆ ವಿರುದ್ದದ ಹೋರಾಟದಲ್ಲಿ ಟಿಎಂಸಿ ಮುಂಚೂಣಿಯಲ್ಲಿದೆ” ಎಂದು ಹೇಳಿದ್ಧಾರೆ.
“ಮುರ್ಶಿದಾಬಾದ್ ಹಿಂಸಾಚಾರದಲ್ಲಿ ಬಾಂಗ್ಲಾದೇಶ ಭಾಗಿಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ. ಇದು ಒಂದು ವೇಳೆ ನಿಜವಾಗಿದ್ದರೆ, ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಹೊರತು ರಾಜ್ಯವಲ್ಲ. ಗಡಿ ಕಾಯುತ್ತಿರುವುದು ಬಿಎಸ್‌ಎಫ್ ಹೊರತಯ ರಾಜ್ಯ ಸರ್ಕಾರವಲ್ಲ. ಹೊರಗಡೆಯಿಂದ ಬಿಜೆಪಿಯವರು ಬಂದು ಗಲಾಟೆ ಸೃಷ್ಟಿಸಿ ಓಡಿ ಹೋಗಲು ನೀವು ಅನುವು ಮಾಡಿ ಕೊಡುವುದು ಏಕೆ?” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
“ಕೆಲವು ಗೋದಿ ಮೀಡಿಯಾಗಳು ಬಂಗಾಳದ ಕುರಿತು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಅನ್ಯಾಯವಾಗಿ ಬಂಗಾಳವನ್ನು ಗುರಿಯಾಗಿಸಿಕೊಂಡಿವೆ. ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಕೇಂದ್ರ ಸರ್ಕಾರ, ಆದರೆ ಗೋದಿ ಮೀಡಿಯಾಗಳು ಪಶ್ಚಿಮ ಬಂಗಾಳ ಮತ್ತು ನನ್ನ ವಿರುದ್ದ ಮಾತನಾಡುತ್ತಿವೆ” ಎಂದ ಮಮತಾ ಬ್ಯಾನರ್ಜಿ, “ಟೀಕೆ ಮಾಡುವವರು ಸುಳ್ಳು ಸುದ್ದಿ ಹರಡಬೇಡಿ, ನನ್ನ ಜೊತೆ ನೇರವಾಗಿ ಮಾತನಾಡಿ” ಎಂದು ಸವಾಲು ಹಾಕಿದ್ದಾರೆ.
“ಪಶ್ಚಿಮ ಬಂಗಾಳವನ್ನು ಅವಹೇಳನ ಮಾಡಲು ಬಿಜೆಪಿ ಬೆಂಬಲಿತ ಮಾಧ್ಯಮಗಳು ಸುಳ್ಳು ವಿಡಿಯೋಗಳನ್ನು ಹಂಚಿಕೊಳ್ಳುತ್ತಿವೆ. ನಾವು ಅವರನ್ನು ಪತ್ತೆ ಹೆಚ್ಚಿದ್ದೇವೆ. ಒಟ್ಟು 8 ವಿಡಿಯೋಗಳಲ್ಲಿ ಕೆಲವು ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದ್ದು. ಬಂಗಾಳದ ಹೆಸರಿಗೆ ಮಸಿ ಬಳಿಯಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು” ಎಂದು ಮಮಥಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ.
“ಉದ್ಯೋಗ ಸೃಷ್ಟಿ ಮತ್ತು ಹಣದುಬ್ಬರ ವಿಚಾರಗಳಲ್ಲಿ ಕೇಂದ್ರವನ್ನು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, “ನೀವು ಯುವಜನರಿಗೆ ಎಷ್ಟು ಉದ್ಯೋಗಗಳನ್ನು ಸೃಷ್ಠಿ ಮಾಡಿದ್ದೀರಿ ಎಂದು ಕೇಳಿದ್ದಾರೆ. ಔಷಧಿ, ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಾಗಿವೆ. ಆದರೆ, ಕೇಂದ್ರ ಸರ್ಕಾರ ಸುಳ್ಳು ನಿರೂಪಣೆ ಮೂಲಕ ಬಂಗಾಳವನ್ನು ಗುರಿಯಾಗಿಸುವುದರಲ್ಲಿ ಬ್ಯುಸಿಯಾಗಿದೆ” ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಮುರ್ಶಿದಾಬಾದ್ ಗಲಭೆಗೆ ಸಂಬಂಧಿಸಿದಂತೆ ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ “ಹಿಂದೂ ಸಮುದಾಯವನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳನ್ನು ಮಮತಾ ಸರ್ಕಾರ ಬೆಂಬಲಿಸುತ್ತಿದೆ” ಎಂದು ಆರೋಪಿಸಿತ್ತು.
ಲಡ್ಕಿ ಬಹಿನ್ ಯೋಜನೆಯ ಫಲಾನುಭವಿ 8 ಲಕ್ಷ ಮಹಿಳೆಯರಿಗೆ 1500 ರಿಂದ 500 ಗೆ ಕಡಿತಗೊಳಿಸಿದ ಮಹಾರಾಷ್ಟ್ರ ಸರ್ಕಾರ


